ಉತ್ತಮ ಪುಸ್ತಕ ಓದಿನಿಂದ ದೃಢ ವ್ಯಕ್ತಿತ್ವ
Team Udayavani, Aug 11, 2017, 10:04 AM IST
ಕಲಬುರಗಿ: ಸಾಹಿತ್ಯ ವಲಯ ವಿಶಾಲವಾಗಿದ್ದು, ಅಸಂಖ್ಯಾತ ಉತ್ತಮ ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನಾದರೂ
ಓದುವುದರ ಮುಖಾಂತರ ನಮ್ಮ ವ್ಯಕ್ತಿತ್ವ ಹಾಗೂ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶರಣಬಸವ
ವಿಶ್ವವಿದ್ಯಾಲಯದ ಸಹ ಕುಲಪತಿ ಹಾಗೂ ಶರಣಬಸವೇಶ್ವರ ವಸತಿ (ಎಸ್‌ಬಿಆರ್) ಕಾಲೇಜಿನ ಪ್ರಾಚಾರ್ಯ ಡಾ| ಎನ್.
ಎಸ್. ದೇವರಕಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಗುರುವಾರ ನಗರದ ಎಸ್‌ಬಿಆರ್ ಶಾಲೆಯಲ್ಲಿ ಷಡಕ್ಷರಿಸ್ವಾಮಿ ಡಿಗ್ಗಾಂವಕರ
ಪ್ರತಿಷ್ಠಾನದ ಶಿವಾಂಶ ಪ್ರಕಾಶನ ವತಿಯಿಂದ ಮನೋವಿಜ್ಞಾನಿ ಡಾ| ಸಿ.ಆರ್. ಚಂದ್ರಶೇಖರ ಬರೆದ “ಒಳ್ಳೆಯ ಅಧ್ಯಯನ ವಿಧಾನ ಮತ್ತು ಉತ್ತಮ ನೆನಪಿನ ಶಕ್ತಿ ಹಾಗೂ ಗುಡ್ ಸ್ಟಡಿ ಹ್ಯಾಬಿಟ್ ಗುಡ್ ಮೆಮೋರಿ ಎನ್ನುವ ಎರಡು ಪುಸ್ತಕ ಲೋಕಾರ್ಪಣೆಗೊಳಿಸಿ ಅವರು
ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಓದಿದ್ದನ್ನು ಪುನಃ ಮನನ ಮಾಡಿಕೊಂಡರೆ ಓದಿಕೊಂಡಿದ್ದು ಬಹಳ ದಿನಗಳವರೆಗೆ ಶಾಶ್ವತವಾಗಿ ನೆನೆಪಿನಲ್ಲಿ ಉಳಿಯುತ್ತದೆ. ಲೋಕಾರ್ಪಣೆಗೊಂಡಿರುವ ಎರಡು ಪುಸ್ತಕಗಳು ಬಹಳ ಮಹತ್ವದಿಂದ ಕೂಡಿವೆ. ಕಡಿಮೆ ಬೆಲೆಯಲ್ಲಿ ಅಪಾರ ವಸ್ತು ವಿಷಯಗಳನ್ನು ಈ ಪುಸ್ತಕಗಳು ಹೊಂದಿವೆ ಎಂದು ಹೇಳಿದರು.
ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೂಂದಿಲ್ಲ. ಜ್ಞಾನ ಯಾವ ಮೂಲೆಯಿಂದಲಾದರೂ ಬರಲಿ, ಅದನ್ನು ಒಮ್ಮನಸ್ಸಿನಿಂದ ಸ್ವೀಕರಿಸಬೇಕು. ಖನ್ನತೆ, ಒತ್ತಡ ನಿವಾರಿಸಿಕೊಳ್ಳಲು ಪುಸ್ತಕ ಓದುವ ಹವ್ಯಾಸ ಆರೋಗ್ಯಕ್ಕೆ ಒಳ್ಳೆಯದು ಎಂದರು. ಹಿರಿಯ ಪತ್ರಕರ್ತ ಟಿ. ವಿ ಶಿವಾನಂದನ್, ನಿವೃತ್ತ ಉಪನ್ಯಾಸಕ ನರೇಂದ್ರ ಬಡಶೇಷಿ, ಶಿವಾಂಶ ಪ್ರಕಾಶನದ ಡಾ| ಎಸ್ ಎಸ್ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.