ದಪ್ಪಗಾಗಲು ಆರೋಗ್ಯಕರ ಸಲಹೆಗಳು
Team Udayavani, Aug 8, 2017, 7:47 AM IST
ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ ದಪ್ಪಗಾಗಬೇಕೆಂದು ಜಂಕ್
ಫುಡ್, ಫಾಸ್ಟ್‌ಫುಡ್ ತಿನ್ನುವುದಲ್ಲ. ಹಾಗೆ ಮಾಡಿದಲ್ಲಿ ದಪ್ಪಗಾಗುವುದು ನಿಜವಾದರೂ ಅನಾರೋಗ್ಯವನ್ನು ಹುಟ್ಟುಹಾಕುತ್ತದೆ. ಅಲ್ಲದೆ ಏಕಾಏಕಿ ದಪ್ಪಗಾಗಲು ಸಾಧ್ಯವೂ ಇಲ್ಲ.ಇದಕ್ಕೆ ಸ್ವಲ್ಪ ಕಾಳಜಿ, ತಾಳ್ಮೆಯೂ ಮುಖ್ಯ. ಸಣ್ಣಗೆ ಇರುವವರಿಗೆ, ದಪ್ಪಗಾಗಬಯಸುವವರಿಗೆ ಇಲ್ಲಿವೆ ಕೆಲವು ಆರೋಗ್ಯಕರ ಸಲಹೆಗಳು:
- ಪ್ರತೀದಿನ ಕಡ್ಲೆಬೀಜವನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನಬೇಕು. ಹೀಗೆ ಪ್ರತೀದಿನ ಅಂದರೆ ಒಂದು ತಿಂಗಳು ತಿನ್ನುವುದರಿಂದ ನಿಮ್ಮ ಶರೀರದ ತೂಕ ಹೆಚ್ಚುವುದು.
- ಪ್ರತಿದಿನ ತೆಂಗಿನಕಾಯಿ ತುರಿಗೆ ಒಣದ್ರಾಕ್ಷಿ ಸೇರಿಸಿ ತಿಂದರೆ ಒಂದು ತಿಂಗಳೊಳಗೆ ಮೈಕೈ ತುಂಬಿಕೊಳ್ಳುತ್ತದೆ.
- ದಿನಾ ಎರಡು ಬಾಳೆಹಣ್ಣು ತಿಂದು ಒಂದು ಗ್ಲಾಸ್ ಹಾಲಿಗ (250 ಎಂಎಲ್) ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು. ನಂತರ ಎರಡು ಚಮಚ ಒಣದ್ರಾಕ್ಷೆ ತಿಂದು ಎರಡು ಏಲಕ್ಕಿ ತಿಂದರೆ ತೂಕ ಹೆಚ್ಚಾಗುವುದು.
- ಬಾರ್ಲಿ ಪಾಯಸ: ಬಾರ್ಲಿಯನ್ನು ಸ್ವಲ್ಪ ಹುರಿದು ಅದಕ್ಕೆ ತುಪ್ಪ ಸೇರಿಸಿ ಬೇಯಿಸಬೇಕು. ಇದಕ್ಕೆ ಒಂದು ಗ್ಲಾಸ್ ಹಾಲು, ಸಕ್ಕರೆ, ಡ್ರೈಫ್ರುಟ್ಸ್ (ಬಾದಾಮಿ, ಗೋಡಂಬಿ, ಒಣದ್ರಾಕ್ಷಿ) ತುಪ್ಪದಲ್ಲಿ ಹುರಿದು ಸೇರಿಸಿ ದಿನಾ ಸಂಜೆಯ ಹೊತ್ತಿಗೆ ತಿಂದರೆ ಒಂದು ತಿಂಗಳೊಳಗೆ ದಪ್ಪಗಾಗಬಹುದು. ಇದು ಬಹಳ ಆರೋಗ್ಯಕರ ಹಾಗೂ ಪುಷ್ಟಿದಾಯಕ. ಅಲ್ಲದೆ ಸುಲಭವಾಗಿ ಜೀರ್ಣವಾಗುತ್ತದೆ. ಮಕ್ಕಳಿಗೂ ಬಹಳ ಒಳ್ಳೆಯದು.
ಸ್ವಾತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.