ಎಲ್ಲೂರು ಗ್ರಾ.ಪಂ.ನಲ್ಲಿ 1.25 ಕೋಟಿ ರೂ. ಅಭಿವೃದ್ಧಿ ಕಾರ್ಯ
Team Udayavani, Aug 10, 2017, 7:40 AM IST
ಪಡುಬಿದ್ರಿ: ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆ ತನ್ನ ಸಿಎಸ್‌ಆರ್ ಯೋಜನೆಯಡಿ ಎಲ್ಲೂರು ಗ್ರಾಮದಲ್ಲಿ ಮೂಲಸೌಕರ್ಯ ವೃದ್ಧಿಗಾಗಿ 2017-18ನೇ ಸಾಲಿಗೆ 1.25 ಕೋ.ರೂ.ಗಳ ಅನುಮೋದನಾ ಪತ್ರವನ್ನು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್ ಅವರಿಗೆ ನೀಡಿದೆ. ಇದೇ ವೇಳೆ ಎಲ್ಲೂರು ಗ್ರಾ.ಪಂ. ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್ ಅವರು 2017-18ನೇ ಸಾಲಿನಲ್ಲಿ ಎಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಅವರಿಗೆ ಹಸ್ತಾಂತರಿಸಿದರು.
3.75 ಕೋ.ರೂ. ಘೋಷಣೆ
ಈ ಸಂದರ್ಭ ಕಿಶೋರ್ ಆಳ್ವ ಮಾತನಾಡಿ, ಎಲ್ಲೂರು ಗ್ರಾಮಕ್ಕೆ ಅದಾನಿ ಸಂಸ್ಥೆಯು ಸಿ.ಎಸ್.ಆರ್. ಅನುದಾನದಡಿ 3 ವರ್ಷಗಳ ಅವಧಿಗೆ ಒಟ್ಟು 3.75 ಕೋಟಿ ರೂ. ನೆರವನ್ನು ಘೋಷಿಸಿದೆ. 2016-17ನೇ ಸಾಲಿನಲ್ಲಿ 76 ಲ.ರೂ.ಗಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಅದಾನಿ ಯುಪಿ ಸಿಎಲ್ ಪೂರ್ಣಗೊಳಿಸಿದೆ ಎಂದರು.
ಸಿಮೆಂಟ್ ಪ್ಲಾಂಟ್, ಶುದ್ಧ ನೀರು ಪೂರೈಕೆ ಯೋಜನೆ
ಯುಪಿಸಿಎಲ್ ಸದ್ಯ 2 ಘಟಕಗಳಿಂದ ಉತ್ಪತ್ತಿಯಾಗುವ ಹಾರು ಬೂದಿಯನ್ನು ಸಂಪೂರ್ಣವಾಗಿ ಉಪಯೋಗಿಸಲು ಹಾಗೂ ಯೋಜನೆ ವಿಸ್ತರಣೆಯ 2,800 ಮೆ.ವ್ಯಾ. ಘಟಕದಲ್ಲಿ ಉತ್ಪತ್ತಿಯಾಗುವ ಹಾರುಬೂದಿಯನ್ನು ಸದ್ಬಳಕೆ
ಮಾಡಲು ಸ್ಥಾವರದ ವಠಾರದಲ್ಲಿ ಸಿಮೆಂಟ್ ಗೆùಂಡಿಂಗ್ ಘಟಕವನ್ನು ಸ್ಥಾಪಿಸಲು ನಿರ್ಣಯಸಲಾಗಿದೆ. ಸಿಮೆಂಟ್
ಘಟಕದಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ದೊರೆಯುತ್ತವೆ. ಇದಲ್ಲದೆ ಮಂಗಳೂರಿನ ಕೈಗಾರಿಕಾ ಸಂಸ್ಥೆಗಳ ಚಟುವಟಿಕೆಗಳಿಗೆ ನೀರಿನ ಬೇಡಿಕೆ ಇದ್ದು, ಅದನ್ನು ಪೂರೈಸಲು ಸಮುದ್ರ ನೀರನ್ನು ಶುದ್ಧೀಕರಿಸುವ ಡಿಸಲನೈಸೇಷನ್ ಘಟಕವನ್ನು ಸ್ಥಾಪಿಸಲು ಅದಾನಿ ಸಮೂಹವು ಯೋಜನೆಯನ್ನು ಹಾಕಿಕೊಳ್ಳÛಲಿದೆ ಎಂದು ಆಳ್ವ ಈ ಸಂದರ್ಭದಲ್ಲಿ ತಿಳಿಸಿದರು.
ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್ ಮಾತನಾಡಿದರು. ಸದಸ್ಯರಾದ ಪೂರ್ಣಿಮಾ ಪ್ರಸಾದ್, ರವಿರಾಜ್ ರಾವ್, ಸದಾಶಿವ ಶೆಟ್ಟಿ, ಲೀಲಾ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ, ಯುಪಿಸಿಎಲ್ ಕಂಪೆನಿಯ ಎಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಹಾಗೂ ಬೆಳಪು ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.