ರೆಂಜ-ನಿಡ್ಪಳ್ಳಿ ರಸ್ತೆಯಲ್ಲಿ ಸಂಚಾರ ಕಷ್ಟಕರ
Team Udayavani, Aug 11, 2017, 8:25 AM IST
ನಿಡ್ಪಳ್ಳಿ : ಕೇಬಲ್ ಅಳವಡಿಸಲು ಚರಂಡಿ ಅಗೆದ ಪರಿಣಾಮವಾಗಿ ರೆಂಜ ದಿಂದ ನಿಡ್ಪಳ್ಳಿಗೆ ಹೋಗುವ ಡಾಮರು ರಸ್ತೆಯಲ್ಲಿ ಸಂಪೂರ್ಣ ಕೆಸರು ತುಮಬಿಕೊಂಡಿದೆ. ಪಾದಚಾರಿಗಳಿಗೆ ಹಾಗೂ ವಾಹನ ಚಾಲಕರಿಗೆ ಸಂಚಾರ ನಡೆಸುವುದು ಕಿರಿಕಿರಿ ಉಂಟುಮಾಡಿದೆ.
ನಿಡ್ಪಳ್ಳಿ ಗ್ರಾಮ ಪಂಚಾಯತ್ಗೆ ಇಂಟರ್ನೆಟ್ ಸಂಪರ್ಕ ಅಳವಡಿಸಲು ಬಿಎಸ್ಸೆನ್ನೆಲ್ಅವರು ರೆಂಜದಿಂದ ಪಂಚಾಯತ್ನವರೆಗೆ ಚರಂಡಿ ತೆಗೆದಿದ್ದಾರೆ. ಜೋರು ಮಳೆ ಬಂದ ಕಾರಣ ನೀರು ಹರಿಯಲು ಚರಂಡಿಯೂ ಇಲ್ಲದೆ ತೊಂದರೆಯಾಗಿದೆ. ಇದರಿಂದಾಗಿ ರಸ್ತೆಯಲ್ಲಿ ನಡೆದಾಡಲೂ ಆಗದಂತೆ ಮಾಡಿದ ಕಂಪೆನಿಯಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.