ವಿವಾದಕ್ಕೆ ಕಾರಣವಾಯ್ತು ಅಕಾಡೆಮಿ ನೇಮಕಾತಿ


Team Udayavani, Aug 9, 2017, 11:37 AM IST

09-STATE-22.jpg

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿರುವ ಇಲಾಖೆ ಎರಡು ಅಕಾಡೆಮಿಗಳ ಸದಸ್ಯರ ಪಟ್ಟಿಯಲ್ಲಿದ್ದ ಮೂವರ ನಾಮನಿರ್ದೇಶನ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ಬಾರಿಯ ನೇಮಕಾತಿಯಲ್ಲಿ ಯಾವುದೇ ಒತ್ತಡ ಲಾಬಿಗೆ ಮಣಿಯದೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿದ್ದ ಸರ್ಕಾರ ಈ ಬಾರಿಯ ನೇಮಕದಲ್ಲಿ ಕೆಲವೊಂದು ಯಡವಟ್ಟುಗಳನ್ನು ಮಾಡಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಮಸ್ಯೆ ಸರಿಪಡಿಸಿರುವ ಇಲಾಖೆ, ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಸ.ರಘುನಾಥ್‌, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಸಿದ್ದಣ್ಣ ಉಕ್ಕನಾಳ ಮತ್ತು ಪ್ರಕಾಶ ಕಂಬತ್ತಳ್ಳಿ ಅವರ ನೇಮಕಾತಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. 

ಎರಡನೇ ಬಾರಿ ನೇಮಕಕ್ಕೆ ಆಕ್ಷೇಪ: ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ 2008ರಿಂದ 2013ರವರೆಗೆ ಸುಮಾರು ಐದು ವರ್ಷಗಳ ಕಾಲ ಹಿರಿಯ ಕವಿ ಸಿದ್ದಲಿಂಗಯ್ಯ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ವಿಜಯಪುರದ ಡಾ.ಸಿದ್ದಣ್ಣ ಉಕ್ಕನಾಳ ಮತ್ತು ಕಳೆದ ಬಾರಿ ಅಧ್ಯಕ್ಷರಾಗಿದ್ದ ಬಂಜಗೆರೆ ಜಯಪ್ರಕಾಶ್‌ ಅವರ ಅವಧಿಯಲ್ಲಿ ಸದಸ್ಯರಾಗಿದ್ದ ಪ್ರಕಾಶ ಕಂಬತ್ತಹಳ್ಳಿ ಅವರನ್ನೇ ಪುನಃ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಅದೇ ರೀತಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸ.ರಘುನಾಥ್‌ ಅವರನ್ನು 2ನೇ ಬಾರಿ ನೇಮಿಸಲಾಗಿತ್ತು. ಈ ಬಗ್ಗೆ ಹಲವು ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸಿ ಹೊಸ ಪ್ರಕಾಶಕರು, ಲೇಖಕರು, ಸಾಹಿತಿಗಳನ್ನು ಆಯ್ಕೆ ಮಾಡಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಈ ಮೂರು ನೇಮಕಾತಿ ರದ್ದುಗೊಳಿಸಿದೆ.

ದಾವಣಗೆರೆ ರಂಗ ಕಲಾವಿದರ ನಿರ್ಲಕ್ಷ್ಯ: ಆದರೂ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಈ ಬಾರಿಯ ನಾಮನಿರ್ದೇಶನದ ಬಗ್ಗೆ ಅಸಮಾಧಾನ ಇನ್ನೂ ಉಳಿದಿದೆ. ದಾವಣಗೆರೆ ರಂಗಭೂಮಿ ಬದುಕಿನ ಅನೇಕ ಸಾಧ್ಯತೆಗಳ ಪ್ರಾಯೋಗಿಕ ಕ್ಷೇತ್ರ. ಚಿಂದೋಡಿ ಲೀಲಾ ಸೇರಿದಂತೆ ಅನೇಕ ರಂಗದಿಗ್ಗಜರು ಅತ್ಯಂತ ಸೃಜನಾತ್ಮಕ ಮತ್ತು ಕಲಾತ್ಮಕವಾಗಿ ರಂಗ ಪ್ರಯೋಗಗಳನ್ನು ನಡೆಸಿ, ಯಶಸ್ವಿಯಾಗಿದ್ದಾರೆ. ಇಂತಹ ರಂಗ ಸಂವೇದನೆಯುಳ್ಳ ದಾವಣಗೆರೆಯನ್ನು ನಾಟಕ ಅಕಾಡೆಮಿಗೆ ಸದಸ್ಯರನ್ನು ನೇಮಕ ಮಾಡುವಾಗ ನಿರ್ಲಕ್ಷಿéಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೊಂಕಣಿ ಅಕಾಡೆಮಿಗೆ ಮರುನೇಮಕ: ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ ಸದಸ್ಯರ ಕೊರತೆಯೋ ಏನೋ? ಅಕಾಡೆಮಿ ಅಧ್ಯಕ್ಷ ಆಕಾಂಕ್ಷಿಯಾಗಿದ್ದ ಓಂ ಗಣೇಶ್‌ ಉಪ್ಪುಂದ ಈ ಹಿಂದೆ ಸದಸ್ಯರಾಗಿದ್ದವರು. ಅವರನ್ನು ಈ ಬಾರಿ ಮತ್ತೂಮ್ಮೆ ನಾಮನಿರ್ದೇಶನ ಮಾಡಲಾಗಿದೆ. ಹಾಗೆಯೇ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಬೇಕೆಂದು ಹೋರಾಟ ನಡೆಸಿದ ದಕ್ಷಿಣ ಕನ್ನಡದ ಪಾವು ಮೋರಾಸ್‌ಗೆ ಪುನಃ ಸದಸ್ಯರಾಗುವ ಭಾಗ್ಯ ಸಿಕ್ಕಿದೆ. ಧಾರವಾಡದ ಸಂತೋಷ ಮಹಾಲೆ ಮತ್ತು ದಕ್ಷಿಣ ಕನ್ನಡದ ಲಿಂಗಪ್ಪಗೌಡ ಅವರಿಗೂ ಮತ್ತೂಂದು ಬಾರಿ ನೇಮಕ ಮಾಡಲಾಗಿದೆ. ಒಮ್ಮೆ ಅಕಾಡೆಮಿ ಸದಸ್ಯರಾದವರಿಗೇ ಪುನಃ ನಾಮನಿರ್ದೇಶನ ಮಾಡುವ ಬದಲಿಗೆ ಇತರ ಸಾಹಿತಿಗಳಿಗೂ ಅವಕಾಶ ಕೊಡಬೇಕಿತ್ತು ಎಂಬ ಅಸಮಾಧಾನ ಹೊಗೆಯಾಡುತ್ತಿದೆ.

ಹೈ-ಕ ನಿರ್ಲಕ್ಷ್ಯ
ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡುವಾಗ ಪ್ರಾದೇಶಿಕವಾರು ಪ್ರಾತಿನಿಧ್ಯದ ಜತೆಗೆ ಅರ್ಹತೆಯನ್ನೂ ಪರಿಗಣಿಸಲಾಗುವುದು ಎಂದು ಆಯ್ಕೆ ಸಮಿತಿ ಹೇಳಿತ್ತು. ಆದರೆ, ಈ ಬಾರಿ ಯಾವುದೇ ನಿಯಮ ಪಾಲಿಸಿಲ್ಲ. ಬೆಂಗಳೂರಿನಲ್ಲಿದ್ದವರಿಗೇ ಅವರ ಹುಟ್ಟೂರಿನ ಹೆಸರಿನಡಿ ನೇಮಕಾತಿ ಮಾಡಿರುವುದು ಆಕ್ಷೇಪಾರ್ಹ ಎಂಬ ಕೂಗು ಕೇಳಿಬಂದಿದೆ. 

ಬೇರೆಡೆ ಅಕಾಡೆಮಿ ಸ್ಥಾಪಿಸಿ!
ಬೆಂಗಳೂರಿನಲ್ಲಿಯೇ ಎಲ್ಲಾ ಅಕಾಡೆಮಿಗಳು ಇರುವುದರಿಂದ ಪ್ರಾದೇಶಿಕವಾರು ನ್ಯಾಯ ಸಿಗುತ್ತಿಲ್ಲ. ಅಕಾಡೆಮಿಗಳು ವಿಕೇಂದ್ರೀಕರಣವಾದಾಗ ಮಾತ್ರ ಎಲ್ಲರಿಗೂ ನ್ಯಾಯಸಿಗುತ್ತದೆ. ನಮ್ಮಲ್ಲಿ ಸಾಂಸ್ಕೃತಿಕ ಏಕೀಕರಣ ಆಗಿಲ್ಲ. ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರಿನಲ್ಲಿ ಇರುವಂತೆ ನಾಟಕ ಅಕಾಡೆಮಿ ದಾವಣಗೆರೆಯಲ್ಲಿ, ಲಲಿತಕಲಾ ಅಕಾಡೆಮಿ ಮೈಸೂರಿನಲ್ಲಿ, ಸಂಗೀತ ಅಕಾಡೆಮಿ ಧಾರವಾಡದಲ್ಲಿ, ಉರ್ದು ಅಕಾಡೆಮಿ ಬೆಳಗಾವಿಯಲ್ಲಿ
ಇರಬೇಕು. ವಿಷಯವಾರು ಪ್ರಾತಿನಿಧ್ಯ ಇರುವ ಕಡೆಗಳಲ್ಲಿ ಆಯಾ ಅಕಾಡೆಮಿಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕೆಂಬುದು ಹಲವು ಸಾಹಿತಿಗಳು, ಕಲಾವಿದರ ಒತ್ತಾಯ. 

ಟಾಪ್ ನ್ಯೂಸ್

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Horoscope

Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ

GM-Pancha

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.