ಕಾಶ್ಮೀರ, ಕಾಲಪಾನಿಗೆ ನಾವು ನುಗ್ಗಿದ್ರೆ ಏನಾಗುತ್ತೆ?: ಚೀನಾ
Team Udayavani, Aug 9, 2017, 7:20 AM IST
ಬೀಜಿಂಗ್: ಡೋಕ್ಲಂನಿಂದ ಒಂದೇ ಬಾರಿಗೆ ಎರಡೂ ದೇಶಗಳು ಸೇನಾಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂಬ ಭಾರತದ ಆಗ್ರಹವನ್ನು ಚೀನಾ ತಿರಸ್ಕರಿಸಿದ್ದು, ಒಂದು ವೇಳೆ ನಾವು ಭಾರತದ ಉತ್ತರಾಖಂಡದ ಕಾಲಪಾನಿ, ಕಾಶ್ಮೀರದಲ್ಲಿ ನಮ್ಮ ಸೇನೆಯನ್ನು ಒಳಗೆ ನುಗ್ಗಿಸಿದರೆ ಏನಾಗುತ್ತೆ? ಎಂದು ಧಮಕಿ ಹಾಕಿದೆ.
ಚೀನ ಪ್ರವಾಸದಲ್ಲಿರುವ ಭಾರತೀಯ ಪತ್ರಕರ್ತರ ಗುಂಪಿಗೆ ಅದು ಹೀಗೆ ಹೇಳಿದೆ. “ನಮ್ಮ ಗಡಿಯೊಳಗೆ ಒಬ್ಬನೇ ಒಬ್ಬ ಭಾರತದ ಸೈನಿಕ ಇದ್ದರೂ, ಅದು ನಮ್ಮ ಗಡಿ ಸಾರ್ವಭೌಮತೆ ಯನ್ನು ಉಲ್ಲಂ ಸಿದಂತೆ. ಭಾರತವೂ ಹಲವು ಟ್ರೈಜಂಕ್ಷನ್ ಹೊಂದಿದ್ದು, ಅದರಲ್ಲಿ ನಮ್ಮ ಸೇನೆ ನುಗ್ಗಿಸಿದರೆ ಏನಾಗುತ್ತೆ?’ ಎಂದು ಚೀನದ ವಿದೇ ಶಾಂಗ ಇಲಾಖೆಯ ಗಡಿ ಮತ್ತು ಸಾಗರ ಗಡಿ ವ್ಯವಹಾರಗಳ ಉಪ ನಿರ್ದೇಶಕ ವಾಂಗ್ ವೆನ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. “ಈ ಸಂದರ್ಭದಲ್ಲಿ ಭಾರತದೊಂದಿಗೆ ಮಾತುಕತೆ ಸಾಧ್ಯವೇ ಇಲ್ಲ. ನಮ್ಮ ಪ್ರಜೆಗಳು, ಸರಕಾರ ಅಸ ಮರ್ಥ ಎಂದು ಭಾವಿಸುತ್ತಿದ್ದಾರೆ. ಭಾರತ ಸೇನೆ ಹಿಂತೆಗೆಯದ ಹೊರತು ನಮ್ಮ ನಡುವೆ ಮಾತು ಕತೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನೆಹರೂ ಸರಕಾರದಷ್ಟೇ ಮೋದಿ ಸರಕಾರವೂ ಕಪಟಿ: 1962ರಲ್ಲಿ ಭಾರತದ ಜವಾಹರಲಾಲ್ ನೆಹರೂ ಅವರ ಸರಕಾರದಷ್ಟೇ ನರೇಂದ್ರ ಮೋದಿ ಸರಕಾರವೂ ಕಪಟಿ ಎಂದು ಚೀನದ ಸರಕಾರಿ ಸ್ವಾಮ್ಯದ ಪತ್ರಿಕೆ “ಗ್ಲೋಬಲ್ ಟೈಮ್ಸ್’ ಜರೆದಿದೆ. ಭಾರತ ವಿರುದ್ಧ ಟೀಕೆಗಳನ್ನು ಅದು ಮುಂದುವರಿಸಿದ್ದು, ಚೀನದ ಎಚ್ಚರಿಕೆಗಳನ್ನು ಕಡೆಗಣಿಸಿದರೆ, ಯುದ್ಧ ಖಂಡಿತ ಎಂದು ಹೇಳಿದೆ. ಹೊಸ ಸಂಪಾದಕೀಯದಲ್ಲಿ ಅದು ಚೀನಕ್ಕೆ ಯುದ್ಧ ಬೇಡ, ಆದರೆ ಡೋಕ್ಲಂನಲ್ಲಿ ಭಾರತದ ಸೇನೆ ಹೀಗೆ ಇದ್ದರೆ, ಬೇರೆ ದಾರಿ ಹುಡುಕಬೇಕಾದೀತು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.