ಶಾಹಡ್ ಮೂಕಾಂಬಿಕಾ ಮಂದಿರ: ಹರಿದರ್ಶನ ಯಕ್ಷಗಾನ ತಾಳಮದ್ದಳೆ
Team Udayavani, Aug 11, 2017, 2:31 PM IST
ಕಲ್ಯಾಣ್: ರಂಗಭೂಮಿ ಫೈನ್ ಆರ್ಟ್ಸ್ ನೆರೂಲ್ ಕಲಾವಿದರಿಂದ ಆ. 6ರಂದು ಸಂಜೆ 5ರಿಂದ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಶಹಾಡ್ ಆಯೋಜನೆಯಲ್ಲಿ ಹರಿದರ್ಶನ ತಾಳಮದ್ದಳೆ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀಕಾಂತ್ ನಾರಾಯಣ ತಂತ್ರಿ, ಮಂದಿರದ ಕಾರ್ಯಾಧ್ಯಕ್ಷ ಚಂದ್ರಕಾಂತ ಶೆಟ್ಟಿ ವಾಶಿ, ಅಧ್ಯಕ್ಷ ಕೃಷ್ಣ ಪೂಜಾರಿ, ಉಪಾಧ್ಯಕ್ಷ ಗೋಪಾಲ್ ಎಸ್. ಹೆಗ್ಡೆ, ಸಲಹೆಗಾರ ಚಂದ್ರಹಾಸ ಶೆಟ್ಟಿ, ಹಿರಿಯ ಕಲಾವಿದರಾದ ಶೇಣಿ ಶ್ಯಾಮ್ ಭಟ್, ಕೆ. ಕೆ. ಶೆಟ್ಟಿ ಹಾಗೂ ಉಳಿದ ಕಲಾವಿದರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಂದಿರದ ಉಪಾಧ್ಯಕ್ಷ ಗೋಪಾಲ್ ಹೆಗ್ಡೆ ಅವರು ನೆರೆದ ಕಲಾಭಿಮಾನಿಗಳಿಗೆ ಹರಿದರ್ಶನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ ಅವರು ಕಲಾವಿದರನ್ನು ಪರಿಚಯಿಸಿದರು. ಭಾಗವತರಾಗಿ ರವಿ ಆಚಾರ್ಯ, ಮದ್ದಳೆಯಲ್ಲಿ ಹರೀಶ್ ಸಾಲ್ಯಾನ್, ಚೆಂಡೆ ವಾದಕರಾಗಿ ಪ್ರವೀಣ್ ಶೆಟ್ಟಿ ಅವರು ಸಹಕರಿಸಿದರು.
ಪಾತ್ರವರ್ಗದಲ್ಲಿ ಮುಖ್ಯವಾಗಿ ಶೇಣಿ ಶ್ಯಾಮ್ ಭಟ್ , ಕೆ. ಕೆ. ಶೆಟ್ಟಿ, ರವಿ ಹೆಗ್ಡೆ ಹೆರ್ಮುಂಡೆ, ಅನಿಲ… ಹೆಗ್ಡೆ ಪೆರ್ಡೂರು, ಬಾಲಕೃಷ್ಣ ಆದ್ಯಪಾಡಿ ಅವರು ಪಾಲ್ಗೊಂಡಿದ್ದರು. ದೇವಸ್ಥಾನದ ವತಿಯಿಂದ ಎಲ್ಲಾ ಕಲಾವಿದರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಷ್ಪಗುತ್ಛವನ್ನಿತ್ತು ಸತ್ಕರಿಸಲಾಯಿತು.
ಮುಖ್ಯವಾಗಿ ಬಂಟರ ಸಂಘ ಭಿವಂಡಿ-ಬದ್ಲಾಪುರದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಕರ್ನಾಟಕ ಸಂಘ ಕಲ್ಯಾಣ್ ಇದರ ಮಾಜಿ ಅಧ್ಯಕ್ಷ ಟಿ. ಎಸ್. ಉಪಾಧ್ಯಾಯ, ಕೋಶಾಧ್ಯಕ್ಷ ಯು. ಡಿ. ಮಲ್ಯ, ಬಿಲ್ಲವರ ಸ್ಥಳೀಯ ಸಮಿತಿಯ ಭೋಜ ಪೂಜಾರಿ ಹಾಗೂ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ದೇವಿಗೆ ಮಂಗಳಾರತಿ ನಡೆಯಿತು. ಉದ್ಯಮಿ ಸದಾನಂದ ಪೂಜಾರಿ ನೇತೃತ್ವದಲ್ಲಿ ಭೋಜನದ ವ್ಯವಸ್ಥೆ ಯನ್ನುಯೋಜಿಸಲಾಗಿತ್ತು.ಕಲಾಭಿಮಾನಿಗಳು, ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ತುಳು- ಕನ್ನಡಿಗರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.