ಇದು ಕನ್ನಡದ ಕಾದಲ್!
Team Udayavani, Aug 11, 2017, 7:55 AM IST
ಇಲ್ಲ ಈ ಹೆಸರು ಕೊಡೋಕ್ಕಾಗಲ್ಲ, ಕನ್ನಡದ ಹೆಸರನ್ನು ತನ್ನಿ ಎಂದರಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು. ಆದರೆ, ಮುರಳಿ ಅದೆಲ್ಲಿ ಪತ್ತೆ ಮಾಡಿದರೋ ಗೊತ್ತಿಲ್ಲ, ಇದು ತಮಿಳಿನ ಪದವಲ್ಲ, ಹಳೆಗನ್ನಡದ ಪದ ಎಂದು ವಾದ ಮಾಡಿದರು. ಕೊನೆಗೆ ಮಂಡಳಿಯವರು ಒಂದಿಷ್ಟು ಪರಿಶೀಲನೆ ಮಾಡಿ, ಇಟ್ಕೊà ಹೋಗಿ ಎಂದು ಟೈಟಲ್ ಕೊಟ್ಟು ಕಳಿಸಿದರಂತೆ. ಹಾಗೆ ಮಂಡಳಿಯಿಂದ ಪಾಸ್ ಆದ, “ಕಾದಲ್’ ಇದೀಗ ಬಿಡುಗಡೆಗೆ ಸಿದ್ಧವಿದೆ. ಈ ಚಿತ್ರವನ್ನು ಆಗಸ್ಟ್ 18ಕ್ಕೆ ಬಿಡುಗಡೆ ಮಾಡಲಾಗು ತ್ತದಂತೆ. ಚಿತ್ರದ ಬಿಡುಗಡೆಯ ಬಗ್ಗೆ ಹೇಳುವುದಕ್ಕೆಂದೇ ಮುರಳಿ ಮತ್ತು ತಂಡದವರು ಇತ್ತೀಚೆಗೆ ಗ್ರೀನ್ ಹೌಸ್‌ಗೆ ಬಂದಿದ್ದರು.
ಮುರಳಿ ಈ ಹಿಂದೆ “ಮಮ್ತಾಜ್’ ಎಂಬ ಚಿತ್ರ ಮಾಡಿದ್ದರು. ಇದೀಗ ಇನ್ನೂ ಒಂದು ಪ್ರೇಮಕಥೆಯೊಂದಿಗೆ ಅವರು ವಾಪಸ್ಸಾಗಿದ್ದಾರೆ. ಸರಿ ಏನು ಕಥೆ ಎಂದು ಕೇಳಲಾಯಿತು. ನೋಡದೆ ಪ್ರೀತಿ ಮಾಡದ ಪ್ರೇಮಿಗಳು, ಕೊನೆಗೆ ಹೇಗೆ ಒಂದಾಗುತ್ತಾರೆ ಎನ್ನುವುದೇ ಚಿತ್ರದ ಕಥೆ ಎಂದರು ಮುರಳಿ. ಈ ತರಹದ ಕಥೆಗಳು ಬಹಳ ಬಂದಿವೆಯಲ್ಲ ಎಂದು ಅವರಿಗೆ ನೆನಪಿಸಲಾಯಿತು. ಕಥೆ ಹಳೆಯದಾದರೂ ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ಕಥೆ ಮಾಡಿದ್ದಾಗಿ ಅವರು ಹೇಳಿಕೊಂಡರು. “ಇಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಹೇಗೆ ಲವ್ ಆಗುತ್ತದೆ ಮತ್ತು ಅವರಿಬ್ಬರು ಹೇಗೆ ಒಂದಾಗುತ್ತಾರೆ ಎನ್ನುವುದು ಚಿತ್ರದ ಕಥೆ. ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಎರಡು ಫೈಟುಗಳು, ನಾಲ್ಕು ಹಾಡುಗಳಿವೆ. ಕೇಬಲ್ ಪ್ರವೀಣ್ ಎನ್ನುವವರು ಸಂಗೀತ ಸಂಯೋಜಿಸಿದ್ದಾರೆ’ ಎಂದು ಮಾಹಿತಿ ಕೊಟ್ಟರು ಮುರಳಿ.
ಚಿತ್ರಕ್ಕೆ ಆಕಾಶ್ ನಾಯಕ. “ಪ್ರೀತಿಯಲ್ಲಿ ಅದೆಷ್ಟೇ ಕಷ್ಟಗಳು ಬಂದರೂ, ಹೇಗೆ ಅದನ್ನೆಲ್ಲಾ ಮೀರಿ ಬದುಕಬೇಕು ಎಂಬುದು ಕಥೆ. ಚಿತ್ರದಲ್ಲಿ ನಾನು ಚಿತ್ರವೊಂದರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿರುತ್ತೀನಿ. ನಾಯಕಿ ಹಳ್ಳಿàಲಿರ್ತಾಳೆ’ ಎಂದರು. ಚಿತ್ರದಲ್ಲಿ ಧರಣಿ ಎಂಬ ಮೈಸೂರಿನ ಹುಡುಗಿ ನಾಯಕಿಯಾಗಿ ನಟಿಸಿದ್ದಾರೆ.
ಇನ್ನು ಚಿತ್ರವನ್ನು ಸುರೇಶ್ ನಿರ್ಮಿಸುತ್ತಿದ್ದಾರೆ. ಅವರಿಗೆ ನಿರ್ಮಾಪಕರಾಗಬೇಕೆಂಬ ಯೋಚನೆ ಇರಲಿಲ್ಲವಂತೆ. ಮಗನ ಕಾರಣಕ್ಕೆ ನಿರ್ಮಾಪಕರಾಗಿದ್ದಾಗಿ ಸುರೇಶ್ ಹೇಳಿಕೊಂಡರು. ಅಂದಹಾಗೆ, ನಾಯಕ ಆಕಾಶ್ ಅವರ ಮಗ. ಆತ ಹೀರೋ ಆಗಬೇಕು ಎಂದು ಆಸೆಪಟ್ಟಿದ್ದರಿಂದ, ಈ ಚಿತ್ರ ಮಾಡಿದ್ದಾಗಿ ಅವರು ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.