ಬ್ರೇಸ್ ಸಹಾಯದಿಂದ ವಕ್ರದಂತ ಸರಿಪಡಿಸಿ
Team Udayavani, Aug 13, 2017, 6:40 AM IST
ಬ್ರೇಸ್‌ಗಳ ಸಹಾಯದಿಂದ ಅಡ್ಡಾದಿಡ್ಡಿಯಾಗಿ ಬೆಳೆದ ವಕ್ರದಂತ ಪಂಕ್ತಿಯನ್ನು ಸರಿಪಡಿಸಬಹುದು. ಲಭ್ಯವಿರುವ ವಿವಿಧ ಬಗೆಯ ಬ್ರೇಸ್‌ಗಳೆಂದರೆ:
ಸ್ಥಿರ ಬ್ರೇಸ್‌ಗಳು – ಲೋಹ ಮತ್ತು ಸಿರಾಮಿಕ್
ಸ್ಥಿರ ಬ್ರೇಸ್‌ಗಳಲ್ಲಿ ಪ್ರತೀ ಹಲ್ಲಿನ ಮುಂಭಾಗಕ್ಕೆ ವಿಶೇಷ ಅಂಟಿನ ಮೂಲಕ ಒಂದು ಬ್ರಾಕೆಟನ್ನು ಕೂರಿಸಲಾಗುವುದು. ಲೋಹ ಅಥವಾ ಸಿರಾಮಿಕ್‌ನಿಂತ ಮಾಡಲಾದ ಈ ಬ್ರಾಕೆಟ್‌ಗಳನ್ನು ಓಥೊìಡಾಂಟಿಕ್ ತಂತುಗಳ ಮೂಲಕ ಒಂದಕ್ಕೊಂದು ಜೋಡಿಸಲಾಗುತ್ತದೆ. ಗಂಭೀರ ಸ್ವರೂಪದ ವಕ್ರದಂತಗಳನ್ನು ಸರಿಪಡಿಸಲು ಸ್ಥಿರ ಬ್ರೇಸ್‌ಗಳು ಸೂಕ್ತ.
ತೀವ್ರಸ್ವರೂಪದ ವಕ್ರದಂತಗಳನ್ನು ಸರಿಪಡಿಸಲು ಸ್ಥಿರ ಬ್ರೇಸ್‌ಗಳು ಕಡಿಮೆ ವೆಚ್ಚದಲ್ಲಿ ಅತ್ಯಂತ ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತವೆ. ಸಿರಾಮಿಕ್ ಬ್ರೇಸ್‌ಗಳು ನೋಡುವುದಕ್ಕೆ ಮೆಟಲ್ ಬ್ರೇಸ್‌ಗಳಿಗಿಂತ ಸಹಜ ಸುಂದರವಾಗಿ ಕಂಡರೂ ಹೆಚ್ಚು ವೆಚ್ಚದಾಯಕ ಮತ್ತು ವಕ್ರದಂತಗಳನ್ನು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.
ಅದೃಶ್ಯ ಸಮರೇಖಕಗಳು
ಪಾರದರ್ಶಕ ಬಣ್ಣದಿಂದಾಗಿ ಇವು ಕಣ್ಣಿಗೆ ಗೋಚರಿಸುವುದಿಲ್ಲ, ಜತೆಗೆ ಆಹಾರ ಸೇವಿಸುವಾಗ ಅಥವಾ ಹಲ್ಲುಜ್ಜುವಾಗ ಇವನ್ನು ತೆಗೆದಿರಿಸಬಹುದು. ಕಡಿಮೆ ತೀವ್ರತೆಯ ವಕ್ರದಂತ ಪಂಕ್ತಿಗಳಿಗೆ ಅದೃಶ್ಯ ಸಮರೇಖಕಗಳು ಹೆಚ್ಚು ಸೂಕ್ತ. ಇದು ಹೆಚ್ಚು ವೆಚ್ಚದಾಯಕ ಆಯ್ಕೆಯಾದರೂ ತಾವು ಬ್ರೇಸ್‌ಗಳನ್ನು ಧರಿಸಿದ ಬಳಿಕ ಹೇಗೆ ಕಾಣಿಸುತ್ತೆವೋ ಎಂಬ ಬಗ್ಗೆ ಕಳವಳ ಹೊಂದಿರುವ ಮತ್ತು ಬಾಯೊಳಗೆ ಏನನ್ನೋ ಇರಿಸಿಕೊಂಡಿರುವ ಕಿರಿಕಿರಿಯ ಭಾವವನ್ನು ಹೋಗಲಾಡಿಸಿ ಊಟ ಉಪಾಹಾರ ಸೇವನೆಯನ್ನು ಸಂತೋಷಿಸಬಯಸುವ ಜನರಿಗೆ ಇದೊಂದು ಉತ್ತಮ ಆಯ್ಕೆಯನ್ನು ಒದಗಿಸುತ್ತದೆ.
ಚಿಕಿತ್ಸೆಗೆ ಎಷ್ಟು ಕಾಲ ತಗಲುತ್ತದೆ?
ಸ್ಥಿರ ಬ್ರೇಸ್‌ಗಳ ಮೂಲಕ ವಕ್ರದಂತಗಳನ್ನು ಸರಿಪಡಿಸುವ ಚಿಕಿತ್ಸೆಗೆ 2ರಿಂದ 3 ವರ್ಷ ತಗಲುತ್ತದೆ. ಈ ಅವಧಿಯಲ್ಲಿ ನೀವು ಪ್ರತೀ 4-8 ವಾರಗಳಿಗೊಮ್ಮೆ ನಿಮ್ಮ ಓಥೊìಡಾಂಟಿಸ್ಟ್ ವೈದ್ಯರನ್ನು ಸಂದರ್ಶಿಸಬೇಕು.
ಬ್ರೇಸ್ ಚಿಕಿತ್ಸೆ ಚೆನ್ನಾಗಿ ಪ್ರಗತಿ ಕಾಣಲು ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಪ್ರತೀ ಬಾರಿ ಊಟ ಉಪಾಹಾರ ಸೇವಿಸಿದ ಬಳಿಕವೂ ಹಲ್ಲುಜ್ಜುವುದು, ಗಟ್ಟಿಯಾದ, ಅಂಟಂಟಾದ ಆಹಾರಗಳ ಸೇವನೆಯನ್ನು ವರ್ಜಿಸುವುದು ಅಗತ್ಯ.
ಬ್ರೇಸ್‌ಗಳನ್ನು ತೆಗೆದ ಬಳಿಕ ಹಲ್ಲುಗಳನ್ನು ಅವುಗಳ ಹೊಸ ಸ್ಥಾನದಲ್ಲಿಯೇ ಇರಿಸಲು ಸ್ಥಾನಕಗಳನ್ನು ಒದಗಿಸಲಾಗುತ್ತದೆ. ಸಾಮಾನ್ಯವಾಗಿ, ಹಲ್ಲುಗಳ ತಮ್ಮ ಮೂಲ ಸ್ಥಾನಗಳಿಗೆ ಮರಳದಂತೆ ತಡೆಯುವುದಕ್ಕಾಗಿ ಈ ಸ್ಥಾನಕಗಳನ್ನು 1-2 ವರ್ಷಗಳ ಕಾಲ ಧರಿಸಬೇಕಾಗುತ್ತದೆ.
ಜಿಹಿÌàಯ (ಲಿಂಗÌಲ್) ಬ್ರೇಸ್‌ಗಳು
ಇವು ಸ್ಥಿರ ಲೋಹದ ಬ್ರೇಸ್‌ಗಳಾಗಿದ್ದು, ಹಲ್ಲುಗಳ ಮುಂಭಾಗದ ಬದಲಾಗಿ ಹಲ್ಲುಗಳ ಹಿಂಭಾಗದಲ್ಲಿ ಕೂರಿಸಲಾಗುತ್ತದೆ. ಸಾಂಪ್ರದಾಯಿಕವಾದ ಸ್ಥಿರ ಬ್ರೇಸ್‌ಗಳಿಂದಾಗಿ ತಮ್ಮ ಮುಖದ ಅಂದಚೆಂದ ರೂಪುಗೆಡುತ್ತದೆಯೋ ಎಂಬ ಅಂಜಿಕೆಯುಳ್ಳ ಪ್ರೌಢರು ಮತ್ತು ಹದಿಹರಯದವರಿಗೆ ಇವು ಸೂಕ್ತ ಆಯ್ಕೆ. ಸಾಂಪ್ರದಾಯಿಕ ಸ್ಥಿರ ಬ್ರೇಸ್‌ಗಳಿಗಿಂತ ಜಿಹಿÌàಯ ಬ್ರೇಸ್‌ಗಳು ಹೆಚ್ಚು ವೆಚ್ಚದಾಯಕ ಮತ್ತು ಇವುಗಳನ್ನು ಶುಚಿಗೊಳಿಸುವುದು ಕೂಡ ಕಷ್ಟ. ಜಿಹಿÌàಯ ಬ್ರೇಸ್‌ಗಳ ಇನ್ನೊಂದು ಅನನುಕೂಲತೆಯೆಂದರೆ, ಇವು ನಾಲಗೆಗೆ ಸದಾ ತಗಲುತ್ತಿದ್ದು ನಿಮ್ಮ ಮಾತಿನ ಮೇಲೆ ಪರಿಣಾಮ ಉಂಟು ಮಾಡಬಲ್ಲವು. ಇವುಗಳನ್ನು ಧರಿಸಿದಾಗ ಬಾಯಿಯ ನೈರ್ಮಲ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗುತ್ತದೆ.
– ಡಾ| ರಿತೇಶ್ ಸಿಂಗ್ಲಾ,
ರೀಡರ್, ಆಥೊìಡಾಂಟಿಕ್ಸ್ ವಿಭಾಗ,
ಮಣಿಪಾಲ ದಂತವೈದ್ಯಕೀಯ ಕಾಲೇಜು, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.