ಜೋಗೇಶ್ವರಿ ಮಂತ್ರಾಲಯ ಮಠದಲ್ಲಿ ರಾಯರ ಆರಾಧನಾ ಮಹೋತ್ಸವಕ್ಕೆ ಚಾಲನೆ
Team Udayavani, Aug 8, 2017, 3:08 PM IST
ಮುಂಬಯಿ: ಜೋಗೇಶ್ವರಿ ಪಶ್ಚಿಮದ ಗುಲ್ಶನ್ ನಗರದಲ್ಲಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಜರ 346 ನೇ ಆರಾಧನಾ ಮಹೋತ್ಸವಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು. ಶ್ರೀ ಮಠದಲ್ಲಿ ಬೆಳಗ್ಗೆ 9ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸಲಾಗಿತ್ತು.
ಪೂರ್ವಾಹ್ನ 10.30ರಿಂದ ಮಧ್ಯಾಹ್ನ 12.30ರ ತನಕ ಮೀರಾರೋಡ್ ರಾಯರ ಬಳಗದ ಗಿರೀಶ್ ಕರ್ಕೇರ ಮೀರಾರೋಡ್ ನೇತೃತ್ವದಲ್ಲಿ ಭಜನ ಸಂಕೀರ್ತನೆ ನಡೆಯಿತು. ಫೋರ್ಟ್ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಕಿಶೋರ್ ಕರ್ಕೇರ ಅವರು ಹಾರ್ಮೋನಿಯಂನಲ್ಲಿ, ಕಿಶೋರ್ ಕೋಟ್ಯಾನ್ ಅವರು ತಬಲಾದಲ್ಲಿ ಸಹಕರಿಸಿದರು. ಭಜನೆಯಲ್ಲಿ ಮಾಧವ ಮೊಗವೀರ, ಲಕ್ಷ್ಮೀಶೆಟ್ಟಿ, ಪುರಂದರ ಶ್ರೀಯಾನ್, ದೇವದಾಸ್ ಕರ್ಕೇರ, ವಿನೋದ್ ಸಾಲ್ಯಾನ್ ಅವರು ಪಾಲ್ಗೊಂಡಿದ್ದರು.
ಮಧ್ಯಾಹ್ನ 12.30ರಿಂದ ಗುರುರಾಯರಿಗೆ ಅಲಂಕಾರ ಸೇವೆ, ಮಹಾಮಂಗಳಾರತಿ, ಹಸ್ತೋದಕ ಕಾರ್ಯಕ್ರಮ ನಡೆಯಿತು. ಶ್ರೀ ಮಠದ ವತಿಯಿಂದ ಭಜನ ಕಾರ್ಯಕ್ರಮವನ್ನು ನಡೆಸಿಕೊಟ್ಟ ರಾಯರ ಬಳಗದ ಸದಸ್ಯರನ್ನು ಶಾಲು ಹೊದೆಸಿ, ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು.
ಈ ಸಂದರ್ಭ ಶ್ರೀ ಮಠದ ಪ್ರಬಂಧಕ ರಮಾ ಕಾಂತ್ ಮಾನವಿ, ಪ್ರಧಾನ ಅರ್ಚಕ ಗುರುರಾಜಾ ಚಾರ್ಯ, ಡಾ| ಪೂರ್ಣಪ್ರಜ್ಞ, ಸಂಪತ್ ಹೆಗ್ಡೆ ಹೆಗ್ಡೆ, ಭಾಸ್ಕರ ಶೆಟ್ಟಿ ಮತ್ತು ಮಠದ ಅರ್ಚಕ ವೃಂದ ದವರು ಉಪಸ್ಥಿತರಿದ್ದರು. ಸಂಜೆ 6ರಿಂದ ಧ್ವಜಾ ರೋಹಣ, ಗೋಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ,
ಮಹಾಮಂಗಳಾರತಿ ನೆರವೇರಿತು. ಆ. 8ರಿಂದ ನಡೆಯಲಿರುವ ರಾಯರ 346ನೇ ಆರಾಧನಾ ಮಹೋತ್ಸವಕ್ಕೆ ಸರ್ವ ಭಕ್ತಾದಿಗಳು ಆಗಮಿಸಿ ರಾಯರ ಕೃಪೆಗೆ ಪಾತ್ರರಾಗುವಂತೆ ಇದೇ ಸಂದರ್ಭದಲ್ಲಿ ರಮಾಕಾಂತ್ ಮಾನವಿ ಅವರು ವಿನಂತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.