ಬಿಸಿಲು ಮರೆಸಲು ತಂಪು ಪಾನೀಯ
Team Udayavani, Aug 8, 2017, 9:02 AM IST
ಲಿಂಬೆ, ಮಾವು, ಬಾಳೆಹಣ್ಣು , ಸೇಬು, ಬೆಲ್ಲ ಸೇವಿಸುವುದರಿಂದ ಬೇಸಿಗೆಯಲ್ಲಿ ದೈಹಿಕ, ಮಾನಸಿಕ ಶಕ್ತಿ ಸಿಗುವುದು. ವಿಟಾಮಿನ್ “ಎ’, “ಸಿ’, “ಡಿ’ ಕೊರತೆ ನೀಗುವುದು.
ಕಾಮಕಸ್ತೂರಿ ಬೀಜ (ತಂಪಿನ ಬೀಜ)ದ ಪಾನಕ
ಬೇಕಾಗುವ ಸಾಮಗ್ರಿ:
ಕಾಮಕಸ್ತೂರಿ ಬೀಜ- 4 ಚಮಚ, ಪುದೀನಾ ಎಲೆ/ತುಳಸಿ ಎಲೆ- 5-6, ನಿಂಬೆರಸ-2 ಚಮಚ, ಬೆಲ್ಲ ಅಥವಾ ಸಕ್ಕರೆ ಸ್ವಲ್ಪ , ನೀರು- 4 ಕಪ್.
ತಯಾರಿಸುವ ವಿಧಾನ:
ಕಾಮಕಸ್ತೂರಿ ಬೀಜವನ್ನು ನೀರಿಗೆ ಹಾಕಿ ಬೆಲ್ಲ/ಸಕ್ಕರೆ ಹಾಕಿ ಕದಡಿ. ಲಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಪುದೀನಾ ಎಲೆ ಅಥವಾ ತುಳಸಿ ಎಲೆ ಹಾಕಿ ಕುಡಿಯಿರಿ. ಆಗಾಗ ಸ್ವಲ್ಪ ಸ್ವಲ್ಪ ಕುಡಿದರೆ ಹೊಟ್ಟೆ ತಂಪಾಗುವುದು.
ಒಣ ಶುಂಠಿ, ಮಜ್ಜಿಗೆ ಸೊಪ್ಪಿನ ಪಾನಕ
ಬೇಕಾಗುವ ಸಾಮಗ್ರಿ:
ಕಾಳುಮೆಣಸು 7-8, ಶುಂಠಿ-1 ಇಂಚು, ಮಜ್ಜಿಗೆಸೊಪ್ಪು 4-5, ಬೆಲ್ಲ- 50 ಗ್ರಾಂ, ಲಿಂಬೆ-1/2 ಹೋಳು, ನೀರು 5-6 ಕಪ್.
ತಯಾರಿಸುವ ವಿಧಾನ:
ನೀರಿಗೆ ಬೆಲ್ಲ ಹಾಕಿ ಕುದಿಸಿರಿ. ಒಣ ಶುಂಠಿ, ಕಾಳುಮೆಣಸು ಚೆನ್ನಾಗಿ ಹುಡಿಮಾಡಿ ಕುದಿಸಿದ ನೀರಿಗೆ ಹಾಕಿ ಮಜ್ಜಿಗೆಸೊಪ್ಪು ಹಾಕಿ ಕುದಿಸಿ ತಣಿಸಿ, ಲಿಂಬೆರಸ ಹಾಕಿ ಮುಚ್ಚಿಡಿ. ಈ ಪಾನಕವನ್ನು ಬಿಸಿಯಾಗಿಯೂ ಸೇವಿಸಬಹುದು. ತಣಿದ ಮೇಲೂ ಸೇವಿಸಿದರೆ ಆರೋಗ್ಯದಾಯಕವಾಗುತ್ತದೆ.
ಒಣಶುಂಠಿಯ ಬದಲು ಹಸಿ ಶುಂಠಿ ಉಪಯೋಗಿಸಬಹುದು.
ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.