ಬಸ್ ನಿಲ್ದಾಣದಲ್ಲಿ ಸುಲಿಗೆ!
Team Udayavani, Aug 9, 2017, 4:47 PM IST
ಬೀದರ: ರಸ್ತೆ ಸಾರಿಗೆ ಸಂಸ್ಥೆ ಜನರ ಬದುಕಿನ ಬಹುಮುಖ್ಯ ಭಾಗವಾಗಿದ್ದು ಪ್ರಯಾಣಿಕರ ಸೇವೆಯೇ ಅದರ ಮೂಲ ಉದ್ದೇಶ.
ಆದರೆ, ಸಂಸ್ಥೆಯ ಬಸ್ ನಿಲ್ದಾಣಗಳ ಅಂಗಡಿಯಲ್ಲಿ ಪ್ರಯಾಣಿಕರ ಹಗಲು ದರೋಡೆ ನಡೆಯುತ್ತಿದೆ. ಬಸ್ತುಗಳ ಮೇಲೆ ಎಂಆರ್‌ಪಿಗಿಂತ ಹೆಚ್ಚುವರಿ ಹಣ ಪಡೆದು ನಿರ್ಭೀತಿಯಿಂದ ಸುಲಿಗೆ ಮಾಡಲಾಗುತ್ತಿದ್ದು, ಗ್ರಾಹಕರು ಅನಿವಾರ್ಯವಾಗಿ ಹೆಚ್ಚು ಬೆಲೆಗೆ ವಸ್ತುಗಳನ್ನು ಖರೀದಿಸುವಂತಾಗಿದೆ. ಅಂಗಡಿಗಳಲ್ಲಿ ಗ್ರಾಹಕರಿಂದ ಯಾವುದೇ ವಸ್ತುಗಳಿಗೆ ಕನಿಷ್ಠ ಮಾರಾಟ ದರ (ಎಂಆರ್‌ಪಿ)ಕ್ಕಿಂತ ಹೆಚ್ಚು ಹಣ
ಪಡೆಯುವುದು ನಿಯಮದ ಪ್ರಕಾರ ಅಪರಾಧ. ಆದರೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯ ಬೀದರ ಸೇರಿದಂತೆ ಜಿಲ್ಲೆಯ ಎಲ್ಲ ಪ್ರಮುಖ ಬಸ್ ನಿಲ್ದಾಣಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿದೆ. ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಅಧಿಕ ಹಣ ಪಡೆಯುವುದು ಮಾಮೂಲು ಎಂಬಂತಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಅಂಗಡಿ ಮಾಲೀಕರದ್ದೇ ಆಟ, ಅವರು ಹೇಳಿದಷ್ಟೇ ದರ. ಇದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬಸ್ ಪ್ರಯಾಣದ ವೇಳೆ ಪ್ರಯಾಣಿಕರು ತಿಂಡಿ ತಿನಿಸು, ನೀರು, ತಂಪು ಪಾನೀಯ ಸೇವನೆ ಸಾಮಾನ್ಯ. ನಿಲ್ದಾಣಗಳಲ್ಲಿ ಬಹುತೇಕ ಬಸ್‌ಗಳು ಕೆಲವೇ ನಿಮಿಷಗಳ ವರೆಗೆ ನಿಲುಗಡೆಯಾಗುತ್ತವೆ. ಇದನ್ನೇ ನೆಪ ಮಾಡಿಕೊಂಡ ಮಳಿಗೆ ಮಾಲೀಕರು ಮೋಸದಾಟಕ್ಕೆ ಇಳಿದಿದ್ದಾರೆ. ಕಡಿಮೆ ಸಮಯದಲ್ಲಿ ನಿಲ್ದಾಣದ ಹೊರಗಡೆ ಹೋಗಿ ಖರೀದಿಸುವು ಅಸಾಧ್ಯ. ಒಳಗಿನ ಅಂಗಡಿಗಲ್ಲೇ ಸಾಮಗ್ರಿಗಳನ್ನು ಖರೀದಿಸಬೇಕು. ಇಲ್ಲವಾದರೆ ಬಸ್ ಕಳೆದುಬೇಕಾದ ಅನಿವಾರ್ಯ ಇರುತ್ತದೆ.
ಆಗ ಎಂಆರ್‌ಪಿ ದರವನ್ನು ಗಮನಿಸಲೂ ಆಗದು. ಹಾಗಾಗಿ ಕೇಳಿದಷ್ಟು ಹಣ ಕೊಟ್ಟು ಬಸ್ ಹತ್ತುತ್ತಾರೆ. ಬಹುತೇಕ ವಸ್ತುಗಳ
ಮೇಲೆ ಕನಿಷ್ಠ ಒಂದೆರೆಡು ರೂಪಾಯಿ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಕೆಲವೊಮ್ಮೆ ಎಂಆರ್‌ಪಿ ದರಕ್ಕಿಂತ ಅಧಿಕ ಹಣ ಕೇಳಿದರೆ ಗ್ರಾಹಕರು ಅಂಗಡಿಯವರನ್ನು ಪ್ರಶ್ನಿಸಿ ಮಾತಿನ ಸಂಘರ್ಷವನ್ನೂ ನಡೆಸಿದ ಉದಾಹರಣೆಗಳಿವೆ. ಆದರೆ, ಮಾಲೀಕ ಬೇಕಾದರೆ ತೆಗೆದುಕೊಳ್ಳಬಹುದು ಇಲ್ಲವಾದರೆ ಬೇಡ ಎಂಬ ಒರಟು ಉತ್ತರ ನೀಡುತ್ತಾನೆ. ಕೊನೆಗೂ ಪುಡಿಗಾಸಿಗಾಗಿ ಇಲ್ಲದ ಉಸಾಬರಿ ನಮಗೇಕೆ ಎಂದು ಹೆಚ್ಚುವರಿ ಹಣ ತೆತ್ತು ಸಾಮಗ್ರಿಗಳನ್ನು ಖರೀದಿಸುತ್ತಾರೆ. ಇದರಿಂದ ಅಂಗಡಿಯವರಿಗೆ ಮತ್ತಷ್ಟು ಉತ್ತೇಜನ
ಸಿಕ್ಕಂತಾಗುತ್ತಿದೆ. ಸಾಮಾನ್ಯವಾಗಿ ತಿಂಡಿ- ತಿನಿಸುಗಳಿಗೆ ಒಂದೆರೆಡು ರೂಪಾಯಿ ಅ ಧಿಕ ದರ ಪಡೆದರೆ ಕುಡಿಯುವ ನೀರು, ತಂಪು ಪಾನೀಯಕ್ಕೆ ಅದಕ್ಕಿಂತ ಅಧಿ ಕ ಹಣ ಕೀಳಲಾಗುತ್ತಿದೆ. ನೀರು, ಕೂಲ್ಡ್ರಿಕ್ಸ್‌ನ್ನು ಪ್ರಿಜ್‌ನಲ್ಲಿಟ್ಟಿರುತ್ತೇವೆ. ಇದಕ್ಕೆ ವಿದ್ಯುತ್ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಹೇಳಿ ಎರಡೂಮೂರು ರೂಪಾಯಿ ಹೆಚ್ಚುವರಿ ದರ ಪಡೆಯಲಾಗುತ್ತಿದೆ. ಪ್ರಯಾಣಿಕರ ಸುಲಿಗೆ
ಅವ್ಯಾಹತವಾಗಿ ನಡೆಯುತ್ತಿದ್ದರೂ ಸಾರಿಗೆ ಸಂಸ್ಥೆ ಅಧಿ ಕಾರಿಗಳು ಮೌನ ವಹಿಸುತ್ತಾರೆ. ಈ ವಿಷಯವನ್ನು ಗಂಭೀರವಾಗಿ
ಪರಿಗಣಿಸಿದಲ್ಲಿ ಮಾತ್ರ ಅಂಗಡಿಯವರ ಉಪಟಳ ನಿಯಂತ್ರಿಸಲು ಸಾಧ್ಯ. ಎಂಆರ್‌ಪಿಗಿಂತ ಹೆಚ್ಚುವರಿ ಹಣ ಕೊಡುವ ಮುನ್ನ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ. ಅಂಗಡಿಯವರನ್ನು ಪ್ರಶ್ನಿಸುವುದು ಹಕ್ಕು. ಸುಲಿಗೆ ಮಾಡುವುದು ಕಾನೂನು ರಿತ್ಯ ಅಪರಾಧ. ಇದರ ವಿರುದ್ಧ ಸಾರಿಗೆ ಸಂಸ್ಥೆ ಡಿಟಿಒ ಮತ್ತು ಗ್ರಾಹಕರ ವೇದಿಕೆಗೆ ದೂರು ನೀಡಲು ಅವಕಾಶ ಇದೆ. ಗ್ರಾಹಕ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕಿದೆ.
ಶಶಿಕಾಂತ ಬಂಬುಳಗೆ
ಗಮನ ಹರಿಸಲಿ ಬೀದರ ಬಸ್ ನಿಲ್ದಾಣದಲ್ಲಿ ವಸ್ತುಗಳಿಗೆ ಕನಿಷ್ಠ ಮಾರಾಟ ದರಕ್ಕಿಂತ ಅಧಿಕ ಹಣ ಪಡೆಯಲಾಗುತ್ತಿದೆ. ನಿಲ್ದಾಣದಲ್ಲಿ ಬಸ್ ಕೆಲವು ನಿಮಿಷ ಮಾತ್ರ ನಿಲ್ಲುವುದರಿಂದ ಅಂಗಡಿಯವರು ಕೇಳಿದಷ್ಟು ಹಣ ಕೊಡುವ ಅನಿವಾರ್ಯತೆ ಇದೆ. ಕೆಲವೊಮ್ಮೆ ಪ್ರಶ್ನಿಸಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವಾದರೆ ಹೋಗಿ ಎಂದು ಮೊಂಡುತನ ಪ್ರದರ್ಶಿಸುತ್ತಾರೆ. ಎನ್ ಈಕೆಆರ್‌ಟಿಸಿ ಅಧಿಕಾರಿಗಳು ಗಮನಹರಿಸಬೇಕು. ಎನ್. ವಿಜಯಕುಮಾರ, ಪ್ರಯಾಣಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.