“ಶಾಂತಾರಾಮ ಜೀವನ ಶೈಲಿ ಅನುಕರಣೀಯ’
Team Udayavani, Aug 11, 2017, 7:25 AM IST
ಮೂಲ್ಕಿ: ಮಣಿಪಾಲ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಡಾ| ಮಾಧವ ಪೈ ಅವರ ನಿಕಟ ವರ್ತಿಯಾಗಿ ಕಳೆದ 55 ವರ್ಷಗಳಿಂದ ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಶನ್ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿ ತನ್ನ 90ನೇ ವರ್ಷದ ಇಂದಿಗೂ ಯುವಕನಂತೆ ಶ್ರಮಿಸುತ್ತಿರುವ ಡಾ| ಎಚ್. ಶಾಂತಾ ರಾಮ ಜೀವನ ಶೈಲಿ ಮತ್ತು ಸಾಧನೆ ಅತ್ಯಂತ ಶ್ರೇಷ್ಠವಾದುದು ಎಂದು ಮಣಿ ಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಶನ್ ಅಧ್ಯಕ್ಷ ಡಾ| ಎಚ್.ಎಸ್.ಬಲ್ಲಾಳ್ ಹೇಳಿದರು.
ಗುರುವಾರ ಮೂಲ್ಕಿ ವಿಜಯ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸಂಯುಕ್ತವಾಗಿ ಏರ್ಪಡಿಸಿದ ಡಾ| ಎಚ್.ಶಾಂತಾರಾಮ ಅವರ 90ನೇ ಹುಟ್ಟು ಹಬ್ಬದ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಮಾಡಿರುವ ಸಾಧನೆ ಯೇ ಮುಖ್ಯ. ಅಂತಹ ಸಾಧಕರಲ್ಲಿ ಡಾ| ಶಾಂತಾರಾಮ ಅವರ ಪತ್ನಿ ಡಾ| ವಿಜಯ ಲಕ್ಷ್ಮಿ ಕೂಡ ಪತಿಯ ಸಾಧನೆಯಲ್ಲಿ ನೀಡಿರುವ ಪ್ರೋತ್ಸಾಹ ಇವರ ಸಾಧನೆಗೆ ಪೂರಕ ಎಂದು ಅವರು ಹೇಳಿದರು.
ಪ್ರಯತ್ನದ ಫಲ
ಸಮ್ಮಾನಕ್ಕೆ ಉತ್ತರಿಸಿದ ಡಾ| ಶಾಂತಾ ರಾಮ್ ಮಾತನಾಡಿ, ಜೀವನ ದಲ್ಲಿ ಆರೋಗ್ಯ, ಆಯಸ್ಸು ಮತ್ತು ಐಶ್ವರ್ಯ ಯಾವುದೇ ಹಾರೈಕೆಯಿಂದ ಬರದು. ಇದು ಪ್ರತಿಯೊಬ್ಬನ ಪ್ರಯತ್ನದ ಸಾಧನೆಯಿಂದ ಮಾತ್ರ ಸಾಧ್ಯ. ನಾನು ಶಿಕ್ಷಣ ಪ್ರೇಮಿ. ವಿದ್ಯಾರ್ಥಿಗಳ ನಡುವೆ ಮುಕ್ತವಾಗಿ ಮಾತನಾಡುವ ಶಕ್ತಿ ಇರುವ ತನಕ ನಾನು ಇದೇ ರಂಗದಲ್ಲಿ ದುಡಿ ಯುವೆ ಎಂದರು.
ಹೊಗಳಿಕೆಗೆ ಉಬ್ಬದಿರಿ
ಹೊಗಳಿಕೆಯಿಂದ ಉಬ್ಬುವ ವ್ಯಕ್ತಿ ಯಿಂದ ಯಾವ ಸಾಧನೆಯನ್ನೂ ಮಾಡಲಾಗದು ಎಂದ ಡಾ| ಶಾಂತಾ ರಾಮ್, ಮನುಷ್ಯನ ಪರಿಪೂ ರ್ಣ ಆಯಸ್ಸು 120 ವರ್ಷಗಳ ಕಾಲ, ಆದರಲ್ಲಿ 60 ವರ್ಷಗಳ ಕಾಲ ದುಡಿದು ಗಳಿಸು ವುದಾದರೆ ಅನಂತರದ ದಿನ ಗಳನ್ನು ಸಮಾಜಕ್ಕಾಗಿ ಶ್ರಮಿಸುವ ಮೂಲಕ ಸಾರ್ಥ ಕಗೊಳಿಸುವ ಪ್ರಯತ್ನ ಮಾಡಬೇಕು ಎಂದರು.
ಡಾ| ಶಾಂತಾರಾಮ್ ದಂಪತಿಯನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿ ಸಿದರು. ಆಡಳಿತ ಮಂಡಳಿಯ ಪ್ರ| ಸ್ಯಾಮ್ ಮಾಬೆನ್, ಡಾ| ಎಂ.ಎ.ಆರ್ ಕುಡ್ವ ಮತ್ತು ಶಮೀನಾ ಆಳ್ವ ಅಭಿನಂ ದಿಸಿದರು. ಡಾ| ಪಿ.ಎಲ್.ಎನ್.ರಾವ್, ಆಡಳಿತ ಮಂಡಳಿಯ ಸದಸ್ಯರಾದ ಸುಹಾಸ್ ಹೆಗ್ಡೆ,ಡಾ| ಸುರೇಶ್‌ಜೆ.ಆರಾಹ್ನ,
ಎಂ.ಬಿ.ಖಾನ್, ಶಿವರಾಮ ಕಾಮತ್, ಮಾಧವ ಸನಿಲ್, ಮತ್ತು ಶಿಕ್ಷಕ ರಕ್ಷಕ ಸಂಘದ ರಮೇಶ್ ಕಾಮತ್, ಉದಯಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ| ಅನಸೂಯಾ ಕರ್ಕೇರ, ವಿದ್ಯಾರ್ಥಿ ನಾಯಕ ಅನೂಪ್ ಭಟ್ ಮತ್ತು ಜ್ಯೋತಿ ಶಂಕರ್, ರಶ್ಮಿ ಆರ್.ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಆಡಳಿತ ಮಂಡಳಿ ಸದಸ್ಯ ಡಾ| ರೋ ಶನ್ ಕುಮಾರ್ ನಿರೂಪಿಸಿದರು. ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಫಮೀದಾ ಬೇಗಂ ವಂದಿಸಿದರು.
ಆಡಳಿತ ವೈಖರಿ ಅನುಕರಣೀಯ
ಮುಖ್ಯ ಅತಿಥಿಯಾಗಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಡಾ| ಶಾಂತಾರಾಮ ಅವರು ನಮ್ಮ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಮಾರ್ಗದರ್ಶಕರಾಗಿ ಮಾಡಿರುವ ಶ್ರಮ ಹಾಗೂ ಅವರ ಸ್ವಾರ್ಥ ರಹಿತ ಆಡಳಿತ ವೈಖರಿ ಮತ್ತು ಜೀವನ ಕ್ರಮ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.