ಶಿಸ್ತುಬದ್ಧರಾಗಿಯೂ ಜನಪ್ರೀತಿ ಗಳಿಸಿದ ಸಾಧಕ: ವಿವೇಕ ರೈ
Team Udayavani, Aug 13, 2017, 7:15 AM IST
ಕುಂದಾಪುರ: ಸಾಮಾನ್ಯವಾಗಿ ಬಹಳ ಶಿಸ್ತುಬದ್ಧರಾಗಿ ಜೀವನ ನಡೆಸುವವರು ಜನರಿಂದ ದೂರವಿರುತ್ತಾರೆ. ಪರಂಪರೆಯಲ್ಲಿ ಅಭಿಮಾನವುಳ್ಳವರು ಆಧುನಿಕತೆ ಯನ್ನು ನಿರಾಕರಿಸು ತ್ತಾರೆ ಹಾಗೂ ಸಮುದಾಯದಿಂದ ದೂರವಿರುತ್ತಾರೆ ಎನ್ನುವುದು ಪ್ರತೀತಿ. ಆದರೆ ಇದಕ್ಕೆ ಭಿನ್ನವಾಗಿರುವ
ಡಾ| ಶಾಂತಾರಾಮ್ ಅವರು ಇವುಗಳನ್ನೆಲ್ಲ ಮೀರಿ ಜನರ ನಡುವೆಯೇ ಸಾಧನೆ ಮಾಡಿ ತೋರಿದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅವರು ಹೇಳಿದರು.
ಅವರು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಸ್ವಪ್ನಶಿಲ್ಪಿ ಡಾ| ಎಚ್. ಶಾಂತಾರಾಮ್ ಅವರ ತೊಂಬತ್ತನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆಯುವ 3 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನ ಎನ್ನುವುದು ಪುಸ್ತಕದ ಮೂಲಕ, ರಂಗದ ಮೂಲಕ ಹಾಗೂ ರಂಗದ ಹೊರಗಡೆ ಹೀಗೆ ಮೂರು ನೆಲೆಗಳಲ್ಲಿ ದೊರೆಯುವಂತಹದು. ಈ ಮೂರು ನೆಲೆಗಳಲ್ಲಿ ಜ್ಞಾನ ಸಂಪಾ ದನೆ ಮಾಡದೇ ಹೋದಲ್ಲಿ ನಮ್ಮ ಶಿಕ್ಷಣ ಎನ್ನುವುದು ಪದವಿಗಳನ್ನು ಗಳಿಸುವುದಕ್ಕೆ ಮಾತ್ರ ಸೀಮಿತ ವಾಗುತ್ತದೆ ಎನ್ನುವುದನ್ನು ನಂಬಿಕೊಂಡು ಬಂದವರು ಡಾ| ಶಾಂತಾರಾಮ್ ಅವರು ಎಂದು ವಿವೇಕ ರೈ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಡಾ| ಶಾಂತಾರಾಮರ ನೇರನುಡಿ, ಸಹನೆ, ಉನ್ನತ ವ್ಯಕ್ತಿತ್ವ ಯಾವುದೇ ಸಮಸ್ಯೆಯನ್ನು ಸಲೀಸಾಗಿ ಪರಿಹರಿಸು ವಲ್ಲಿ ಸಹಕಾರಿಯಾಗಿದೆ. ಇಂತಹ ಗುಣ ವಿಶೇಷಗಳು ಇರುವು ದರಿಂದಲೇ ಅವರು ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ರೋಟರಿ ಡಿಜಿಪಿಎಚ್‌ಎಫ್ ಜಿ.ಎನ್. ಪ್ರಕಾಶ್, ಯಕ್ಷಗಾನ ಕಲಾವಿದ ಶ್ರೀಧರ ಹಂದೆ, ಗಮಕ ಕಲಾವಿದ ಡಾ| ಎ.ವಿ. ಪ್ರಸನ್ನ, ಲೇಖಕ ಶಿವಾನಂದ ಕಾರಂತ ಅವರು ಡಾ| ಶಾಂತಾರಾಮರ ಕುರಿತು ನೆನಪಿನ ಮಾತುಗಳನ್ನಾಡಿದರು. ಸಾಂಕ ಯತ್ನ ಹುಟ್ಟುಹಬ್ಬದ ಅಭಿನಂದನೆ ಸ್ವೀಕರಿ ಸಿದ ಡಾ| ಶಾಂತಾರಾಮ್ ಅವರು ಸಂಸ್ಥೆ ಬೆಳೆದು ಬಂದ ರೀತಿಯನ್ನು ವಿವರಿಸುತ್ತ, ಯಾವುದೇ ಓರ್ವ ವ್ಯಕ್ತಿಯಿಂದ ಸಂಸ್ಥೆ ಬೆಳೆಯಲು ಸಾಧ್ಯವಿಲ್ಲ. ಎಲ್ಲರ ಸಾಂಘಿಕ ಕೊಡುಗೆಯಿಂದ ಈ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
ವಿದ್ಯಾರ್ಥಿವೇತನ ವಿತರಿಸಲಾ ಯಿತು. ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥೆ ಡಾ| ರೇಖಾ ವಿ. ಬನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಪ.ಪೂ. ಕಾಲೇಜಿನ ಪ್ರಾಂಶು ಪಾಲ ಜಿ.ಎಂ. ಗೊಂಡ ವಂದಿಸಿದರು. ಮಧ್ಯಾಹ್ನ ಗಮಕ ಕಲಾವಿದ ಡಾ| ಎ.ವಿ. ಪ್ರಸನ್ನ ಮತ್ತು ನಿರ್ಮಲಾ ಪ್ರಸನ್ನ ಅವರಿಂದ ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಯಿತು.
ಚಿನ್ನದ ಪದಕ ಘೋಷಣೆ
ಭಂಡಾರ್‌ಕಾರ್ಸ್ ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸುವ ವಿದ್ಯಾರ್ಥಿಗೆ ಶಾಂತಾರಾಮ್ ಅವರ ಕುಟುಂಬದವರಿಂದ “ಡಾ| ಶಾಂತಾರಾಮ ನಮಿತಿ’ ಚಿನ್ನದ ಪದಕ ನೀಡುವುದಾಗಿ ಡಾ| ಎಚ್. ಶಾಂತಾರಾಮ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.