ತಾಯಿ ಆಗ್ತಿದ್ದೀರಾ? ಮರೆಯದೇ, ಈ 6 ಕೆಲಸ ಮಾಡಿ!
Team Udayavani, Aug 9, 2017, 1:10 PM IST
ಗರ್ಭಿಣಿಗೆ ಒಂಬತ್ತು ತಿಂಗಳು ಸಮೀಪಿಸಿದಾಗ ಅಥವಾ ತುಂಬಿದಾಗ ನೋವು ಶುರುವಾಗುತ್ತದೆ. ಯಾವಾಗ ಹೆರಿಗೆ ಆಗುತ್ತೆ ಅಂತ ಆಗ ಇಡೀ ಕುಟುಂಬವೇ ಕಾದು ಕುಳಿತುಕೊಂಡಿರುತ್ತದೆ. ದಿಢೀರನೆ ನೋವು ಶುರುವಾಯ್ತು ಎಂದಾಗ, ಆಸ್ಪತ್ರೆಗೆ ಹೋಗಲು ಬ್ಯಾಗ್ ಹುಡುಕಿಕೊಂಡು ಕೂರಲು ಸಾಧ್ಯವೇ? ಅದರಲ್ಲಿ ಏನಿರಬೇಕು, ಬೇಡ ಎಂಬ ವಿಮರ್ಶೆಗೆ ಅದು ಸೂಕ್ತ ಕಾಲವೂ ಅಲ್ಲ. ಹಾಗಾದರೆ, ಆ ಬ್ಯಾಗ್‌ನಲ್ಲಿ ಏನೇನಿರಬೇಕು?
1 ನಿಮ್ಮ ವೈದ್ಯಕೀಯ ದಾಖಲೆಗಳು ಮತ್ತು ಫೈಲ್‌ಗಳು ಇರಲಿ. ವೈದ್ಯಕೀಯ ತಪಾಸಣೆಯ ನಂತರ ಬಂದ ಕೂಡಲೇ ಇದನ್ನು ಮೊದಲು ನಿಮ್ಮ ಬ್ಯಾಗ್ ನಲ್ಲಿ ಇಟ್ಟುಬಿಡಿ.
2 ಹಗುರವಾದ ಹವಾಯಿ ಚಪ್ಪಲಿಗಳನ್ನು ಖರೀದಿಸಿಕೊಂಡಿರಿ. ಇವು ಚಪ್ಪಟೆಯಾಗಿರಲಿ, ಧರಿಸಲು ಮತ್ತು ಕಳಚಲು ಸುಲಭವಾಗಿದ್ದಷ್ಟು ಉತ್ತಮ. ಇವನ್ನು ಮರೆಯದೇ ನಿಮ್ಮ ಬ್ಯಾಗಿನಲ್ಲಿ ಹಾಕಿಡಿ. ಹಾಗೆಯೇ ಒಂದು ಜೊತೆ ಸಾಕ್ಸ್ ಕೂಡ ಇಟ್ಟುಕೊಂಡಿರಿ. ಹೆರಿಗೆ ಅಥವಾ ಬಾಣಂತನದ
ವೇಳೆ ಪಾದಗಳಿಗೆ ಥಂಡಿ ಹಿಡಿಯಬಾರದು. ಇದನ್ನು ಧರಿಸಲು ಆಸ್ಪತ್ರೆಯ ಸಿಬ್ಬಂದಿಯ ಸಹಾಯವನ್ನು ಪಡೆಯಿರಿ. ಹೆರಿಗೆ ನೋವು ಬಂದು ಪ್ರಸವದ ಸಮಯ ಸಮೀಪಿಸಿದಾಗ ಇದನ್ನು ಕಳಚಲು ಅವರ ಸಹಾಯವನ್ನು ಕೋರಿ.
3 ಲೋಷನ್ ಮತ್ತು ಲಿಪ್ ಬಾಮ್‌ಗಳನ್ನು ಇಟ್ಟುಕೊಂಡಿರಿ. ಹೆರಿಗೆ ಸಮಯದಲ್ಲಿ ನಿರ್ಜಲೀಕರಣದ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಲಿಪ್ ಬಾಮ್ ಗಳನ್ನು ಇಟ್ಟುಕೊಂಡಿರಿ. ಇವುಗಳು ಖಂಡಿತವಾಗಿ ನಿಮಗೆ ನೆರವಿಗೆ ಬರುತ್ತವೆ.
4 ನೈಟಿ ಮತ್ತು ಗೌನ್‌ಗಳನ್ನು ಬ್ಯಾಗ್‌ನಲ್ಲಿಟ್ಟುಕೊಳ್ಳಲು ಮರೆಯಬೇಡಿ. ಧರಿಸಲು ಸಡಿಲವಾಗಿರುವಂಥ ಮತ್ತು ಭಾರವಿಲ್ಲದ ಒಂದೆರಡು ನೈಟಿ ಅಥವಾ ಗೌನ್‌ಗಳನ್ನು ಪ್ಯಾಕ್ ಮಾಡಿ. ಹೆರಿಗೆಯ ನಂತರ ಒಂದು ವೇಳೆ ರಕ್ತಸ್ರಾವವಾಗುತ್ತಿದ್ದಲ್ಲಿ, ಬಟ್ಟೆ ಬದಲಿಸಿಕೊಳ್ಳಲು ಇವು ಬೇಕಾಗುತ್ತವೆ. ಹೆರಿಗೆಯ ಮೊದಲು ಮತ್ತು ನಂತರ- ಎರಡೂ ಸಂದರ್ಭಗಳಲ್ಲೂ ಇವು ನೆರವಿಗೆ ಬರುತ್ತವೆ.
5 ಹಿತಕರವಾದ ಒಳ ಉಡುಪುಗಳನ್ನು ಆರಿಸಿಕೊಳ್ಳಿ. ಆದಷ್ಟೂ ಹತ್ತಿಯ ಒಳ ಉಡುಪುಗಳನ್ನು ಬಳಿಸಿ. ಮೆಚ್ಚಿನ ಬ್ರಾಂಡ್‌ಗಳನ್ನು ಸ್ವಲ್ಪ ದಿನ ದೂರವಿಡಿ. ಆದಷ್ಟು ದೇಹದ ಗಾತ್ರಕ್ಕಿಂತ ಸ್ವಲ್ಪ ದೊಡ್ಡ ಒಳ ಉಡುಪನ್ನು ಖರೀದಿಸಿ. ಏಕೆಂದರೆ, ಸಿಸೇರಿಯನ್ ಹೆರಿಗೆಯಾದಲ್ಲಿ, ದೊಡ್ಡ ಒಳ ಉಡುಪುಗಳು ಗಾಯದ ಭಾಗಕ್ಕೆ ಸ್ಪರ್ಶಿಸುವುದಿಲ್ಲ ಅಥವಾ ಅದು ಮಾಯುವಾಗ ತೊಂದರೆ ಆಗುವುದಿಲ್ಲ.
6 ಹಾಗೆಯೇ ನರ್ಸಿಂಗ್ ಬ್ರಾ ಮತ್ತು ಪ್ಯಾಡ್‌ಗಳನ್ನೂ ಇಟ್ಟುಕೊಂಡಿರಿ. ಈ ವೇಳೆ ಇವು ಅತ್ಯವಶ್ಯ ವಸ್ತುಗಳು. ಇವುಗಳಿಂದ ಸಿಗುವ ನೆರವು ಬಹಳಷ್ಟು. ಅದರಲ್ಲೂ ನಿರಂತರವಾಗಿ ಹಾಲು ಸೋರಲು ಆರಂಭಿಸಿದರೆ, ಇವುಗಳ ಅವಶ್ಯಕತೆಯ ಅರಿವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.