ಡ್ಯಾಡಿ ಖುಷಿಯೇ ನನ್ನ ಖುಷಿ: ಮನೋರಂಜನ್‌


Team Udayavani, Aug 8, 2017, 10:45 AM IST

Manoranjan.jpg

*ನಿಮ್ಮ ಮೊದಲ ಸಿನಿಮಾ “ಸಾಹೇಬ’ ಬಗ್ಗೆ ಹೇಳಿ?
“ಸಾಹೇಬ’ ಅಂದಾಗ ಮಾಸ್‌ ಫೀಲ್‌ ಬರುತ್ತೆ. ಖಂಡಿತಾ ಇದು ಮಾಸ್‌ ಸಿನಿಮಾ ಅಲ್ಲ. ಎಮೋಶನಲ್‌ ಜರ್ನಿ ಎನ್ನಬಹುದು. ನಾನಿಲ್ಲಿ ತುಂಬಾ ಸಾಫ್ಟ್ ಕ್ಯಾರೆಕ್ಟರ್‌ ಮಾಡಿದ್ದೇನೆ. ಎಲ್ಲರಲ್ಲೂ ಕ್ಲೋಸ್‌ ಆಗಿರುವ, ಇಂಟಲಿಜೆಂಟ್‌ ಹುಡುಗನ ಪಾತ್ರ. ರವಿಚಂದ್ರನ್‌ ಅವರ ಮಗ ಅಂದಾಗ ಬೇರೆ ತರಹದ ಇಂಟ್ರೋಡಕ್ಷನ್‌ ಇರುತ್ತೆ, ತುಂಬಾ ಲ್ಯಾವಿಶ್‌ ಆಗಿ ಬರ್ತಾನೆ ಎಂದು ಎಲ್ಲರು ಅಂದ್ಕೊಂಡಿರ್ತಾರೆ, ಆದರೆ ನಾನು, ಡ್ಯಾಡಿ ಅವೆಲ್ಲ ಬೇಡ ಎಂದು ನಿರ್ಧರಿಸಿ ಈ ತರಹದ ಪಾತ್ರ ಆಯ್ಕೆ ಮಾಡಿದ್ದೀವಿ. 

* ಮೊದಲು ಕಥೆ ಕೇಳಿದ್ದು ನೀವಾ, ನಿಮ್ಮ ಡ್ಯಾಡಿನಾ?
ಮೊದಲು ನಾನೇ ಕಥೆ ಕೇಳಿದೆ. ಅದಾದ ನಂತರ ಡ್ಯಾಡಿಗೆ ಹೇಳಿದೆ. ಕೇಳಿದ ಕೂಡಲೇ ಇಷ್ಟಪಟ್ಟು, ಮಾಡು ಅಂದರು.

* “ಸಾಹೇಬ’ ತುಂಬಾ ತಡವಾಗುತ್ತಿದೆ ಯಾಕೆ?
ಆರಂಭದಲ್ಲಿ ಮ್ಯೂಸಿಕಲ್‌ ಚೇಂಜ್‌ನಿಂದಾಗಿ ಸ್ವಲ್ಪ ತಡವಾಯಿತು. ಈಗ ಅನಿಮಲ್‌ ಸೆನ್ಸಾರ್‌ ಪ್ರಮಾಣ ಪತ್ರ ಸಿಗಬೇಕು. ಚಿತ್ರದಲ್ಲಿ ಎರಡು ಆನೆಗಳನ್ನು ಬಳಸಿದ್ದೇವೆ. ಹಾಗಾಗಿ, ಅನಿಮಲ್‌ ಬೋರ್ಡ್‌ನಿಂದ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೇವೆ. ಈ ತಿಂಗಳು ಸಿನಿಮಾ ಬಿಡುಗಡೆಯಾಗುತ್ತಿದೆ. 

* ಮೊದಲು ಆರಂಭವಾಗಿದ್ದು ನಿಮ್ಮ “ರಣಧೀರ’ ಚಿತ್ರ. ಆದರೆ, ನೀವು ಲಾಂಚ್‌ ಆಗುತ್ತಿರೋದು ಈಗ “ಸಾಹೇಬ’ ಮೂಲಕ. ಈ ಬಗ್ಗೆ ಏನಂತೀರಿ?
“ರಣಧೀರ’ ನಂತರ ಡ್ಯಾಡಿ, “ಅಪೂರ್ವ’ ಲಾಂಚ್‌ ಮಾಡಿದ್ದರಿಂದ ಸ್ವಲ್ಪ ತಡವಾಯ್ತು. ಅವರು ತುಂಬಾ ಪರ್‌ಫೆಕ್ಷನ್‌ ಬಯಸುತ್ತಾರೆ. ಅವರಿಗೆ ಇಷ್ಟ ಆಗಿಲ್ಲ ಅಂದ್ರೆ, ಅದು ಎಷ್ಟೇ ಖರ್ಚು ಮಾಡಿ ಚಿತ್ರೀಕರಣ ಮಾಡಿದ್ದರೂ ಅದನ್ನು ಪಕ್ಕಕ್ಕಿಟ್ಟು ಬೇರೇನು ಯೋಚಿಸುತ್ತಾರೆ. ನಾನು ಅವರ ಭಾವನೆಗಳನ್ನು ಗೌರವಿಸುತ್ತೇನೆ. ಅವರ ಚಿಂತನೆಯ ಹಿಂದೆ ಸಿನಿಮಾವನ್ನು ಬೇರೆ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವಿರುತ್ತದೆ. ಹಾಗಾಗಿ, “ರಣಧೀರ’ ಟೈಮ್‌ ತೆಗೆದುಕೊಳ್ಳುತ್ತಿದೆ.  ಹೀಗಿರುವಾಗ ಜಯಣ್ಣ ಅವರು ಫೋನ್‌ ಮಾಡಿ, ಹೀಗೊಂದು ಕಥೆ ಇದೆ ಎಂದರು. ಡ್ಯಾಡಿ, ಹೋಗಿ ಕೇಳು, ಯಾರೇ ಕಥೆ ಹೇಳಿದರೂ ಕೇಳಬೇಕು, ಎಲ್ಲಿ ಒಳ್ಳೆಯ ಕಥೆ ಸಿಗುತ್ತೋ ಗೊತ್ತಿಲ್ಲ ಅಂದರು. ಅದರಂತೆ ಕೇಳಿದೆ. ಕಥೆ ಇಷ್ಟವಾಯ್ತು.

* “ರಣಧೀರ’ ತಡವಾದ ಬಗ್ಗೆ ನಿಮಗೆ ಬೇಸರವಿದೆಯಾ?
ಖಂಡಿತಾ ಬೇಸರವಿಲ್ಲ. ಮೊದಲ ಸಿನಿಮಾದಲ್ಲೇ ಡ್ಯಾಡಿ ಜೊತೆ ಆ್ಯಕ್ಟ್ ಮಾಡೋದು ಭಯನೇ. ಈಗ ಎರಡೂ¾ರು ಸಿನಿಮಾ ಆದ್ಮೇಲೆ ಧೈರ್ಯವಾಗಿ ನಟಿಸಬಹುದು. ಅದಕ್ಕಿಂತ ಹೆಚ್ಚಾಗಿ “ರಣಧೀರ’ ಯಾವತ್ತು ಬೇಕಾದರೂ ಆರಂಭವಾಗಬಹುದು. ನಾಳೆ ಡ್ಯಾಡಿ ಬಂದು, “ಮೇಕಪ್‌ ಹಾಕಿಕೋ’ ಅಂದ್ರು ನಾನು ರೆಡಿ.

* ಡ್ಯಾಡಿಯಿಂದು ಏನೇನು ಕಲಿತ್ತಿದ್ದೀರಿ?
ಇವತ್ತು ಏನೇನು ಕಲಿತಿದ್ದೀನೋ ಅವೆಲ್ಲವೂ ಅವರಿಂದಲೇ. ಬಾಡಿ ಲಾಂಗ್ವೇಜ್‌ ಹೇಗಿರಬೇಕು, ಲುಕ್‌ ಹೇಗಿರಬೇಕು, ನಟನೆಯಲ್ಲಿ ನಮ್ಮ ಫೇಸ್‌ ಹೇಗೆ ಮಾತನಾಡಬೇಕು ಎಂಬುದನ್ನು ಡ್ಯಾಡಿಯಿಂದಲೇ ಕಲಿತಿದ್ದು. ಒಂದೊಂದು ಸಿನಿಮಾ ನೋಡಿದಾಗಲೂ ಡ್ಯಾಡಿ, “ನೋಡು ಆ ನಟ ಎಷ್ಟು ಚೆನ್ನಾಗಿ ನಟಿಸಿದ್ದೇನೆ’ ಎನ್ನುತ್ತಾ ಸೂಕ್ಷ್ಮವಾಗಿ ಗಮನಿಸಲು ಹೇಳುತ್ತಿದ್ದರು. ಅವೆಲ್ಲವೂ ನನಗೆ ದೊಡ್ಡ ಪ್ಲಸ್‌. 

*ನಿಮ್ಮ ಡ್ಯಾಡಿ ಅವರ ಸಿನಿಮಾ ಬಗ್ಗೆ ನಿಮ್ಮಲ್ಲೇನಾದರೂ ಮಾತನಾಡುತ್ತಾರಾ?
ಮಾತನಾಡುತ್ತಾರೆ, ನಾವು ಮನೆಯಲ್ಲಿ ಸಿನಿಮಾ ಬಿಟ್ಟು ಬೇರೇನು ಮಾತನಾಡೋದಿಲ್ಲ. ಮೊನ್ನೆ “ರಾಜೇಂದ್ರ ಪೊನ್ನಪ್ಪ’ ಎಡಿಟ್‌ ಮಾಡಿದ್ದನ್ನು ತೋರಿಸಿ, ಅದರ ಬಗ್ಗೆಯೂ ಮಾತನಾಡಿದ್ದಾರೆ. ನನಗೆ ಅಪ್ಪ ಅಂದ್ರೆ ಗೌರವ ಜಾಸ್ತಿ. ಅವರು ತುಂಬಾ ಪರ್‌ಫೆಕ್ಷನ್‌ ಬಯಸುತ್ತಾರೆ. ಜೊತೆಗೆ ಏನೇ ಆದರೂ ನೇರವಾಗಿಬೇಕು ಎನ್ನುತ್ತಾರೆ. 

* ನಿಮ್ಮ ಡ್ಯಾಡಿ “ಕುರುಕ್ಷೇತ್ರ’ದಲ್ಲಿ ಕೃಷ್ಣನಾಗಿ ನಟಿಸುತ್ತಿದ್ದಾರೆ. ನಿರೀಕ್ಷೆ ಎಷ್ಟಿದೆ?
ನಾನಂತೂ ಅವರನ್ನು ಆ ಗೆಟಪ್‌ನಲ್ಲಿ ನೋಡಲು ಕಾತುರನಾಗಿದ್ದೇನೆ. ಕ್ಲೀನ್‌ ಶೇವ್‌, ಆ ಗೆಟಪ್‌ ಡ್ಯಾಡಿ ಹೇಗೆ ಕಾಣುತ್ತಾರೆಂದು ನೋಡಬೇಕು. ಈ ಹಿಂದೆ ಇಂತಹ ಪಾತ್ರ ಅವರು ಮಾಡಿರಲಿಲ್ಲ. ಅವರು ಕೂಡಾ ಈ ಪಾತ್ರದ ಬಗ್ಗೆ ತುಂಬಾ ಎಕ್ಸೆ„ಟ್‌ ಆಗಿದ್ದಾರೆ. ಅದಕ್ಕಾಗಿ ತಯಾರಾಗುತ್ತಿದ್ದಾರೆ.

* ನಿಮ್ಮ ತಮ್ಮ ವಿಕ್ರಮ್‌ ಕೂಡಾ ಹೀರೋ ಆಗಿದ್ದಾರೆ?
ಅವನು ಬಾರ್ನ್ ಆ್ಯಕ್ಟರ್‌. ಚಿಕ್ಕ ವಯಸ್ಸಿನಲ್ಲೇ ಡ್ಯಾನ್ಸ್‌, ಫೈಟ್‌ ಮಾಡುತ್ತಿದ್ದ. ಟೆಕ್ನಿಕಲಿ ತುಂಬಾ ಸ್ಟ್ರಾಂಗ್‌ ಇದ್ದಾನೆ. ಈಗ ಆತ ಪರ್‌ಫಾರ್ಮೆನ್ಸ್‌ ಮಾಡಬೇಕು. ಆತನಿಗೆ ನನ್ನ ಬೆಂಬಲ ಇದ್ದೇ ಇರುತ್ತೆ. ಅವನು ಸ್ವಲ್ಪ ಆಚೀಚೆ ಹೋದ್ರು ನಾನು ಈ ಕಡೆ ಎಳೀತ್ತೇನೆ. ಅವನು ಸಿನಿಮಾ ಮಾಡ್ತಿದ್ದಾನೆ, ನನಗೆ ಟೆನÒನ್‌ ಜಾಸ್ತಿ. ಏಕೆಂದರೆ ವಿಕ್ರಮ್‌ ಅಂದ್ರೆ ಚಿತ್ರರಂಗದದಲ್ಲಿ ನಿರೀಕ್ಷೆ ಜಾಸ್ತಿ ಇದೆ. ಆತ ಹೈಟ್‌ ಇದ್ದಾನೆ, ರಗಡ್‌ ಲುಕ್‌ ಇದೆ. ನನ್ನನ್ನು ನೋಡಿದವರು ರವಿಸಾರ್‌ ತರಹನೇ ಅಂತಾರೆ. ಹಾಗಾಗಿ, ತಮ್ಮನ ಜೊತೆಗೆ ಇರ್ತೇನೆ. 

* ನೀವು ಯಾವ ಜಾನರ್‌ನಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತೀರಿ?
ನನಗೆ ಯಾವುದೇ ಒಂದು ಜಾನರ್‌ನ ಹೀರೋ ಎಂದು ಬೋರ್ಡ್‌ ಹಾಕಿಕೊಳ್ಳಲು ಇಷ್ಟವಿಲ್ಲ. ಒಳ್ಳೆಯ ಕಥೆಯಲ್ಲಿ ನಟಿಸಬೇಕು. ಅದು ಲವ್‌ ಆಗಲಿ, ಆ್ಯಕ್ಷನ್‌ ಆಗಲಿ, ಅದು ನನಗೆ ಬೇಕಿಲ್ಲ. ಸಿನಿಮಾ ಜನರಿಗೆ ಖುಷಿಕೊಡಬೇಕು ಅಷ್ಟೇ.

* ಮನೆಯಲ್ಲಿ ಈಗ ಮೂವರು ಹೀರೋಗಳಿದ್ದೀರಿ. ಹೇಗನಿಸ್ತಾ ಇದೆ?
ನಮ್ಮನ್ನು ಅಪ್ಪ -ಅಮ್ಮ ಆ ತರಹ ಬೆಳೆಸಿಲ್ಲ. ಕ್ಯಾಮರಾ ಮುಂದೆ ಬಂದಾಗಲಷ್ಟೇ ಹೀರೋ. ಅಪ್ಪನಿಗೆ ಖುಷಿ ಇದೆ. ಮೊನ್ನೆ ಮಮ್ಮಿಯತ್ರ ಹೇಳ್ತಾ ಇದ್ರು, ಮನೆಯಲ್ಲಿ ಮೂರು ಜನ ಹೀರೋ ಖುಷಿನಾ ಎಂದು. ಅವರಿಗೆ ಆ ತರಹದ ಹೆಮ್ಮೆ ಇದೆ.  

* ಮುಂದಿನ ಸಿನಿಮಾ?
ಒಂದಷ್ಟು ಕಥೆ ಕೇಳಿದ್ದೇನೆ. ಯಾವುದನ್ನೂ ಒಪ್ಪಿಲ್ಲ. “ಸಾಹೇಬ’ನಿಗಾಗಿ ಎದುರು ನೋಡುತ್ತಿದ್ದೇನೆ. ನನಗೆ ಆ್ಯಕ್ಟಿಂಗ್‌ ಬರುತ್ತೆ, ಬರಲ್ಲ ಅನ್ನೋ ಜನರ ಕಾಮೆಂಟ್‌ಗೆ ಕಾಯ್ತಾ ಇದ್ದೇನೆ. ಒಳ್ಳೊಳ್ಳೆ ಕಥೆಗಳನ್ನು ಪಕ್ಕಕ್ಕಿಡುವಾಗ  ಬೇಜಾರಾಗುತ್ತೆ. ಆದರೆ ಜನ ನನ್ನ ಬಗ್ಗೆ ಏನ್‌ ಹೇಳ್ತಾರೆ ಅನ್ನೋದು ಗೊತ್ತಿಲ್ಲ. ಕೋಟಿ ಜನರ ಕಾಮೆಂಟ್ಸ್‌ ಕೇಳಲು ಕಾಯ್ತಾ ಇದ್ದೀನಿ. “ಸಾಹೇಬ’ ನಂತರ “ವಿಐಪಿ’ ಬರಲಿದೆ. ಅದು ಕೂಡಾ ವಿಭಿನ್ನವಾಗಿದೆ. ಧನುಶ್‌ ಅವರ 25ನೇ ಚಿತ್ರ, ನನ್ನ 2ನೇ ಚಿತ್ರವಾಗಿದೆ. ಅಲ್ಲಿ ಗಡ್ಡಬಿಟ್ಟು, ಬೇರೆ ತರಹ ಕನ್ನಡ ಮಾತನಾಡಿದ್ದೇನೆ. 

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.