ಪತ್ರಿಕಾರಂಗದ ವಿಶ್ವಾಸದ ವಿರುದ್ಧ ವ್ಯವಸ್ಥಿತ ಪಿತೂರಿ: ಮಟ್ಟು 


Team Udayavani, Aug 10, 2017, 7:55 AM IST

Z-PRESS-CLUB-2.jpg

ಮಡಿಕೇರಿ: ಪತ್ರಿಕಾ ವೃತ್ತಿ ಇಂದು ಉದ್ಯಮ ವಾಗಿ ಬದಲಾಗಿದ್ದು, ಹಲವು ಅನಾಹುತಕಾರಿ ಬೆಳವಣಿ ಗೆಗಳಿಗೆ ಎಡೆ ಮಾಡಿಕೊಟ್ಟಿದೆ. ಜನರು ಪತ್ರಿಕಾ ರಂಗದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬೇಕೆನ್ನುವ ವ್ಯವ ಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್‌ ಅಮೀನ್‌ ಮಟ್ಟು ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡಗು ಪ್ರಸ್‌ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದ ಗ್ರಹಣ ಮತ್ತು ಕಾರ್ಯ
ಚಟುವಟಿಕೆಗಳ ಆರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು.

ಪತ್ರಿಕೋದ್ಯಮ ಇಂದು ಬಂಡವಾಳ ಹಾಕಿ ಲಾಭ ತೆಗೆಯುವ ಪರಿಸ್ಥಿತಿಗೆ ಬಂದು ತಲುಪಿದೆ. ಟಾಯ್ಲೆಟ್‌ ಸೋಪ್‌ ಮಾರಾಟ ಮತ್ತು ಪತ್ರಿಕೆಯ ಮಾರಾಟ ಒಂದೇ ಆಗಿದೆ. ವೃತ್ತಿಯಲ್ಲಿ ಸಾಮಾಜಿಕ ಜವಾಬ್ದಾರಿ ಇರಬೇಕು. ಪತ್ರಿಕೆಗಳನ್ನು ಸುಳ್ಳು ಹೇಳಿ ಮಾರಾಟ ಮಾಡಬಾರದು. ಇಂದು ಜಾಹೀರಾತುಗಳನ್ನು ಮೊದಲು ಹಾಕಿ ಉಳಿದ ಪುಟಗಳಲ್ಲಿ ಸುದ್ದಿಯನ್ನು ಹಾಕುವಂತಹ ಪರಿಸ್ಥಿತಿ ಬಂದಿದೆಯೆಂದು ದಿನೇಶ್‌ ಅಮೀನ್‌ ಮಟ್ಟು ಬೇಸರ ವ್ಯಕ್ತ‌ಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ 
ಪತ್ರಿಕೋದ್ಯಮದ ಬಿಸ್ನೆಸ್‌ ಮಾಡೆಲ್‌ನಲ್ಲಿ  ನ್ಯೂನತೆ ಇದೆಯೆಂದು ಅಭಿಪ್ರಾಯಪಟ್ಟ ಅವರು, ಮಾಧ್ಯಮ ಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಈ ರೀತಿಯ ಬೆಳವಣಿಗೆಯ ಷಡ್ಯಂತ್ರ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತದೆ. ಶಕ್ತಿಶಾಲಿಯಾದ ಮಾಧ್ಯಮ ಮತ್ತು ಪ್ರಜಾ ಪ್ರಭುತ್ವ ಒಟ್ಟಿಗೆ ಸಾಗಬೆೇಕಾಗುತ್ತದೆ. ಜನರು ಮಾಧ್ಯಮದ ಮೇಲಿನ ವಿಶ್ವಾಸವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾದಂತೆ ಎಂದು ದಿನೇಶ್‌ ಅಮೀನ್‌ ಮಟ್ಟು ತಿಳಿಸಿದರು.

ಇಂದು ಪತ್ರಕರ್ತರು, ಮಾಧ್ಯಮಗಳ ಮಾಲೀಕರು ಹಾಗೂ ಓದುಗರ ಮನೋಭಾವ ಬದಲಾ ಗಿದೆ. ಪತ್ರಕರ್ತರನ್ನು ಜನರು ಸಮಾಜ ಸೇವಕರಂತೆ ನೋಡುತ್ತಾರೆ. ಯುವ ಪತ್ರಕರ್ತರು ಓದಿನ ಕಡೆಗೆ ಹೆಚ್ಚು ಗಮನ ಹರಿಸಿದರೆ ಉತ್ತಮ ಪತ್ರಕರ್ತ ರಾಗಬಹುದು. ಓದಿನಿಂದ ಹೊಸ ಆಲೋಚನೆಗಳು, ಸ್ಪಷ್ಟತೆಗಳು ಸಿಗುತ್ತವೆೆ. ಜ್ಞಾನ ಸಂಪಾದನೆಯಿಂದ ಉತ್ತಮ ಪತ್ರಕರ್ತರಾಗಲು ಸಾಧ್ಯವೆಂದ ದಿನೇಶ್‌ ಅಮೀನ್‌ ಮಟ್ಟು, ಪ್ರತಿಯೊಬ್ಬ ಪತ್ರಕರ್ತನಿಗೆ ಸೂಕ್ಷ್ಮ ಮನಸ್ಸಿರಬೇಕು. ಬಡವರ ಬಗ್ಗೆ ತಿರಸ್ಕಾರ ಮನೋಭಾವನೆ ಇರಬಾರದು. ಸಾಮಾಜಿಕ ಭದ್ರತೆಯ ಲೋಪದ ಬಗ್ಗೆ ಆಲೋಚನೆ ಮಾಡುವ ಶಕ್ತಿಯನ್ನು ಹೊಂದಬೇಕು. ಸೂಕ್ಷ್ಮತೆಯನ್ನು ಕಳೆದುಕೊಳ್ಳುವುದು ತಮ್ಮ ವೃತ್ತಿ ಬದುಕಿನ ಅಪಾಯಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಹೆಣಗಳ ಆಸಕ್ತಿ ಬೇಡ 
ಹೆಣಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವ ಬದಲು ಬದುಕಿರುವವರ ಬಗ್ಗೆ ಕಾಳಜಿ ತೋರಿದರೆ ಮತ್ತಷ್ಟು ಸಾವುಗಳು ಸಂಭವಿಸುವುದನ್ನು ತಡೆಯಬಹುದೆಂದು ರೈತರ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖೀಸಿ ಅವರು ಹೇಳಿದರು. ಟಿವಿ ಮಾಧ್ಯಮಗಳಿಗೆ ಉರಿಯುವ ಸುದ್ದಿ ಬೇಕೆಂದು ವಿಷಾದಿಸಿದ ಅವರು, ಇಂದು ಪತ್ರಿಕೆಗಳು ಟಿವಿಯ ಹೆಡ್‌ಲೈನ್‌ಗಳನ್ನೆ ಕಾಪಿ ಮಾಡುತ್ತಿವೆಯೆಂದು ಬೆೇಸರ ವ್ಯಕ್ತಪಡಿಸಿದರು.
ಟಿವಿಗಳ ಲೀಡ್‌ ಸುದ್ದಿಯನ್ನು ಪತ್ರಿಕೆೆಗಳು ನಮ್ಮ ಮುಂದಿನ ದಿನದ ಲೀಡ್‌ ಆಗಿ ನಿರ್ಧರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಾಧ್ಯಮಗಳಿಂದ ಭಾಷೆ ಕೆಡುತ್ತಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿದೆ. ಇದು ನಿಜವಾಗಿದ್ದು, ಭ್ರಷ್ಟ ಸಮಾಜವನ್ನು ಮತ್ತು ಭ್ರಷ್ಟರ ವಿರುದ್ಧ ಹೋರಾಡುವ ಆತುರದಲ್ಲಿ ಮಾಧ್ಯಮಗಳ ಭಾಷೆಯ ಬಳಕೆ ಹದಗೆಡುತ್ತಿದೆಯೆಂದು ಅವರು ಅಭಿಪ್ರಾಯಪಟ್ಟರು.

ಜ್ಞಾನ ಮತ್ತು ಸಿದ್ಧತೆಯ ಕೊರತೆ 
ಪತ್ರಕರ್ತರ ವೃತ್ತಿ ಬದುಕು ಮಾತ್ರ ಸರಿ ಇದ್ದರೆ ಸಾಲದು ತಮ್ಮ ವೈಯಕ್ತಿಕ ಬದುಕು ಕೂಡ ಸರಿಯಾಗಿರ ಬೇಕೆಂದ ದಿನೇಶ್‌ ಅಮೀನ್‌ ಮಟ್ಟು, ಉತ್ತಮ ಸಂಗವನ್ನು ಹೊಂದಿರಬೇಕೆಂದರು. ಯಾವುದೋ ಅನ್ಯ ಗ್ರಹದಿಂದ ನಾವು ಬಂದಿದ್ದೇವೆ ಎನ್ನುವ ರೀತಿ ಯಲ್ಲಿ ಪತ್ರಕರ್ತರ ವರ್ತನೆ ಇರಬಾರದು. 

ನಾವು ಮಾಡುವ ವರದಿ ನಮಗಿಂತ ದೊಡ್ಡದು ಎನ್ನುವ ಮನೋಭಾವನೆ ಇರಬೇಕು. ಹೊಸ ತಲೆಮಾರಿನ ಪತ್ರಕರ್ತರಲ್ಲಿ ಜ್ಞಾನ ಮತ್ತು ಸಿದ್ಧತೆಯ ಕೊರತೆ ಇದೆ. ಓದುಗರ ನ‌ಂಬಿಕೆಯನ್ನು ಉಳಿಸುವ ಕೆಲಸವನ್ನು ಪತ್ರಿಕೆಗಳು ಮಾಡಬೇಕಾಗಿದೆ. ಆದರೆ, ಇಂದು ಜಾಹೀರಾತಿನ ಭರಾಟೆಯಿಂದ ಪತ್ರಿಕೆಗಳಿಗೆ ಓದುಗರು ಬೇಕಾಗಿಲ್ಲ. ಕೇವಲ ಗ್ರಾಹಕರು ಇದ್ದರೆ ಸಾಕೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು.

ಪತ್ರಿಕೋದ್ಯಮದ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಳ್ಳಬೇಕೆಂದು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಪತ್ರಕರ್ತರು ನಿರಾಶಾವಾದಿಗಳಾಗಬಾರದೆಂದು ದಿನೇಶ್‌ ಅಮೀನ್‌ ಮಟ್ಟು ಕಿವಿ ಮಾತು ಹೇಳಿದರು.

ಸಮಾನತೆಯಿಂದ ನೋಡಬೇಕು
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಸ್‌ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತ ಶಯನ, ಪತ್ರಕರ್ತರು ನ್ಯಾಯಾಲಯದಂತೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಾರೆ. ವ್ಯಕ್ತಿತ್ವ, ಕಾರ್ಯದಕ್ಷತೆಯೊಂದಿಗೆ ಮಾನವೀಯತೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಪತ್ರಕರ್ತರಿಗೆ ಸ್ವಸಾಮರ್ಥ್ಯ ಮುಖ್ಯವೇ ಹೊರತು, ತಾತ್ಕಾಲಿಕ ನಾಯಕಗಿರಿಗೆ ಪ್ರಯತ್ನಿಸಬಾರದೆಂದರು. ಸಮಾಜದಲ್ಲಿ ಎಲ್ಲರನ್ನು ಸಮಾನತೆಯಿಂದ ನೋಡುವ ಗುಣವನ್ನು ಪತ್ರಕ ರ್ತರು ಹೊಂದಿರಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌, ಪತ್ರಿ ಕೋದ್ಯಮದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದು, ಇದರ ಜತೆಯಲ್ಲಿ ಮೌಲ್ಯವೂ ಉಳಿಯಬೇಕೆಂದರು.

ಪ್ರಸ್‌ಕ್ಲಬ್‌ನ ನೂತನ ಅಧ್ಯಕ್ಷರಾದ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಪ್ರಾಸ್ತಾವಿಕ ಮಾತನಾಡಿ, ಜನರ ವಿಶ್ವಾಸಗಳಿಸುವ ಸುದ್ದಿಯನ್ನು ಮಾಡುವ ಮೂಲಕ ಸಮಾಜಮುಖೀ ಚಿಂತನೆಗಳನ್ನು ಪತ್ರಕರ್ತರು ಮಾಡ ಬೇಕೆಂದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್‌ ಉಪಸ್ಥಿತರಿದ್ದರು.ಇದೇ ಸಂದರ್ಭ ಕ್ಲಬ್‌ನ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಟಾಪ್ ನ್ಯೂಸ್

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ

Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

5

Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.