ದೇಶಿ ತಳಿಗಳ ಉಳಿವಿಗೆ ಅಭಯ ಜಾತ್ರೆ
Team Udayavani, Aug 12, 2017, 1:22 PM IST
ಹನೂರು: ಮ.ಬೆಟ್ಟದ ತಪ್ಪಲಿನಲ್ಲಿ ದೇಶಿತಳಿಯ ಗೋವುಗಳಿವೆ. ಈ ಗೋವುಗಳು ಕಟುಕರ ಪಾಲಾಗದ ದಿಸೆಯಲ್ಲಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಜೀ ಅವರ ಆಶಯದಂತೆ ದೇಸಿ ತಳಿಗಳ ಉಳಿವಿಗೆ ಅಭಯ ಜಾತ್ರೆಯನ್ನು ಮೂರು ದಿನಗಳ ಕಾಲ ಆರಂಭಿಸಲಾಗಿದೆ ಎಂದು ಕಾಮದುಘ ಗೋವು ವಿಭಾಗ ಮುಖ್ಯಸ್ಥ ವೈ.ವಿ.ಕೃಷ್ಣಮೂರ್ತಿ ತಿಳಿಸಿದರು. ಹನೂರು ಸಮೀಪದ ಕೆಂಪಯ್ಯನಹಟ್ಟಿ ಗ್ರಾಮದ ಗವೋದ್ಯಮ ಆವರಣದಲ್ಲಿ ಶ್ರೀರಾಮಚಂದ್ರಪುರ ಮಠ ಹಾಗೂ ಮಲೆ ಮಹದೇಶ್ವರ ಗೋ ಪರಿವಾರದ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಅಭಯ ಜಾತ್ರೆ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿನ ತಪ್ಪಲಿನಲ್ಲಿ ಲಕ್ಷಕ್ಕೂ ಹೆಚ್ಚು ದೇಸಿ ತಳಿಯ ಗೋವುಗಳಿದ್ದು, ತಲಾತಲಾಂತರದಿಂದ ರೈತರು ಸಾಕುತ್ತಾ ಬಂದಿದ್ದಾರೆ. ಈ
ಹಿಂದೆ ಇಲ್ಲಿನ ಜಾನುವಾರುಗಳು ಅರಣ್ಯ ಪ್ರದೇಶದಲ್ಲಿ ಮೇಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಗೆ ಜಾನುವಾರುಗಳ ಪ್ರವೇಶಕ್ಕೆ ಕಡಿವಾಣ ಹಾಕಿದೆ. ಪರಿಣಾಮ ಗೋವುಗಳಿಗೆ ಪ್ರಕೃತಿದತ್ತ ಮೇವು ಸಿಗದಾಗಿದ್ದು, ಗೋಪಾಲಕರು ಗೋವುಗಳನ್ನು ಸಾಕಲು ತೊಂದರೆ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯ ಲಾಭ ಪಡೆದ ಕಟುಕರು ಗೋಪಾಲಕರಿಂದ ಗೋವು ಖರೀದಿಸಿ ಕಸಾಯಿಖಾನೆಗೆ ಸಾಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.30 ಸಾವಿರಕ್ಕೂ ಅಧಿಕ ಜಾನುವಾರಿಗಳಿಗೆ ಮೇವು ವಿತರಣೆ: ಈ ದಿಸೆಯಲ್ಲಿ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಜೀ ಮ.ಬೆಟ್ಟದ ತಪ್ಪಲಿನ ವ್ಯಾಪ್ತಿಯಲ್ಲಿನ ಗೋವುಗಳಿಗೆ ಕಳೆದ 2 ತಿಂಗಳು 30 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದಾರೆ. ಇದರ ಜತೆಗೆ ಗೋವುಗಳು ಕಟುಕರ ಪಾಲಾಗಾದ ದಿಸೆಯಲ್ಲಿ ಗೋವುಗಳನ್ನು ಸಾಕಲು ತುಂಬಾ ಕಷ್ಟ ಎದುರಿಸುತ್ತಿರುವ ಗೋಪಾಲಕರಿಂದ ಗೋವುಗಳನ್ನು ಮಠದ ವತಿಯಿಂದ ಖರೀದಿಸಿ, ಸಾಕಲು ಇಚ್ಛಿಸುವ ರೈತರಿಗೆ ಹಣ ಪಡೆದು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ದೇಸಿ ತಳಿಗಳನ್ನು ಉಳಿಸಲು ಅಭಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಭಯ ಜಾತ್ರಗೆ ಚಾಲನೆ: ಇದಕ್ಕೂ ಮುನ್ನಾ ದೊಡ್ಡಲತ್ತೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಅವರು ಅಭಯ ಜಾತ್ರೆಗೆ ಜ್ಯೋತಿಬೆಳಗಿಸಿ, ಗೋವುಗಳಿಗೆ ಆರತಿ ಎತ್ತುವುದರ ಮೂಲಕ ಚಾಲನೆ ನೀಡಿದರು. ಜಾತ್ರೆಗೆ ರಾಮಾಪುರ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮದ ಗೋಪಾಲಕರು ತಮ್ಮ ಕೆಲವು ಗೋವುಗಳನ್ನು ಮಾರಾಟ ಮಾಡಿದರಲ್ಲದೇ ಸಾಕಲು ಇಚ್ಛಿಸುವ ಕೆಲ ರೈತರು ಗೋವುಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಅಭಯ ಜಾತ್ರೆ ಸಂಘದ ಅಧ್ಯಕ್ಷ ಶಿವಕುಮಾರ್, ಭಾರತೀಯ ಕಿಸಾನ್ ಸಂಘದ ಸಿದ್ದಪ್ಪ, ಶ್ರೀ ರಾಘವೇಂದ್ರಪುರ ಮಠದ ಸಂಚಾಲಕರು, ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.