ತರಕಾರಿ ಗ್ರಾಮದಲ್ಲೂ: ಫಸಲು ಕೊರತೆ
Team Udayavani, Aug 13, 2017, 6:55 AM IST
ತರಕಾರಿ ಬೆಳೆಯುವ ಗ್ರಾಮಗಳ ಪೈಕಿ ಚಾರ್ವಾಕ ಗ್ರಾಮ ಜಿಲ್ಲೆಯಲ್ಲಿ ಅಗ್ರಸ್ಥಾನಿ. ಕೃಷಿಕರೇ ಸಣ್ಣ ತಂಡ ರಚಿಸಿಕೊಂಡು, ತರಕಾರಿ ಮಾರಾಟ ಮಾಡುವ ಮೂಲಕ ಗಮನ ಸೆಳೆದ ಗ್ರಾಮವಿದು. ಆದರೆ ಈ ಬಾರಿ ಇಳುವರಿ ಕುಸಿತದ ಚಿಂತೆಯಲ್ಲಿದ್ದಾರೆ.
ಯಾವುದೇ ಬಗೆಯ ತರಕಾರಿಯಾದರೂ ಈ ಗ್ರಾಮದಲ್ಲಿ ಲಭ್ಯ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿಯನ್ನೇ ಜೀವನಾಧಾರವಾಗಿ ಅವಲಂಬಿಸಿವೆ. ಕೆಲವರು ಉಪ ಉತ್ಪನ್ನವಾಗಿ, ಇನ್ನು ಕೆಲವರು ತರಕಾರಿಯನ್ನೇ ಕಸುಬಾಗಿ ಮಾಡಿಕೊಂಡವರಿದ್ದಾರೆ. ಜಾಗ ಕಡಿಮೆ ಇದ್ದವರೂ ಬೇರೆಲ್ಲಿಯೋ ಜಾಗವನ್ನು ಗೇಣಿಗೆ ಪಡೆದುಕೊಂಡು ತರಕಾರಿ ಬೆಳೆಸಿದವರಿದ್ದಾರೆ.
ಪ್ರತಿದಿನ ಒಂದೆರಡು ಪಿಕಪ್ನಲ್ಲಿ ಮಂಗಳೂರು ಮಾರುಕಟ್ಟೆಗೆ ತರಕಾರಿ ಸರಬರಾಜು ಮಾಡುತ್ತಾರೆ. ತಂಡವಾಗಿ ರಚಿಸಿಕೊಂಡು, ಅಂದರೆ ಎರಡು ದಿನಕ್ಕೊಂದು ತಂಡ ತೆರಳುತ್ತದೆ. ಸುಮಾರು 10 ಕೃಷಿಕರ ತರಕಾರಿ ಇಲ್ಲಿ ಜಮೆಯಾಗುತ್ತದೆ. ಕೆ.ಜಿ. ಲೆಕ್ಕದಲ್ಲಿ ತರಕಾರಿ ತಂದುಕೊಡುವ ಕೃಷಿಕರ ತರಕಾರಿಯನ್ನು ಉಪೇಕ್ಷಿಸುವುದಿಲ್ಲ. ಮರುದಿನ ಇನ್ನೊಂದು 10 ಜನ ಕೃಷಿಕರ ತರಕಾರಿ ಸಿದ್ಧವಾಗಿರುತ್ತದೆ. ತರಕಾರಿ ಬೆಳೆದ ಕೃಷಿಕರೆಲ್ಲರೂ ಮಾರಾಟಕ್ಕೆ ಹೋಗುವುದಿಲ್ಲ. ಒಂದಿಬ್ಬರು ಮಾತ್ರ ತೆರಳುತ್ತಾರೆ. ಸಂಜೆ ಬಂದು ಹಣವನ್ನು ಕೃಷಿಕರಿಗೆ ಮರಳಿಸುತ್ತಾರೆ.
2ನೇ ಹಂತದ ಕೃಷಿ
ವರ್ಷಕ್ಕೆ ಎರಡು ಬಾರಿ ಇಳುವರಿ ತೆಗೆಯಲಾಗುತ್ತದೆ. ಮೇ- ಜೂನ್ನಲ್ಲಿ ಬೀಜ ಹಾಕಿದರೆ ಸೆಪ್ಟಂಬರ್ನಲ್ಲಿ ಕೊಯ್ಲು ನಡೆಯುತ್ತದೆ. ನವೆಂಬರ್- ಡಿಸೆಂಬರ್ನಲ್ಲಿ ಮತ್ತೂಮ್ಮೆ ಬೀಜ ಬಿತ್ತಿದರೆ, ಮಾರ್ಚ್- ಎಪ್ರಿಲ್ ವೇಳೆಗೆ ಮತ್ತೂಂದು ಹಂತದ ಫಸಲು ಸಿದ್ಧ. ವರ್ಷದ ಒಂಬತ್ತು ತಿಂಗಳು ಇಲ್ಲಿನ ಕೃಷಿಕರು ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿರುತ್ತಾರೆ. ಮೇ, ಜೂನ್, ಜುಲೈ ತಿಂಗಳಲ್ಲಿ ತರಕಾರಿ ಮಾರಾಟ ಕಡಿಮೆ. ಸದ್ಯ ಮೊದಲ ಹಂತದ ಕೊಯ್ಲಿಗೆ ಸಿದ್ಧತೆ ನಡೆಯುತ್ತಿದೆ. ತರಕಾರಿ ಪ್ರಮಾಣ ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿಯುತ್ತಿರುವುದರ ಬಗ್ಗೆ ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸುತ್ತಾರೆ.
ಫಸಲು ಕಡಿಮೆ
ಎರಡು ವರ್ಷಗಳ ಹಿಂದೆ ದಿನಕ್ಕೆ ಎರಡು ಪಿಕಪ್ಗಿಂತ ಹೆಚ್ಚು ತರಕಾರಿ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು. ಈಗ ತರಕಾರಿ ಕಡಿಮೆಯಾಗುತ್ತಾ ಬಂದಿದ್ದು, ಒಂದು ಪಿಕಪ್ ಮಾತ್ರ ಮಂಗಳೂರಿಗೆ ಹೋಗುತ್ತಿದೆ. ಇದರಲ್ಲಿ ಸುಮಾರು 22 ಕ್ವಿಂಟಾಲ್ ತರಕಾರಿ ಹಿಡಿಯುತ್ತದೆ. ಆದ್ದರಿಂದ ಸ್ವಂತ ದುಡಿಮೆ ಯೊಂದೇ ಜೀವನಕ್ಕೆ ದಾರಿ ಎಂಬುದನ್ನು ಕಂಡುಕೊಂಡಿದ್ದಾರೆ.
ಘಟ್ಟದ ತರಕಾರಿ ಪೈಪೋಟಿ
ಊರ ಬೆಳೆ ಎಂಬ ಕಾರಣಕ್ಕೆ ದೊಡ್ಡ ಲಾಭವೇನೂ ಕೃಷಿಕರ ಕೈಗೆ ಇನ್ನೂ ಎಟುಕಿಲ್ಲ. ಘಟ್ಟ ಪ್ರದೇಶದಿಂದ ಬರುವ ತರಕಾರಿ ಮುಂದೆ ಸಿಕ್ಕಿದ ದರಕ್ಕೆ ಊರ ತರಕಾರಿಯನ್ನು ಮಾರಾಟ ಮಾಡಬೇಕು. ಇನ್ನೂ ಕೆಲವು ಸಲ ಹೋಲ್ ಸೇಲ್ ದರಕ್ಕೆ ಮಾರಾಟ ಮಾಡಿದ್ದು ಇದೆ. ಜನರು ದರವನ್ನು ಮಾತ್ರ ನೋಡುತ್ತಾರೆ. ಗುಣಮಟ್ಟ ಕೇಳುವವರಿಲ್ಲ ಎನ್ನುತ್ತಾರೆ ಕೃಷಿಕರು. ಹವಾಮಾನ ವೈಪರೀತ್ಯಕ್ಕೆ ಈ ವರ್ಷ ಫಸಲು ಕಡಿಮೆ ಇದೆ. ಧಾರಣೆ ಎಷ್ಟರಲ್ಲಿ ನಿಲ್ಲುತ್ತದೆ ಎಂಬ ಬಗ್ಗೆಯೂ ಆತಂಕವೂ ಇದೆ.
ನೆಚ್ಚಿ ಕೊಂಡಿದ್ದೇನೆ
ಸುಮಾರು 5 ಎಕರೆ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದೇನೆ. ಹಲವು ಬಗೆಯ ತರಕಾರಿಗಳಿವೆ. ನೀರಿಗಾಗಿ ಬಳಿಯಲ್ಲೇ ಹರಿಯುವ ಕುಮಾರಧಾರಾ ನದಿಯಿದೆ. ವರ್ಷಪೂರ್ತಿ ಶ್ರಮ ಪಟ್ಟು ದುಡಿದರೆ, ಜೀವನ ನಿರ್ವಹಣೆಗೆ ಸಮಸ್ಯೆಯಿಲ್ಲ. ಇದರ ಜತೆಗೆ ಅಡಿಕೆಯೂ ಇರುವುದರಿಂದ, ಅಲ್ಪಾವಧಿ ಬೆಳೆಯಾಗಿ ತರಕಾರಿಯನ್ನು ನೆಚ್ಚಿಕೊಂಡಿದ್ದೇನೆ. ಅಡಿಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಆದಾಯ ನೀಡುತ್ತದೆ. ಆದರೆ ತರಕಾರಿ ದಿನನಿತ್ಯದ ಖರ್ಚಿಗೂ ಹಣ ಒದಗಿಸುತ್ತದೆ.
ಗಂಗಾಧರ ಜತ್ತೋಡಿ, ಕೃಷಿಕ ಚಾರ್ವಾಕ
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.