ವಿವಾದಿತ ಸ್ಥಳ ಬಿಟ್ಟು ಬೇರೆ ಕಡೆ ಮಸೀದಿ ನಿರ್ಮಿಸಿ
Team Udayavani, Aug 9, 2017, 6:35 AM IST
ಹೊಸದಿಲ್ಲಿ: ಹಲವಾರು ವರ್ಷಗಳಿಂದ ಹಿಂದೂ-ಮುಸ್ಲಿಮರ ಸಂಘರ್ಷಕ್ಕೆ ಕಾರಣವಾಗಿರುವ ಅಯೋಧ್ಯೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಈಗ ಹೊಸ ತಿರುವು ಪಡೆದು ಕೊಂಡಿದೆ.
ವಿವಾದಿತ ಸ್ಥಳದಿಂದ ಸ್ವಲ್ಪ ದೂರದಲ್ಲಿ, ಮುಸ್ಲಿಂ ಬಾಹುಳ್ಯವಿರುವಂಥ ಪ್ರದೇಶದಲ್ಲಿ ಮಸೀದಿ ನಿರ್ಮಿಸಿ ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿದೆ.
ವಿವಾದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಇವುಗಳ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ಅಫಿದವಿತ್ ಸಲ್ಲಿಸಲಾಗಿದೆ.
ಶಿಯಾ ವಕ್ಫ್ ಬೋರ್ಡ್ ಹೇಳಿದ್ದೇನು?
ರಾಮಮಂದಿರ ಹಾಗೂ ಮಸೀದಿ ಎರಡೂ ಅಕ್ಕ-ಪಕ್ಕ ಇದ್ದರೆ ಅದು ಕೋಮು ಸೌಹಾರ್ದತೆ ಕದಡಬಹುದು. ಮತ್ತೂಮ್ಮೆ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು. ಹೀಗಾಗಿ ಈಗ ರಾಮಜನ್ಮ ಭೂಮಿ ಇರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಸೀದಿಗೆ ಸೂಕ್ತ ಸ್ಥಳ ಗುರುತಿಸಿದರೆ ಅಭ್ಯಂತರವಿಲ್ಲ ಎಂದಿರುವ ಶಿಯಾ ಮಂಡಳಿ, ದಶಕಗಳಿಂದ ಇರುವ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಸೂಚನೆ ನೀಡಿದೆ. ಜತೆಗೆ, ಸಂಧಾನ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಸಮಿತಿ ರಚಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆಯೂ ಮಂಡಳಿ ನ್ಯಾಯಾಲಯವನ್ನು ಕೋರಿದೆ. ಆದರೆ ಹಿಂದೂ ಸಂಘಟನೆಗಳು, ಸುನ್ನಿ ಮಂಡಳಿ ಸಹಿತ ಇತರ ಅರ್ಜಿದಾರರು ಕೂಡ ಇದಕ್ಕೆ ಸಮ್ಮತಿಸಿದರೆ ಬಾಬ್ರಿ ಮಸೀದಿ ಅಥವಾ ರಾಮ ಜನ್ಮಭೂಮಿ ವಿವಾದ ಸುಖಾಂತ್ಯಗೊಳ್ಳುವ ಸಾಧ್ಯತೆಗಳಿವೆ.
ಶಿಯಾ ವರ್ಸಸ್ ಸುನ್ನಿ
ಶಿಯಾ ವಕ್ಫ್ ಮಂಡಳಿಯ ಈ 30 ಪುಟಗಳ ಅಫಿದವಿತ್‌ಗೆ ಸುನ್ನಿ ಕೇಂದ್ರೀಯ ವಕ್ಫ್ ಬೋರ್ಡ್ ಒಪ್ಪುತ್ತದಾ ಎಂಬ ಪ್ರಶ್ನೆಯೂ ಎದುರಾಗಿದೆ. ಈ ವಿಚಾರದಲ್ಲಿ ಎರಡೂ ಮಂಡಳಿಗಳ ನಡುವೆ ಭಿನ್ನಾಭಿಪ್ರಾಯ ವಿದೆ. ಸುನ್ನಿ ಬೋರ್ಡ್‌ನ ನಡೆಯನ್ನು ವಿರೋಧಿಸಿರುವ ಶಿಯಾ ಮಂಡಳಿ, “ಬಾಬ್ರಿ ಮಸೀದಿ ಇರುವ ವಿವಾದಿತ ಸ್ಥಳ ತನಗೇ ಸೇರಿದ್ದು, ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಅಧಿಕಾರ ಇರುವುದು ಶಿಯಾ ಮಂಡ ಳಿಗೆ ಮಾತ್ರ’ ಎಂದು ಹೇಳಿದೆ. ಜತೆಗೆ, ನಮ್ಮ ಸಲಹೆಗೆ ಸುನ್ನಿ ಮಂಡಳಿಯೂ ಸಮ್ಮತಿಸಬೇಕು ಎಂದು ಹೇಳಿದೆ.
ತ್ರಿಸದಸ್ಯ ಪೀಠ
ಎರಡು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಅವರನ್ನೊಳಗೊಂಡ ಪೀಠವು, ಅಯೋಧ್ಯೆ ವಿವಾದ ಕುರಿತು ಅರ್ಜಿಗಳ ತ್ವರಿತ ವಿಚಾರಣೆಗೆಂದು ನ್ಯಾ|ದೀಪಕ್ ಮಿಶ್ರಾ, ನ್ಯಾ| ಅಶೋಕ್ ಭೂಷಣ್ ಮತ್ತು ನ್ಯಾ| ಎಸ್.ಎ. ನಜೀರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ರಚಿಸಿತ್ತು. ಜತೆಗೆ, ಆಗಸ್ಟ್ 11ರಿಂದಲೇ ವಿಚಾರಣೆ ಆರಂಭಿಸುವಂತೆ ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.