ವಿವೇಕಾನಂದರಂತೆ ಸಂಸ್ಕೃತಿ ಪರಿಚಾರಿಕೆ ಮಾಡಿದ್ದ ಮತ್ತೂರು
Team Udayavani, Aug 9, 2017, 11:43 AM IST
ಬೆಂಗಳೂರು: “ಇನ್ನೊಬ್ಬರ ಸಂಪತ್ತಿನ ಮೇಲೆ ಹೊಂದುವ ವ್ಯಾಮೋಹ ಅಥವಾ ಅದನ್ನು ಕೊಳ್ಳೆ ಹೊಡೆಯುವ ಪ್ರವೃತ್ತಿ ಸರಿಯಲ್ಲ,’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಗಾಂಧಿ ಕಾಮರಾಜ್ ಸ್ಮಾರಕ ಟ್ರಸ್ಟ್ ವತಿಯಿಂದ ಮಂಗಳವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಡಾ. ಮತ್ತೂರು ಕೃಷ್ಣಮೂರ್ತಿ ಅವರ 89ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಮತ್ತೂಬ್ಬರ ಸಂಪತ್ತು ಕೊಳ್ಳೆ ಹೊಡೆಯುವ ಮನೋಭಾವನೆ ಇಂದಿನ ವಿದ್ಯಾರ್ಥಿಗಳಲ್ಲಿ ಬರಬಾರದು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹಾಗೂ ತೃಪ್ತಿ ಹೊಂದಿರಬೇಕು,’ ಎಂದು ತಿಳಿಸಿದರು.
“ಹುಟ್ಟಿನಿಂದಲೇ ಎಲ್ಲರಿಗೂ ಮಾನವೀಯ ಗುಣ ಇರುತ್ತದೇ ಎಂಬು ಉಹಿಸಲು ಸಾಧ್ಯವಿಲ್ಲ. ಬುದ್ಧಿ ಬೆಳೆದಂತೆ, ಯೋಚನಾ ಶಕ್ತಿ ಹೆಚ್ಚಿದಂತೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು. ಆದರೆ ಇಂದಿನ ಸಮಾಜದಲ್ಲಿ ಮಾನವೀಯತೆಯೇ ಕಣ್ಮರೆಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಿ, ನಿವೃತ್ತಿ ನಂತರ ಪಿಂಚಾಣಿ ಸೌಲಭ್ಯವಿದ್ದರೂ, ತೃಪ್ತಿ ಇಲ್ಲದೆ ಭ್ರಷ್ಟಚಾರದಲ್ಲಿ ತೊಡಗಿಕೊಂಡಿರುತ್ತಾರೆ,’ ಎಂದು ಕಳವಳ ವ್ಯಕ್ತಪಡಿಸಿದರು.
“ಡಾ.ಮತ್ತೂರು ಕೃಷ್ಣಮೂರ್ತಿ ಅವರು, ಬಡಕುಟುಂಬದಲ್ಲಿ ಹುಟ್ಟಿ ಸಾಧನೆಯ ಶಿಖರವನ್ನೇ ಏರಿದ್ದಾರೆ. ಸ್ವಾಮೀ ವಿವೇಕನಂದರ ನಂತರ ಭಾರತ ಸಂಸ್ಕೃತಿಯನ್ನು ವಿದೇಶಿ ನೆಲೆದಲ್ಲಿ ಪಸರಿಸಲು ಕೃಷ್ಣಮೂರ್ತಿ ಅವರ ಕೊಡುಗೆ ಅಪಾರ. ಅವರ ಸ್ಮರಣೆ ನಿತ್ಯ ನಿರಂತರವಾಗಲಿ,’ ಎಂದು ಹೇಳಿದರು.
ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಮಾತನಾಡಿ, “ಇಂದಿನ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವತ್ತ ಸಾಗುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಶಿಕ್ಷಣ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಠಿಣಕವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲಿಟ್ಲಲ್ ಫ್ಲವರ್ ಹೈ ಸ್ಕೂಲ್ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಬ್ಯಾಗ್ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಜಂಟಿ ನಿರ್ದೇಶಕ ಸಿ.ಎನ್.ಅಶೋಕ್ ಕುಮಾರ್, ಗಾಂಧಿ ಕಾಮರಾಜ್ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಮಾ.ನಟರಾಜ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.