![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Aug 11, 2017, 10:26 AM IST
ಬೀದರ: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಗುರುವಾರ ರೈತರು ಸಂಸದ ಭಗವಂತ ಖೂಬಾ ನಿವಾಸದ ಎದುರು ಧರಣಿ ನಡೆಸಿದರು. ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ರೈತರು ಕೆಲಕಾಲ ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಘೋಷಣೆಗಳೊಂದಿಗೆ ಹಸಿರು ಶಾಲು ಹಾರಿಸುತ್ತ ಸಂಸದರ ನಿವಾಸದವರೆಗೆ ಪಾದಯಾತ್ರೆ ನಡೆಸಿದರು. ಜಿಟಿ ಜಿಟಿ ಮಳೆಯಲ್ಲೇ ಎರಡೂಮೂರು ಗಂಟೆ ಕಾಲ ಧರಣಿ ನಡೆಸಿದರು. ಈ ವೇಳೆ ಸಂಸದ ಖೂಬಾ ಅನುಪಸ್ಥಿತಿ ಇತ್ತು. ಸಂಸದರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರು ಸ್ವೀಕರಿಸಲು ಮುಂದಾದಾಗ ಜಿಲ್ಲಾ ಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ರೈತರು ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಧಿಕಾರಿ ಡಾ| ಮಹಾದೇವ ಆಗಮಿಸಿ ಮನವಿ ಸ್ವೀಕರಿಸಿದರು.
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ರೈತರ ವಿಮೆ ಹಾಗೂ ಬರ ಪರಿಹಾರದ ನೀತಿಗಳನ್ನು ಹೊಸದಾಗಿ ಮಾಡಿದೆ. ಅದು ರೈತರ ವಿರೋಧ ನೀತಿಯಾಗಿದ್ದು, ಅದನ್ನು ಕೂಡಲೇ ಕೈ ಬಿಟ್ಟು ಕಳೆದ ಸಾಲಿನಲ್ಲಿ ಇರುವ ಮಾನದಂಡಗಳನ್ನೇ ಮುಂದುವರಿಸಬೇಕು. ಉದ್ದು, ಹೆಸರು, ಸೋಯಾ, ತೊಗರಿ ಬೆಲೆಗಳ ದರ ಮುಕ್ತ
ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಆದ್ದರಿಂದ ಸರ್ಕಾರವೇ ಸಹಕಾರಿ ಪತ್ತಿನ ಸಂಘಗಳ ಮೂಲಕ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಕೂಡಲೇ ತೆರೆಯಬೇಕು ಎಂದು ಒತ್ತಾಯಿಸಲಾಗಿದೆ.
ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ, ಕಾರ್ಯದರ್ಶಿ ವೈಜಿನಾಥ ನೌಬಾದೆ, ದಯಾನಂದ ಸ್ವಾಮಿ ಸಿಇì, ಕೊಂಡಿಬಾರಾವ್ ಪಾಂಡ್ರೆ,
ಸಿದ್ರಾಮಪ್ಪ ಆಣದೂರೆ, ಖಾಸೀಮ್ ಅಲಿ, ವಿಠಲರೆಡ್ಡಿ ಆಣದೂರ, ಚಂದ್ರಶೇಖರ ಜಮಖಂಡಿಸಿ, ಸತೀಶ ನನ್ನೂರೆ, ಶ್ರೀಕಾಂತ ಬಿರಾದಾರ, ಶಂಕ್ರೆಪ್ಪಾ ಪಾರಾ, ಬಾಬುರಾವ್ ಜೋಳದಾಬಕೆ, ಶಾಮಣ್ಣ ಬಾವಗೆ, ಶಶಿರಾವ್ ಕಣಜಿ ಮತ್ತು ವೀರಪಣ್ಣಾ ದುಬಲಗುಂಡಿ ಪಾಲ್ಗೊಂಡಿದ್ದರು.
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.