ವಿದ್ಯೆ ಜತೆ ಕೌಶಲ್ಯ ತರಬೇತಿ ಅವಶ್ಯ: ಶಾಸಕ ರಾಜಣ್ಣ ಸಲಹೆ
Team Udayavani, Aug 12, 2017, 5:48 PM IST
ಮಧುಗಿರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜೀವನ ಉತ್ತಮವಾಗಲು ವಿದ್ಯೆಯ ಜೊತೆ ಕೌಶಲ್ಯ ತರಬೇತಿ ಅತಿ ಅವಶ್ಯಕ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕೌಶಲ್ಯ ಅಭಿವೃದ್ಧಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಮಕ್ಕಳು ರೈತಾಪಿ ವರ್ಗದಿಂದ ಬಂದವರೇ ಹೆಚ್ಚು. ಆದರೂ, ನಗರದ
ವಿದ್ಯಾರ್ಥಿಗಳಿಗಿಂತ ಹೆಚ್ಚು ಬುದ್ಧಿವಂತರು. ಪದವಿ ಪಡೆದು ಉದ್ಯೋಗ ಪಡೆಯಲು ಸರ್ಕಾರ ಕೌಶಲ್ಯಾಭಿವೃದ್ಧಿ ನಿಗಮದಿಂದ ಮನೆ
ಬಾಗಿಲಿಗೆ ಉದ್ಯೋಗ ಮಾಹಿತಿ ನೀಡುವ ಕೆಲಸ ನಡೆದಿದೆ. ತಾಲೂಕು 4 ವರ್ಷದಿಂದ ತೀವ್ರ ಬರಗಾಲ ಎದುರಿಸಿದ್ದು, ವಿದ್ಯೆಯ ಜೊತೆ ಕೌಶಲ್ಯ ತರಬೇತಿ ಪಡೆದು ಉದ್ಯೋಗಗಳಿಸಿ ಸಮಾಜಕ್ಕೆ ಆಸ್ತಿಯಾಗಬೇಕೆಂದರು. ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ
ಹಾಲಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣ ಭಾಗದಿಂದ ಬಂದವರಾಗಿದ್ದು, ಬಡ ಮಕ್ಕಳ ಕಷ್ಟವನ್ನು ಅರಿತವರು. ಅದಕ್ಕಾಗಿ
ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಕೌಶಲ್ಯ ತರಬೇತಿ ಮಾರ್ಗದರ್ಶನ ಕೇಂದ್ರ ತೆರೆದು ವಿದ್ಯಾವಂತ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಆದೇಶಿಸಿದ್ದಾರೆ. ಅದರಂತೆ ನಿಗಮ ಕಾರ್ಯ ನಿರ್ವಹಿಸುತ್ತಿದ್ದು, ತಾಲೂಕಿನವರಾದ ಕಾಲೇಜು ಮಂಡಳಿ ಆಯುಕ್ತ ಅಜಯ್ ನಾಗಭೂಷಣ್‌ರ ಆದೇಶದಂತೆ 620 ಸರ್ಕಾರಿ ಹಾಗೂ ಅರೆ ಸರ್ಕಾರಿ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ ಆರಂಭಿಸಲು ಉದ್ದೇಶಿಸಿದ್ದೇನೆಂದರು. ಸೆ.30 ರೊಳಗೆ ಕಾಲೇಜಿನಲ್ಲಿ ಮಾರ್ಗಸೂಚಿ ಪುಸ್ತಕ ಪೂರೈಸುತ್ತಿದ್ದು, ವಿದ್ಯಾರ್ಥಿಗಳಿಗೆ ಉದ್ಯೋಗ, ಸಂದರ್ಶನ, ಪೂರ್ವ ತಯಾರಿ ಸೇರಿದಂತೆ ಇತರೆ ಮಾರ್ಗಸೂಚಿ ಒಳಗೊಂಡಿದೆ. ರಾಜ್ಯಾದ್ಯಂತ ಈ ಕಾರ್ಯಕ್ಕೆ ಆ.22 ರಿಂದ ಚಾಲನೆ
ನೀಡಲಾಗುತ್ತದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ 1 ಲಕ್ಷಕ್ಕೂ ಹೆಚ್ಚು ನೋಂದಣಿಯಾಗಿದ್ದು ಕೌಶಲ್ಯಕಾರ್ ವೆಬ್‌ನಲ್ಲಿ ನೋಂದಣಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೆಚ್ಚು ನೋಂದಣಿಯಾದರೆ ಮಾತ್ರ ತಾಲೂಕಿನಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಸಾಧ್ಯ.
ಇಲ್ಲವಾದರೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಕಚೇರಿ ಆರಂಭವಾಗಲಿದ್ದು, ಅಲ್ಲಿ ಅಗತ್ಯವಾದ ಎಲ್ಲಾ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ತಾಪಂ ಅಧ್ಯಕ್ಷೆ ಇಂದಿರಾ, ಎಪಿಎಂಸಿ ಅಧ್ಯಕ್ಷ ಪಿ.ಟಿ.ಗೋವಿಂದಯ್ಯ, ಪುರಸಭೆ ಅಧ್ಯಕ್ಷೆ ಎಲ್. ರಾಧಾ, ಉಪಾಧ್ಯಕ್ಷ ಎಂ.ಪಿ.ಗಣೇಶ್, ಸಿಂಡಿಕೇಟ್ ಸದಸ್ಯ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಲಿಂಗೇಶ್, ಪ್ರಾಂಶುಪಾಲ
ಮುನೀಂದ್ರಕುಮಾರ್, ಜಿಪಂ ಸದಸ್ಯ ಜಿ.ಜೆ. ರಾಜಣ್ಣ, ಸಂಪನ್ಮೂಲ ಅಧಿಕಾರಿ ವೆಂಕಟೇಶ್, ಯೇಸುದಾಸ್, ಪುರಸಭೆ ಸದಸ್ಯರಾದ
ಸತ್ಯನಾರಾಯಣ್, ಗೋಪಿನಾಥ್, ಅಲೀಂ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡ ನಾರಾಯಣ್, ದಿಲೀಪ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.