ಕಾಸರಗೋಡಿನ ಕನ್ನಡ ಶಾಲೆಗೆ ಅನರ್ಹ ಶಿಕ್ಷಕರ ನೇಮಕ 


Team Udayavani, Aug 12, 2017, 6:45 AM IST

noticw.jpg

ಸರಕಾರದಿಂದಲೇ ಸರಕಾರದ ಆದೇಶ ಉಲ್ಲಂಘನೆ !
ಕಾಸರಗೋಡು
: ಕಾಸರಗೋಡಿನ ಕನ್ನಡಶಾಲೆಗಳಿಗೆ ಕನ್ನಡವೇ ತಿಳಿಯದ ಶಿಕ್ಷಕರನ್ನು ನೇಮಿಸುತ್ತಿರುವುದರ ವಿರುದ್ಧ  ಕನ್ನಡಿಗರು ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ ಕನ್ನಡ ಮಾಧ್ಯಮ ಪ್ರೌಢಶಾಲಾ ಶಿಕ್ಷಕರ ಮೂಲ ಅರ್ಹತೆಯನ್ನು ಸ್ಪಷ್ಟಪಡಿಸಿ ಸರಕಾರಿ ಆದೇಶ ಪ್ರಕಟವಾದರೂ ಆ ಸರಕಾರಿ ಆದೇಶವನ್ನೇ ಧಿಕ್ಕರಿಸಿ ಕನ್ನಡ ವಿದ್ಯಾರ್ಥಿಗಳಿಗೆ ಕಲಿಸಲು ಕನ್ನಡ ಬಾರದವರನ್ನು ನೇಮಿಸುತ್ತಿರುವ ಅನುದಾನಿತ ಶಾಲಾ ವ್ಯವಸ್ಥಾಪಕರು ಕನ್ನಡಿಗರ ಸಹನೆಯನ್ನು ಕೆಣಕುತ್ತಿದ್ದಾರೆ. 

ಸರಕಾರಿ ಆದೇಶದ  ಉಲ್ಲಂಘನೆ ತಮ್ಮ ಕಣ್ಣಮುಂದೆಯೇ ನಡೆಯುತ್ತಿ ದ್ದರೂ ಯಾವುದೇ ಕ್ರಮಕೈಗೊಳ್ಳದೆ ಮೌನವಾಗಿರುವ ಜಿಲ್ಲಾ ಶಿಕ್ಷಣಾಧಿಕಾರಿಗಳು, ಶಿಕ್ಷಣ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಂತಹ ಜವಾಬ್ದಾರಿ ಸ್ಥಾನದಲ್ಲಿರು ವವರು ಕನ್ನಡ ವಿದ್ಯಾರ್ಥಿಗಳ ರಕ್ಷಣೆ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ಮೌನವಾಗಿದ್ದಾರೆ!

ಶತಮಾನಗಳ ಇತಿಹಾಸವಿರುವ ನಗರದ ಅನುದಾನಿತ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡ ಮಕ್ಕಳಿಗೆ ಗಣಿತವನ್ನು ಕಲಿಸಲು ಕನ್ನಡದ ಗಂಧಗಾಳಿಯಿಲ್ಲದ ಅಧ್ಯಾಪಕನನ್ನು ನೇಮಿಸುವ ದುಸ್ಸಾಹಸ ನಡೆದಿದೆ. ತೆಂಕಣಕೇರಳದ ಯಾವುದೋ ಮಲ ಯಾಳ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಹುದ್ದೆ ರದ್ದಾದುದರಿಂದ (ವಿಷಯ: ಗಣಿತ ಕನ್ನಡ ಮಾಧ್ಯಮ) ಅವರನ್ನು ಹುದ್ದೆಗೆ ನೇಮಿಸಲಾಗಿದೆ. 

ಈ ಶಾಲೆಯಲ್ಲಿ ಇಂಗ್ಲಿಷ್‌  ಮಾಧ್ಯಮವೂ ಇರುವುದ ರಿಂದ ಕನ್ನಡ ಅರಿಯದ ಶಿಕ್ಷಕ ಇಂಗ್ಲಿಷ್‌  ಮಾಧ್ಯಮದ ಮಕ್ಕಳಿಗೆ ಗಣಿತ ಕಲಿಸುತ್ತಾರೆ ಎಂಬುದು ಶಾಲಾ ವ್ಯವಸ್ಥಾಪ ಕರ ಸಮಜಾಯಿಸಿಯಂತೆ. ಆದರೆ ಈ ಶಾಲೆಯಲ್ಲಿ ಅಧಿಕೃತವಾಗಿರು ವುದು ಕನ್ನಡ ಮಾಧ್ಯಮವೇ ಹೊರತು ಇಂಗ್ಲಿಷ್‌ ಮಾಧ್ಯಮವಲ್ಲ. ಅಗತ್ಯದ ಸಂಖ್ಯೆಯ ವಿದ್ಯಾರ್ಥಿಗಳ ಲಭ್ಯತೆಯಿರುವುದೂ, ಅಧ್ಯಾಪಕ ಹುದ್ದೆ ಮಂಜೂರಾಗಿರುವುದೂ ಕನ್ನಡ ಮಾಧ್ಯಮಕ್ಕೇ ಹೊರತು ಇಂಗ್ಲಿಷ್‌ ಮಾಧ್ಯಮಕ್ಕಲ್ಲ. ಕಡಿಮೆ ಸಂಖ್ಯೆಯ ಕೆಲವು ವಿದ್ಯಾರ್ಥಿಗಳು ಅದೂ ಕನ್ನಡ ಮನೆಮಾತಿನ ಮಕ್ಕಳು ಇಂಗ್ಲಿಷ್‌  ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆಯೇ ಹೊರತು ಶಾಲೆಗೆ ಅಧಿಕೃತ  ಇಂಗ್ಲಿಷ್‌  ಮಾಧ್ಯಮವಾಗಲೀ ಇಂಗ್ಲಿಷ್‌  ಮಾಧ್ಯಮಕ್ಕೆ ಶಿಕ್ಷಕ ಹುದ್ದೆಗಳಾಗಲೀ ಮಂಜೂರಾಗಿಲ್ಲ. 

ಈಗ ಕನ್ನಡ ಮಾಧ್ಯಮದಲ್ಲಿ ಖಾಲಿಬಿದ್ದಿರುವ ಗಣಿತ ಅಧ್ಯಾಪಕ ಹುದ್ದೆಗೆ ಕನ್ನಡಬಾರದವರನ್ನು ನೇಮಿಸಿದರೆ ಕನ್ನಡಮಾಧ್ಯಮ ವಿದ್ಯಾರ್ಥಿಗಳ ಗತಿಯೇನು? ಅವರಿಗೆ ನಿಜವಾದ ಅರ್ಹತೆಯಿರುವ ಕನ್ನಡ ತಿಳಿದ ಶಾಶ್ವತ ಅಧ್ಯಾಪಕರನ್ನು ಹೊಂದುವ ಹಕ್ಕಿಲ್ಲವೆ? ಕನ್ನಡ ಮಾಧ್ಯಮ ಗಣಿತ ಸಹಿತ ವಿಜ್ಞಾನ, ಸಮಾಜ ವಿಜ್ಞಾನ ಮೊದಲಾದ ಕೋರ್‌ ಸಬೆjಕ್ಟ್ ಅಧ್ಯಾಪಕ ಹುದ್ದೆಗಳಿಗೆ ಅಗತ್ಯವಾದ ಮೂಲ ಅರ್ಹತೆಯಲ್ಲಿ ಇತರ ಅಗತ್ಯದ ಶೈಕ್ಷಣಿಕ ಅರ್ಹತೆಗಳೊಂದಿಗೆ ಕನ್ನಡವನ್ನು ಶಾಲೆ ಅಥವಾ ಕಾಲೇಜಿನಲ್ಲಿ ಒಂದು ವಿಷಯವನ್ನಾಗಿ ಕಲಿತಿರಬೇಕೆಂದು ನಿಯಮವನ್ನು ಮಾಡಲಾಗಿದೆ. 

ಈ ಹುದ್ದೆಗಳನ್ನು ಕನ್ನಡ ತಿಳಿಯದ ಶಿಕ್ಷಕರಿಂದ ತುಂಬಿದರೆ  ಸರಕಾರ ಸಂಬಳ ನೀಡುವ ಹುದ್ದೆಗಳಿಗೆ ಅನರ್ಹನನ್ನು ನೇಮಿಸಿದಂತಾಗಿ ಸರಕಾರಿ ಸೇವಾ ನಿಯಮವನ್ನೇ ಉಲ್ಲಂಘಿಸಿದಂತಾಗುತ್ತದೆ. ಹಾಗಿರುವಾಗ ಹುದ್ದೆಗೆ ಅಗತ್ಯವಾದ ಮೂಲ ಅರ್ಹತೆಯಿಲ್ಲದ ಈ ಶಿಕ್ಷಕನಿಗೆ ಸರಕಾರ ಸಂಬಳ ಹೇಗೆ ಮಂಜೂರುಮಾಡುತ್ತದೆ?  ಶಿಕ್ಷಣ ಇಲಾಖೆ ತತ್‌ಕ್ಷಣವೇ ಈ ಶಿಕ್ಷಕನ ಸಂಬಳವನ್ನು ತಡೆಹಿಡಿಯದಿದ್ದರೆ ಸರಕಾರದ ಹಣ ದುರುಪಯೋಗವಾದಂತಾಗುತ್ತದೆ.

ಕನ್ನಡಮಾಧ್ಯಮದ ಗಣಿತದ ಹೆಸರಿನಲ್ಲಿರುವ ಶಿಕ್ಷಕ ಹುದ್ದೆಗೆ ನೇಮಿಸಿದ ಶಿಕ್ಷಕ ಇಂಗ್ಲಿಷ್‌  ಮಾಧ್ಯಮಕ್ಕೆ ಬೋಧಿಸುವುದು ಸರಿಯೆ? ಇದರಿಂದ ಕನ್ನಡ ಮಾಧ್ಯಮಕ್ಕೆ ಗಣಿತ ಬೋಧಿಸಲು ಶಾಶ್ವತವಾಗಿ ತಾತ್ಕಾಲಿಕ ಅಧ್ಯಾಪಕರನ್ನು ನೇಮಿಸುವ ಹುನ್ನಾರವೆ? ಇದರಿಂದ ನಷ್ಟವಾಗುವುದು ಯಾರಿಗೆ? ಕನ್ನಡ ವಿದ್ಯಾರ್ಥಿಗಳಿಗೂ ಕನ್ನಡ ಶಿಕ್ಷಕ ಉದ್ಯೋಗಾರ್ಥಿಗಳಿಗೂ ಅಲ್ಲವೆ? ಕನ್ನಡಿಗರಿಗೆ ನಷ್ಟವಾದರೆ ಯಾರಿಗೇನು ಚಿಂತೆ? ಈ ಶಾಲೆಯ ಇಂಗ್ಲಿಷ್‌  ಮಾಧ್ಯಮದಲ್ಲಿ ಕಲಿಯುತ್ತಿರುವ ಬಹುಪಾಲು ಮಕ್ಕಳೂ ಕನ್ನಡಿಗರೇ. ಒಂದೊಮ್ಮೆ ಈ ಶಿಕ್ಷಕ ಇಂಗ್ಲಿಷ್‌ ಮಾಧ್ಯಮಕ್ಕೆ ಮಾತ್ರ ನೇಮಕಗೊಂಡರೂ ಇಂಗ್ಲೀಷಿನ ಬದಲು ಮಲಯಾಳದಲ್ಲಿ ಪಾಠಮಾಡತೊಡಗಿದರೆ ಕನ್ನಡ ಮಕ್ಕಳ ಗತಿಯೇನು? ಈಗ ಹಿರಿಯ ಪ್ರೌಢಶಾಲೆಗಳಲ್ಲಿ ನಡೆಯುವ ಪದವಿಪೂರ್ವ ತರಗತಿಗಳ ಅಧಿಕೃತ ಬೋಧನಾ ಮಾಧ್ಯಮ ಇಂಗ್ಲಿಷ್‌  ಆಗಿದ್ದರೂ ಮಲಯಾಳಿ ಅಧ್ಯಾಪಕರನ್ನು ನೇಮಿಸಿ ಮಲಯಾಳದಲ್ಲಿ ಕಲಿಸುವ ಮೂಲಕ ರಾಜಾರೋಷವಾಗಿ ನಿಯಮ ವನ್ನು ಉಲ್ಲಂಘಿಸಲಾಗುತ್ತದೆ. ಇದೇ ಚಾಳಿ ಇನ್ನು ಮುಂದೆ ಪ್ರೌಢಶಾಲೆಗಳಿಗೂ ಪ್ರಾಥಮಿಕ ಶಾಲೆಗಳಿಗೂ ಹಬ್ಬಬಹುದು. 

ಕನ್ನಡ ಶಾಲೆಗಳನ್ನು ಮಲಯಾಳ ಶಾಲೆಗಳನ್ನಾಗಿ ಪರಿವರ್ತಿ ಸುವ ಹುನ್ನಾರಕ್ಕೆ ಆಡಳಿತದ ಮೌನಸಮ್ಮತಿ ಪ್ರೋತ್ಸಾಹ
ದಾಯಕವಾಗಿದೆ. ಬದಿಯಡ್ಕದಲ್ಲಿ ಕನ್ನಡಿಗರು ವ್ಯವಸ್ಥಾಪಕರಾಗಿ ರುವ ಅನುದಾನಿತ ಶಾಲೆಯೊಂದರಲ್ಲಿ ಮಲಯಾಳವನ್ನು ಒದ್ದು ಹೊರಹಾಕಲಾಗುತ್ತದೆಂದು ಬೊಬ್ಬಿರಿದ ಮಲಯಾಳ ಮಾಧ್ಯಮಗಳೂ ಪ್ರತಿಭಟನೆಗೆ ಸಾರಥ್ಯನೀಡಿದ ರಾಜಕಾರಣಿ ಗಳೂ ಮಲಯಾಳಿ ಶಾಲಾ ವ್ಯವಸ್ಥಾಪಕರಿಂದ  ಕನ್ನಡಕ್ಕೆ ಅನ್ಯಾಯವಾದಾಗ ಸುಮ್ಮನಿರುತ್ತಾರೆ. 

ಅದರಲ್ಲೂ ಬದಿಯಡ್ಕಕ್ಕೆ ಹೋಗಿ ಪ್ರತಿಭಟನೆಗೆ ಕುಳಿತ ಕಾಸರಗೋಡು ಶಾಸಕರು ತಾವು ವಾಸಿಸುವ ನಗರದ  ಮುಖ್ಯ ಶಾಲೆ ಯೊಂದರಲ್ಲಿ ಕನ್ನಡಕ್ಕೆ ಅನ್ಯಾಯ ವಾದಾಗಲೂ ತುಟಿತೆರೆಯದಿರುವುದು ವಿಷಾದನೀಯ.
 
ಕನ್ನಡಿಗರಾದ ಕನ್ನಡಶಾಲಾ ವ್ಯವಸ್ಥಾಪಕರು ಹೆಚ್ಚುವರಿ ಹಣದ ಮೋಹಕ್ಕೆ ಹಿಂದೀ ಇಂಗ್ಲಿಷ್‌  ಸಂಸ್ಕೃತ ದಂತಹ ಭಾಷಾ ವಿಷಯಗಳಿಗೂ ಪದವಿಪೂರ್ವ ತರಗತಿಗಳ ಎಲ್ಲ ವಿಷಯಗಳಿಗೂ ಕನ್ನಡ ತಿಳಿಯದ ಶಿಕ್ಷಕರನ್ನು ನೇಮಿಸಿಕೊಂಡು ಕನ್ನಡದ ಭವಿಷ್ಯಕ್ಕೆ ಕೊಡಲಿಯೇಟು ಹಾಕತೊಡಗಿದ್ದೇ ಕನ್ನಡಶಾಲೆಗಳ ಅಧಃಪತನಕ್ಕೆ ಮೂಲವಾಯಿತು. 

ಕನ್ನಡಿಗರಿಗೇ ತಮ್ಮ ಭಾಷೆಯ ಉಳಿವಿನ ಬಗ್ಗೆ ಚಿಂತೆ
ಯಿಲ್ಲದಿರುವಾಗ ತಮಗೇನು ಎಂದು ಸರಕಾರವೂ ಕನ್ನಡೇತರರಾದ ಕನ್ನಡ ಶಾಲಾ ವ್ಯವಸ್ಥಾಪಕರೂ ಕನ್ನಡವನ್ನು ಹೊಸಕಿಹಾಕಲು ಸ್ಪರ್ಧೆಗಿಳಿದಿದ್ದಾರೆ. ಒಟ್ಟಿನಲ್ಲಿ ಯಾವ ಆದೇಶವಿದ್ದರೇನು? ಯಾವ ನಿಯಮವಿದ್ದರೇನು? ಕನ್ನಡಿಗರು ಎಚ್ಚೆತ್ತುಕೊಂಡು ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಡುವ ವರೆಗೂ ಭಾಷೆಯ ಹೆಸರಿನಲ್ಲಿ ಶೋಷಣೆ ನಡೆಯುತ್ತಲೇ ಇರುತ್ತದೆ.  

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.