ಎಐಡಿಎಂಕೆ ಎರಡೂ ಬಣಗಳ ವಿಲೀನ ಸನ್ನಿಹಿತ?
Team Udayavani, Aug 11, 2017, 7:00 AM IST
ಚೆನ್ನೈ: ಜಯಲಲಿತಾ ಅವರ ನಿಧನದ ಬಳಿಕದ ವಿದ್ಯಮಾನಗಳ ನಂತರ ತಮಿಳುನಾಡು ಮತ್ತೂಂದು ಸುತ್ತಿನ ನಾಟಕೀಯ ಬೆಳವಣಿಗೆ ಗಳಿಗೆ ಸಾಕ್ಷಿಯಾಗಿದೆ. ಜಯಾ ಆಸ್ಪತ್ರೆ ಸೇರಿದಾ ಗಿನಿಂದಲೂ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಶಶಿಕಲಾ ನಟರಾಜನ್ ಮತ್ತು ಟಿ.ಟಿ.ವಿ. ದಿನಕರನ್ ಅವರನ್ನೇ ಪಕ್ಷದಿಂದ ದಬ್ಬುವ ಯತ್ನಗಳು ಇದೀಗ ನಡೆಯುತ್ತಿವೆ. ಅಚ್ಚರಿಯೆಂ ದರೆ, ಶಶಿಕಲಾರಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೇರಿದ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಇದಕ್ಕೆ ಮುನ್ನುಡಿ ಬರೆಯಲಾಗಿದೆ.
ಶಶಿಕಲಾ ಆಗಮನದಿಂದ ಎರಡು ಹೋಳಾ ಗಿದ್ದ ಎಐಎಡಿಎಂಕೆ ಮತ್ತೆ ಒಂದಾಗಲು ಹೊರ ಟಿವೆ. ಮುಂದಿನ ವಾರವೇ ಪಕ್ಷದ ಎರಡೂ ಬಣ ಗಳು ವಿಲೀನವಾಗುವ ಸಾಧ್ಯತೆಯಿದೆ. ಮಾಜಿ ಸಿಎಂ ಪನ್ನೀರ್ಸೆಲ್ವಂ ನೇತೃತ್ವದ ಮತ್ತೂಂದು ಬಣವು, ವಿಲೀನವಾಗಬೇಕಿದ್ದರೆ ಶಶಿಕಲಾ ಮತ್ತು ದಿನಕರನ್ರನ್ನು ಪಕ್ಷದಿಂದ ದೂರವಿಡಬೇಕು ಎಂಬ ಷರತ್ತು ಹಾಕಿದ್ದರು. ಗುರುವಾರ ಸಿಎಂ ಪಳನಿ ನೇತೃತ್ವದಲ್ಲಿ ನಡೆದ ಸಭೆಯ ನಿರ್ಧಾರಗಳು ಪನ್ನೀರ್ ಷರತ್ತನ್ನು ಒಪ್ಪಿಕೊಂಡಿರುವುದರ ಸುಳಿವು ನೀಡಿದೆ. ಅಂದರೆ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರ ನೇಮಕ ತಾತ್ಕಾಲಿಕವಾಗಿದ್ದು, ಹೊಸ ಅಧ್ಯಕ್ಷರ ನೇಮಕವಾ ದೊಡನೆ ಶಶಿಕಲಾ ಅಧಿಕಾರ ಕಳೆದುಕೊಳ್ಳುತ್ತಾರೆ ಮತ್ತು ಉಪಪ್ರಧಾನ ಕಾರ್ಯದರ್ಶಿ ದಿನಕರನ್ ಮುಂದುವರಿಕೆಯೂ ಕಾನೂನುಬಾಹಿರವಾಗು ತ್ತದೆ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದಿನಕರನ್ ಬಣ, “ಪಳನಿಸ್ವಾಮಿ ಅತಿದೊಡ್ಡ ದ್ರೋಹ ಬಗೆಯುತ್ತಿದ್ದಾರೆ’ ಎಂದಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರವೇ ಎರಡೂ ಬಣಗಳು ಒಂದಾಗುತ್ತವೆ. ಮಾತ್ರವಲ್ಲ, ಪಳನಿಸ್ವಾಮಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಪನ್ನೀರ್ ಅವರು ಡಿಸಿಎಂ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.