ಕೃಷ್ಣೆಗೂ ನೀಡಿ ಕಾವೇರಿಯಷ್ಟೇ ಮಹತ್ವ
Team Udayavani, Aug 8, 2017, 3:32 PM IST
ಆಲಮಟ್ಟಿ: ರಾಜ್ಯವನ್ನಾಳಿದ ಸರ್ಕಾರಗಳು ಕೃಷ್ಣೆ ಹಾಗೂ ಕಾವೇರಿಗಳೆರಡೂ ಕಣ್ಣುಗಳು ಹೇಳುತ್ತವೆ. ಆದರೆ ಕಾರ್ಯರೂಪದಲ್ಲಿ ಕಾವೇರಿಗೆ ಕೊಡುವ ಮಹತ್ವವನ್ನು ಕೃಷ್ಣೆಗೆ ಕೊಡುತ್ತಿಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆರೋಪಿಸಿದರು.
ಸೋಮವಾರ ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕೃಷ್ಣಾ ಜಲನಿಧಿಗೆ ಬಾಗಿನ ಅರ್ಪಣೆಗೂ ಮುನ್ನ ನಡೆದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿಯೇ ಬೃಹತ್ ನೀರಾವರಿ ಯೋಜನೆಗಳಲ್ಲೊಂದಾದ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭವಾಗಿ ಅರ್ಧ ಶತಮಾನ ಕಳೆದರೂ ಕೂಡ ಇನ್ನೂವರೆಗೆ ಯೋಜನೆ ಪೂರ್ಣಗೊಳ್ಳದಿರಲು ರಾಜ್ಯವನ್ನಾಳಿದ ಸರ್ಕಾರಗಳೇ ಕಾರಣವಾಗಿವೆ. ಉತ್ತರ ಕರ್ನಾಟಕದ ಸಮಗ್ರ ನೀರಾವರಿಗಾಗಿಯೇ ಯೋಜಿಸಲಾದ ಯೋಜನೆ ಇನ್ನೂವರೆಗೆ ಪೂರ್ಣಗೊಳ್ಳದಿರುವುದರಿಂದ ಹಾಗೂ ಸಕಾಲಿಕವಾಗಿ ಸಮರ್ಪಕ ಮಳೆ ಸುರಿಯದಿರುವುದರಿಂದ ರೈತಾಪಿ ವರ್ಗ ತೀವ್ರ ತೊಂದರೆಗೀಡಾಗುವಂತಾಗಿದೆ ಎಂದರು.
ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ನದಿಯೆಂದರೆ ಕೇವಲ ಕಾವೇರಿ ನದಿ ಎಂದು ತಿಳಿದಿದ್ದಾರೆ ಇದು ಸರಿಯಲ್ಲ. ಎರಡೂ ನದಿಗಳನ್ನು ಸಮಾನ ದೃಷ್ಟಿಯಲ್ಲಿ ಕಾಣಬೇಕು ಮತ್ತು ಆಲಮಟ್ಟಿ ಜಲಾಶಯದಲ್ಲಿ 123.81 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಇದರ ಅರ್ಧಕ್ಕಿಂತಲೂ ಕಡಿಮೆ ನೀರು
ಸಂಗ್ರಹವಾಗುವ ಕಾವೇರಿ ಬಗ್ಗೆ ಇರುವ ಕಾಳಜಿಯನ್ನು ಬೃಹತ್ ನೀರಾವರಿ ಯೋಜನೆ ಕೃಷ್ಣೆಗೂ ಆದ್ಯತೆ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಂಡು ಇದರ ಲಾಭ ರೈತರಿಗೆ ಸಕಾಲದಲ್ಲಿ ಸಿಗುವಂತಾಗಬೇಕು ಎಂದು ಹೇಳಿದರು.
ರೈತ ಮುಖಂಡ ಪಂಚಪ್ಪ ಕಲುºರ್ಗಿ ಮಾತನಾಡಿ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಈ ಭಾಗ ಸಂಪೂರ್ಣ ನೀರಾವರಿಯಾಗಬೇಕು. ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡದೇ ಒಂದೇ ಧ್ವನಿಯಲ್ಲಿ ಸರ್ಕಾರವನ್ನು ಪಕ್ಷಾತೀತವಾಗಿ ಎಚ್ಚರಿಸಬೇಕು ಎಂದರು. ಸಾನ್ನಿಧ್ಯವಹಿಸಿದ್ದ ನಿಡಗುಂದಿ ರುದ್ರಮುನಿ ಸ್ವಾಮೀಜಿ ಮಾತನಾಡಿ, ರೈತರು ಜಾಗೃತರಾಗಿ ನೀರು ಹಾಗೂ ಮಣ್ಣು ಬಳಕೆ ಬಗ್ಗೆ ಅರಿತುಕೊಂಡು ನಡೆಯಬೇಕು ಹಾಗೂ ಜಾನುವಾರುಗಳ ಸಾಕಣೆಯಿಂದ ಹಲವಾರು ಬಗೆಯಲ್ಲಿ ಲಾಭಗಳಿವೆ ಎಂದರು.
ರಾಮಲಿಂಗೆಶ್ವರ ದೇವಸ್ಥಾನದಲ್ಲಿ ಸುಮಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ನಂತರ ವಿವಿಧ ವಾದ್ಯವೈಭವಗಳೊಂದಿಗೆ ದೇವಸ್ಥಾನದಿಂದ ಚಂದ್ರಮ್ಮದೇವಿ ದೇವಸ್ಥಾನ ಮಾರ್ಗವಾಗಿ ಸುಮಂಗಲೆಯರಿಂದ ರ್ಣಕುಂಭ ಮೇಳದೊಂದಿಗೆ ಕೃಷ್ಣೆಯ ಹಿನ್ನೀರು ಪ್ರದೇಶಕ್ಕೆ ತೆರಳಿ ಗಂಗಾಪೂಜೆ ನೆರವೇರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದ ಜಲನಿಧಿಗೆ ಬಾಗಿನ ಅರ್ಪಿಸಲಾಯಿತು.
ಪೂಜಾ ಕೈಂಕರ್ಯವನ್ನು ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಾಮಾಚಾರಿ ಚಿಮ್ಮಲಗಿ ಹಾಗೂ ಶ್ರೀಶೈಲಯ್ಯ ಹಿರೇಮಠ ನಡೆಸಿಕೊಟ್ಟರು. ಸಾಹಿತಿ ಅರವಿಂದ ಕೊಪ್ಪ, ಅಶೋಕ ಹಂಚಲಿ, ದಸ್ತಗೀರ ಸಾಲೋಡಗಿ, ಶಾಂತಪ್ಪ ಮನಗೂಳಿ, ಸಿದ್ದಲಿಂಗಚೌಧರಿ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಜಿ.ಸಿ.ಮುತ್ತಲದಿನ್ನಿ, ಅಂದಾನಿ ತೋಳಮಟ್ಟಿ, ರಮೆಶ ಆಲಮಟ್ಟಿ, ರಾಮುಜಗತಾಪ, ಮಕಬುಲ ಬಾಗವಾನ, ರಾಜು ಬೋರಣ್ಣವರ, ಪ್ರಕಾಶ ಕಾರಕೂನ, ನಿಂಗರಾಜ ಆಲೂರ, ಲಕ್ಷ್ಮೀ ದೇಸಾಯಿ, ವಿಜಯಾ ಮುಚ್ಚಂಡಿ, ವಿದ್ಯಾವತಿ ಪಟ್ಟಣಶೆಟ್ಟಿ, ಲಕ್ಷ್ಮೀ ಸಜ್ಜನ ಸೇರಿದಂತೆ ಆಲಮಟ್ಟಿ, ಅರಳದಿನ್ನಿ, ಬೇನಾಳ, ವಡವಡಗಿ, ಯರಝರಿ, ಯಲಗೂರ, ಕಾಳಗಿ, ಬಳಬಟ್ಟಿ ಗ್ರಾಮಗಳ ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.