ರಕ್ಷಕರಿಂದಲೇ ಕಾನೂನು ಉಲ್ಲಂಘನೆ ನಮ್ಮ ದುರಂತ : ಜಯಪ್ರಕಾಶ್‌ ಹೆಗ್ಡೆ


Team Udayavani, Aug 12, 2017, 6:30 AM IST

110817Astro04.jpg

ಉಡುಪಿ: ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನವೇ ಅತೀ ಉನ್ನತ ಕಾನೂನು ಆಗಿದೆ. ಆದರೆ ಈಗ ದೇಶದಲ್ಲಿ ಕಾನೂನು ರಕ್ಷಿಸುವ ಜನಪ್ರತಿನಿಧಿಗಳೇ ಉಲ್ಲಂಘಿಸುತ್ತಿರುವುದು ನಮ್ಮ ದುರಂತ ಎಂದು ಮಾಜಿ ಸಂಸದ, ರಾಜ್ಯದ ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.
 
ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಆರ್ಟ್ಸ್ ಕ್ಲಬ್‌ ಹಾಗೂ ರಾಜ್ಯಶಾಸ್ತ್ರ ವಿಭಾಗ ಶುಕ್ರವಾರ ಆಯೋಜಿಸಿದ 
“ದೇಶದಲ್ಲಿ ಸಂಸದೀಯ ಮೌಲ್ಯಗಳು ಕಡಿಮೆಯಾಗುತ್ತಿದೆಯೇ’ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ಪ್ರಸ್ತುತ ಕಾಲಘಟ್ಟದಲ್ಲಿ ಜನಸಾಮಾನ್ಯನೊಬ್ಬ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹಣ, ಪಕ್ಷ, ಅದಿಕಾರವೇ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿದ ಅನೇಕ ಮಹನೀಯರಿದ್ದಾರೆ. ಜವಾಹರ್‌ಲಾಲ್‌ ಅವರು ತನ್ನನ್ನು ಪ್ರಶ್ನಿಸಿದವರನ್ನೇ ಸಂಪುಟಕ್ಕೆ ಸೇರಿಸಿಕೊಂಡರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಮಾಜಿ ಸ್ಪೀಕರ್‌ ಸೋಮನಾಥ್‌ ಚಟರ್ಜಿ ಇಂದ್ರಜಿತ್‌ ಗುಪ್ತರಂತವರು ಸಂಸತ್‌ಗೆ ಮತ್ತಷ್ಟು ಘನತೆ ತಂದುಕೊಟ್ಟಿದ್ದಾರೆ. ಸೀತಾರಾಂ ಯೆಚೂರಿಯಂತಹ ಉತ್ತಮ ಸಂಸದೀಯ ಪಟುಗಳಿಗೆ ರಾಜ್ಯಸಭೆಗೆ ಆಯ್ಕೆಯಾಗುವ ಅದೃಷ್ಟವಿಲ್ಲ. ವ್ಯವಸ್ಥೆಯೇ ಹಾಗಿದೆ ಎಂದು ಹೆಗ್ಡೆ ವಿಷಾದ ವ್ಯಕ್ತಪಡಿಸಿದರು. 

“ಜನರೇ ಸುಪ್ರೀಂ..’
ಪಾಕಿಸ್ಥಾನ, ಚೀನಾ ಗಡಿ ತಂಟೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಸಮಯ ಜನಪ್ರತಿನಿಧಿಗಳ ಜವಾಬ್ದಾರಿಯೂ ಹೆಚ್ಚಿದೆ. ನಾವು ಆರಿಸಿ ಕಳುಹಿಸಿದ ವ್ಯಕ್ತಿ ತಪ್ಪು ಮಾಡಿದರೆ ಪ್ರಶ್ನಿಸುವ ಪರಿಪಾಠವನ್ನು ಜನರು ಬೆಳೆಸಬೇಕು. ಅಮೆರಿಕದ ಅಧ್ಯಕ್ಷರಿಗೆ ವಿಟೋ ಪವರ್‌ ಇದೆ. ಆದರೆ ಭಾರತದ ಅಧ್ಯಕ್ಷ ಅಥವಾ ಪ್ರಧಾನಿಗಾಗಲಿ ಆ ಅಧಿಕಾರ ಇಲ್ಲ. ಆದರೆ ನಮ್ಮಲ್ಲಿ ಜನರೇ ಸುಪ್ರೀಂ ಅವರಿಗೆ ಪ್ರಶ್ನಿಸುವ ಎಲ್ಲ ಹಕ್ಕಿದೆ ಎಂದರು. 

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ, ಪ್ರೊ| ಕೆ. ಸುರೇಂದ್ರನಾಥ್‌ ಶೆಟ್ಟಿ ಸಮಯನ್ವಕಾರರಾಗಿ ಸಂವಾದ ನಡೆಸಿಕೊಟ್ಟರು. 
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಶಾಂತಿ ಎಸ್‌. ರಾವ್‌, ಜಸ್ಟಿನ್‌, ಧನುಶ್‌, ಆ್ಯಂಜಲೀನ್‌ ಡಿ’ಸೋಜಾ, ಮೈಥೆÅàಯಿ, ವಿಭಾ, ನಮ್ರಥಾ ಪ್ರಶ್ನೆಗಳನ್ನು ಕೇಳಿದರು. 
 
ಆರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ದಿವ್ಯಾ ಶೆಟ್ಟಿ ಸ್ವಾಗತಿಸಿದರು. ಕಾರ್ತಿಕ್‌ ಕಾರ್ಯಕ್ರಮ ನಿರ್ವಹಿಸಿದರು. ಸಚಿನ್‌ ವಂದಿಸಿದರು.

ಸಂವಾದದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕೆಲ ಕುತೂಹಲಕಾರಿ ಪ್ರಶ್ನೆಗಳನ್ನು ಜಯಪ್ರಕಾಶ್‌ ಹೆಗ್ಡೆ ಅವರಿಗೆ ಕೇಳಿದರು. ಅದರ ಸಾರಾಂಶ ಇಲ್ಲಿದೆ. 

ನಮಗೊಂದು, ಅವರಿಗೊಂದು ನ್ಯಾಯವೇಕೆ?
ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಬೇಕಾದರೆ ಶೇ. 75 ರಷ್ಟು ಹಾಜರಾತಿ ಕಡ್ಡಾಯವಾಗಿರಬೇಕಾಗುತ್ತದೆ. ಅದೇ ಸಂಸದರು, ಶಾಸಕರಿಗೆ ಸಂಸತ್‌ನಲ್ಲಿ ಈ ನಿಯಮ ಯಾಕಿಲ್ಲ? ರಾಜ್ಯಸಭೆಗೆ ನಾಮಾಂಕಿತರಾದ ಸಚಿನ್‌ ತೆಂಡೂಲ್ಕರ್‌, ರೇಖಾರಂತವರು ಕೇವಲ 6. 6 ರಷ್ಟು ಮಾತ್ರ ಹಾಜರಾತಿ ಇದೆ. ಅವರಿಗೂ ಮುಂದೆ ಸಂಸತ್‌ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ವಿದ್ಯಾರ್ಥಿ ಶ್ರೇಯಸ್‌ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಹೆಗ್ಡೆ ಅವರು ಈ ವಿವೇಚನೆ ಆ ಜನಪ್ರನಿಧಿಗಳಿಗೆ ಇರಬೇಕು. ಇಂತಹ ಸಂದರ್ಭ ಸ್ಪೀಕರ್‌ ಅಥವಾ ಸಭಾಪತಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು. 

ಶೇ. 33 ರಷ್ಟು ಮಹಿಳಾ ಮೀಸಲಾತಿ ಕೇವಲ ಮಸೂದೆಗೆ ಮಾತ್ರ ಸೀಮಿತವಾಗಿದೆ. ದೇಶದಲ್ಲಿ ಕೇವಲ ಶೆ. 9ರಷ್ಟು ಮಾತ್ರ ಮಹಿಳಾ ಜನಪ್ರತಿನಿಧಿಗಳಿರುವುದು ಎಂದು ವಿದ್ಯಾರ್ಥಿ ನೇಹಾ ಪ್ರಸ್ತಾವಿಸಿದರು. 

ಅಪ್ರಮಾಣಿಕರಿಂದ ವರ್ಗಾವಣೆ
ಪ್ರಾಮಾಣಿಕ ಅಧಿಕಾರಿಗಳನ್ನು ಶಾಸಕರು, ಸಚಿವರು ಪ್ರಭಾವ ಬಳಸಿ ವರ್ಗಾಯಿಸುವುದು ಸಂಸದೀಯ ಮೌಲ್ಯದ ವಿರುದ್ಧವಲ್ಲವೇ ಎಂದು ವಿದ್ಯಾರ್ಥಿ ಸುಹಾನ್‌ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಜಯಪ್ರಕಾಶ್‌ ಹೆಗ್ಡೆ ಅವರು ಯಾರೂ ಅಪ್ರಮಾಣಿಕರಾಗಿರುತ್ತಾರೋ ಅಂತಹವರು ಮಾತ್ರ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾಯಿಸುತ್ತಾರೆ. ಯಾಕೆಂದರೆ ಅವರಿಗೆ ಪ್ರಾಮಾಣಿಕ ಅಧಿಕಾರಿಗಳ ಸೇವೆ ಬೇಡ. ಅಪ್ರಾಮಾಣಿಕರೇ ಬೇಕಾಗಿರುತ್ತದೆ ಎಂದರು. 
 

ಟಾಪ್ ನ್ಯೂಸ್

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.