ಆ. 11ರಿಂದ ಅರೆಮರ್ಲೆರ್ ಪ್ರದರ್ಶನ !
Team Udayavani, Aug 9, 2017, 6:50 AM IST
ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ನಿರ್ಮಿಸಿರುವ “ಅರೆಮರೆಲರ್’ ತುಳು ಸಿನೆಮಾ ಆ. 11ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿದೆ.
ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
13 ಚಿತ್ರಮಂದಿರಗಳಲ್ಲಿ ಬಹುನಿರೀಕ್ಷಿತ ಈ ಚಿತ್ರ ಮಂಗಳೂರಿನ ಪ್ರಭಾತ್, ಸಿನೆಪೊಲಿಸ್, ಬಿಗ್ ಸಿನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ, ಮೂಡಬಿದಿರೆಯ ಅಮರಶ್ರೀ, ಕಾರ್ಕಳದ ರಾಧಿಕಾ, ಪ್ಲಾನೆಟ್, ಪುತ್ತೂರಿನ ಅರುಣಾ, ಸುರತ್ಕಲ್‌ನ ನಟರಾಜ್, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್ ಹಾಗೂ ಮಣಿಪಾಲದ ಐನಾಕ್ಸ್ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸಿನೆಮಾ ಸಂಪೂರ್ಣ ಹಾಸ್ಯ-ಮನೋರಂಜನೆಯಿಂದ ಕೂಡಿದೆ ಎಂದರು.
ಬೊಳ್ಳಿ ಮೂವೀಸ್ ಲಾಂಛನದಲ್ಲಿ ಈ ಹಿಂದೆ ತೆಲಿಕೆದ ಬೊಳ್ಳಿ, ಚಂಡಿಕೋರಿ, ಬರ್ಸ, ಸಿನೆಮಾ ತಯಾರಾಗಿದ್ದು, ಇದೀಗ ಮೂಡಿಬರುತ್ತಿರುವ “ಅರೆ ಮರೆಲರ್’ ಸಿನೆಮಾದ ಬಗ್ಗೆ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.
ಈಗಾಗಲೇ ಬಿಡುಗಡೆಗೊಂಡಿರುವ ಸಿನೆಮಾದ ಪೋಸ್ಟರ್‌ಗಳು ಜನರನ್ನು ಆಕರ್ಷಿಸಿವೆ. ಚಿತ್ರದಲ್ಲಿ ಆ್ಯಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಈ ಬಾರಿ ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆಯಲಿದ್ದಾರೆ. ಅವರಿಗೆ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು ಸಾಥ್ ನೀಡಿದ್ದಾರೆ ಎಂದರು.
“ಅರೆಮರ್ಲೆರ್’ ಚಿತ್ರದ ಕೆಮರಾಮನ್ ಆಗಿ ಉದಯ ಬಲ್ಲಾಳ್, ಸುಜೀತ್ ನಾಯಕ್ ಸಂಕಲನಕಾರರಾಗಿ, ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತದಲ್ಲಿ ದುಡಿದಿದ್ದಾರೆ. ಸಚಿನ್ ಎ.ಎಸ್. ಉಪ್ಪಿನಂಗಡಿ ಕಾರ್ಯಕಾರಿ ನಿರ್ಮಾಣ, ರಾಜೇಶ್ ಕುಡ್ಲ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದೇವದಾಸ್ ಕಾಪಿಕಾಡ್ ವಹಿಸಿಕೊಂಡಿದ್ದಾರೆ.
ಲಕ್ಷ್ಮಣ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಗೋಪಿನಾಥ್ ಭಟ್, ಅರ್ಜುನ್ ಕಜೆ, ಚೇತನ್ ರೈ ಮಾಣಿ, ಸಾಯಿಕೃಷ್ಣ , ಸತೀಶ್ ಬಂದಲೆ, ಹರೀಶ್ ವಾಸು ಶೆಟ್ಟಿ ಮುಂಬಯಿ, ಗಿರೀಶ್ ಶೆಟ್ಟಿ ಕಟೀಲು, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಪಾಂಡುರಂಗ ಅಡ್ಯಾರ್, ಚಿದಾನಂದ ದುಬಾೖ ಅಭಿನಯಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಮತ್ತು ಪ್ರಶಾಂತ್ ಕಲ್ಲಡ್ಕ ಸಹ ನಿರ್ದೇಶಕರಾಗಿ ದುಡಿದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಶರ್ಮಿಳಾ ಡಿ. ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ, ಪ್ರಮುಖರಾದ ದಯಾ ಕಿರೋಡಿಯನ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ, ಅರ್ಜುನ್ ಕಾಪಿಕಾಡ್, ಚೇತನ್ ರೈ ಮಾಣಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.