ಸ್ವಾರ್ಥ ರಹಿತ ಜೀವನ ಯುವಕರದ್ದಾಗಲಿ
Team Udayavani, Aug 10, 2017, 1:44 PM IST
ಕೆಂಗೇರಿ: ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಹಾಗೂ ಸ್ವಾರ್ಥರಹಿತ ಜೀವನ ಕ್ರಮ ರೂಢಿಸಿಕೊಳ್ಳುವ ಮೂಲಕ ದೇಶದ
ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಆದಿಚುಂಚನಗಿರಿ ಪೀಠಾದೀಶರಾದ ಡಾ.ನಿರ್ಮಲಾನಂದನಾಥಸ್ವಾಮೀಜಿ ಸಲಹೆ
ನೀಡಿದ್ದಾರೆ. ಉತ್ತರಹಳ್ಳಿ ಮುಖ್ಯರಸ್ತೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ
ಆಯೋಜಿಸಿದ್ದ ಪ್ರಥಮ ವರ್ಷದ ಬಿ.ಇ.ತರಗತಿಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, “ವಿದ್ಯಾರ್ಥಿಗಳು ಗುರುಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ವಿದ್ಯಾರ್ಜನೆ ಮಾಡಬೇಕು. ಜ್ಞನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಜೀವನ ಕೌಶಲ್ಯ ರೂಢಿಸಿಕೊಂಡು ದೇಶಕ್ಕೆ ಪೂರಕವಾಗುವಂತಹ ಸಂಶೋಧನೆಗಳನ್ನು ಕೈಗೊಂಡು ಸಮಾಜದ ಏಳಿಗೆಗೆ ಕೊಡುಗೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಗುರು-ಹಿರಿಯರನ್ನು ಕಡೆಗಣಿಸುವ ಪ್ರವೃತ್ತಿ ಯುವ ಸಮುದಾಯದಲ್ಲಿ ಹೆಚ್ಚುತ್ತಿದೆ,’
ಎಂದು ವಿಷಾದಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿ, “ಹಿಂದಿನ ಕಾಲದಲ್ಲಿ ಜನ ಗುರು-ಹಿರಿಯರಲ್ಲಿ ಭಕ್ತಿ, ಭಾವ, ಪ್ರೀತಿ ಉಳ್ಳವರಾಗಿದ್ದರು. ಉತ್ತಮ ಬಾಂಧವ್ಯದೊಂದಿಗೆ ಸಂಸ್ಕೃತಿಯನ್ನು ಬೆಳೆಸುತ್ತಿದ್ದರು. ಈಗಿನ ಯಾಂತ್ರಿಕ ಬದುಕಿನಲ್ಲಿ ಸಾವಿಗೂ ಅನುಕಂಪ ತೋರುವುದನ್ನು ಮರೆತಿದ್ದೇವೆ. ವೃತ್ತಿ
ಕಾರಣಗಳಿಗಾಗಿ ದೇಶವನ್ನು ತೊರೆದು ವಿದೇಶದಲ್ಲಿ ವಾಸವಾಗುತ್ತಿರುವ ಯುವಕರು ತಂದೆ ತಾಯಂದಿರನ್ನು ಕಡೆಗಣಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ತಂದೆ- ತಾಯಂದಿರನ್ನು ಗೌರವ ಪ್ರೀತಿಯಿಂದ ಕಾಣುವ ಮನೋಭಾವವನ್ನು
ಬೆಳೆಸಿಕೊಂಡಾಗ ಮಾತ್ರ ನಮ್ಮ ಸಂಸ್ಕೃತಿಯ ಮಹತ್ವ ಹೆಚ್ಚಾಗುತ್ತದೆ,’ ಎಂದರು. ಸಮಾರಂಭದಲ್ಲಿ ಬಿಜಿಎಸ್ ಸಮೂಹ
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ದೆಹಲಿಯ ಕೌನ್ಸಿಲ್ ಅಫ್ ಆರ್ಕಿಟೆಕ್ಚರ್ ವಿಭಾಗದ ಉಪಾಧ್ಯಕ್ಷ ಎ.ಆರ್.ವಿಜಯಗಾರ್ಗ್, ವಿಪ್ರೊ ಸಂಸ್ಥೆಯ ಸುನಿಲ್ ಕಾಳಾಚಾರ್, ಆದಿಚುಂಚನಗಿರಿ ಸಂಸ್ಥೆಯ ಕಾರ್ಯಕಾರಿ ಸದಸ್ಯ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.