ಕುಸಿಯುವ ಹಂತದಲ್ಲಿದ್ದ ಮನೆಗೆ ಸ್ಥಳೀಯರಿಂದ ಕಾಯಕಲ್ಪ
Team Udayavani, Aug 8, 2017, 8:15 AM IST
ವಿಟ್ಲ : ವಿಟ್ಲ ಸಮೀಪದ ಕಾಶಿಮಠದಲ್ಲಿ ವಾಸವಿದ್ದ ಬಡಕುಟುಂಬದ ಮನೆ ಮುರಿದುಬೀಳುವ ಅಪಾಯಕಾರಿ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆ ಕುಟುಂಬಕ್ಕೆ ನೂತನ ತಾರಸಿ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.
ಕಾಶಿಮಠದಲ್ಲಿ ಈ ಕುಟುಂಬಕ್ಕೆ 8 ಸೆಂಟ್ಸ್ ಜಾಗವಿದೆ. ಪುರಂದರ ಗೌಡ, ಅವರ ಅತ್ತೆ ಮತ್ತು ನಾದಿನಿ ವಾಸವಾಗಿದ್ದಾರೆ. ಆದರೆ ಇವರ ಹೆಸರಲ್ಲಿ ಈ ಜಾಗವಿಲ್ಲ. ಪುರಂದರ ಅವರ ಸಹೋದರ ಲಕ್ಷ್ಮಣ ಗೌಡ ಅವರ ಹೆಸರಲ್ಲಿದೆ. ಇದು ಅಕ್ರಮ ಸಕ್ರಮದಲ್ಲಿ ಅವರಿಗೆ ದೊರೆತ ನಿವೇಶನ. ಆದರೆ ಲಕ್ಷ್ಮಣ ಗೌಡ ಅವರು ನಿಧನ ಹೊಂದಿದ್ದಾರೆ. ಆದುದರಿಂದ ಆ
ಜಾಗ ಪುರಂದರ ಗೌಡ ಅವರ ಹೆಸರಿಗೆ ವರ್ಗಾವಣೆಯಾಗುವುದಿಲ್ಲ. ಅದೇ ಕಾರಣಕ್ಕೆ ಸರಕಾರಿ ಸೌಲಭ್ಯವನ್ನು ಪಡೆಯಲು ಪುರಂದರ ಗೌಡ ಅವರಿಗೆ ಸಾಧ್ಯವಾಗಲಿಲ್ಲ.
ಇವರ ಮನೆ ಬೀಳುವ ಹಂತಕ್ಕೆ ತಲುಪಿತ್ತು. ಪುರಂದರ ಗೌಡ ಅವರು ಕೂಲಿ ಕಾರ್ಮಿಕರು. ಮನೆಯಲ್ಲಿರುವ ಮಹಿಳೆಯರಿಬ್ಬರೂ ಆದಾಯ ಹೆಚ್ಚಿಸುವ ಶಕ್ತಿ ಹೊಂದಿರಲಿಲ್ಲ. ಆದುದರಿಂದ ಮನೆ ನಿರ್ಮಿಸುವ ಅನುಕೂಲವಿರಲಿಲ್ಲ. ಸ್ಥಳೀಯರು ಇದನ್ನು ಗಮನಿಸಿದ್ದರು. ಆದರೆ ನೇತೃತ್ವ ವಹಿಸುವವರಿರಲಿಲ್ಲ. ವಿಟ್ಲ ಜೇಸಿಐ ನಿಕಟಪೂರ್ವ ಅಧ್ಯಕ್ಷ ಬಾಬು ಕೆ.ವಿ. ಅವರು ಇವರಿಗೆ ಮನೆ ನಿರ್ಮಿಸುವ ಕಾರ್ಯಕ್ಕೆ ಮುಂದಾದರು. ಆರ್ಲಪದವು ಸುಬ್ರಹ್ಮಣ್ಯ ಇಲೆಕ್ಟ್ರಿಕಲ್ಸ್‌ನ ಉದಯ ಕುಮಾರ್ ಅರಂಬÂ ಮತ್ತು ಹರೀಶ್ ಗೌಡ ಅರಂಬÂ ಸಹಕಾರ ನೀಡಿದರು.
ಹಳೆಯ ಮನೆಯನ್ನು ಕೆಡವಿಹಾಕಲಾಯಿತು. ಶ್ರೀ ಕಾಶೀ ಯುವಕ ಮಂಡಲವು 25,000 ರೂ.ಗಳನ್ನು ನೀಡಿತು. ವಿಶ್ವನಾಥ ಮೇಸ್ತ್ರಿ ಕಬ್ಬಿನಹಿತ್ಲು ಮತ್ತು ಹರೀಶ್ ಮೇಸ್ತ್ರಿ ಕಾಶಿಮಠ ಅವರು ಗಾರೆ ಕೆಲಸ ನಿರ್ವಹಿಸಿದರು. ವಿಶ್ವನಾಥ ಶೆಟ್ಟಿ ಕೊಪ್ಪಳ ಅವರು ಸ್ಲಾಬ್ ಕಾಮಗಾರಿ ವೇತನವನ್ನು ಪಡೆದುಕೊಳ್ಳಲೇ ಇಲ್ಲ. ಉದ್ಯಮಿ ಆರ್.ಎಸ್.ಲಕ್ಷ್ಮಣ ಮತ್ತು ಇತರರು ಧನಸಹಾಯವನ್ನೂ ವಸ್ತುರೂಪದ ಸಹಾಯವನ್ನೂ ಮಾಡಿದರು. ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ.ಅವರು ಉಳಿದ ಮೊತ್ತವನ್ನು ನೀಡಿ, ಮನೆ ನಿರ್ಮಿಸಲಾಯಿತು.
700 ಚದರ ಅಡಿ ಮನೆ ನಿರ್ಮಾಣವಾಗಿದೆ. ಅಡುಗೆಮನೆ, 2 ಬೆಡ್‌ರೂಮ್ ಮತ್ತು ಒಂದು ಹಾಲ್ ಇರುವ ಸುಂದರ ಮನೆ ಕೇವಲ 66 ದಿನಗಳಲ್ಲಿ ಪುನರ್‌ನಿರ್ಮಾಣವಾಗಿದೆ. ಆ ಬಡ ಕುಟುಂಬ ಆ ಮನೆಗೆ ಲಕ್ಷ್ಮಣ ನಿಲಯ ಎಂದು ಹೆಸರಿಸಿ, ಎಲ್ಲರ ಸಹಕಾರದೊಂದಿಗೆ ಗೃಹಪ್ರವೇಶ ನೆರವೇರಿಸಿದೆ. ಇದೀಗ ಈ ಕುಟುಂಬ ಮನೆಯೊಳಗೆ ಭದ್ರವಾಗಿದೆ. ಭಯವಿಲ್ಲದೇ ಬದುಕುವಂತಾಗಿದೆ.
– ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.