ಶಿವಪುರ: ಟಿಪ್ಪರ್ ಮೇಲೆ ಕುಸಿದು ಬಿದ್ದ ಬಂಕರ್: ಇಬ್ಬರು ಸಾವು
Team Udayavani, Aug 13, 2017, 7:30 AM IST
ಹೆಬ್ರಿ: ಶಿವಪುರ ಕಲ್ಮುಂಡ ಬಳಿ ಇರುವ ಮೂಕಾಂಬಿಕಾ ಕ್ರಶರ್ ಘಟಕದಲ್ಲಿ ಜಲ್ಲಿ ತುಂಬಿದ ಬಂಕರ್ ಕುಸಿದು ಟಿಪ್ಪರ್‌ನ ಮೇಲೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೆ ಮೃತಪಟ್ಟ ಘಟನೆ ಶನಿವಾರಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂಳ್ಕೂರು ಮೂಲದ ಪರಶುರಾಮ ಅವರ ಪುತ್ರ ಸಂಜೀವ (28) ಹಾಗೂ ಉತ್ತರ ಪ್ರದೇಶದ ಜಗದೀಶ್‌ಯಾನೆ ಅಜಿತ್ (27) ಮೃತಪಟ್ಟವರು. ಸಂಜೀವ ಅವರು ಟಿಪ್ಪರ್ ಚಲಾಯಿಸುತ್ತಿದ್ದರು. ಅಜಿತ್ ಟಿಪ್ಪರ್‌ನ ಮೇಲೆ ಇದ್ದರು.
ಶನಿವಾರ ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಬಂಕರ್‌ನಲ್ಲಿದ್ದ ಜಲ್ಲಿಯನ್ನು ಟಿಪ್ಪರ್‌ಗೆ ತುಂಬಿ ಟಿಪ್ಪರ್ ಅನ್ನು ಹಿಂದಕ್ಕೆ ಚಲಾಯಿಸುತ್ತಿರುವಾಗ ಬಂಕರ್‌ನ ಪಿಲ್ಲರ್ ತುಂಡಾಗಿ ಬೃಹತ್ ಗಾತ್ರದ ಬಂಕರ್ ಟಿಪ್ಪರ್ ಮೇಲೆ ಕುಸಿದು ಬಿದ್ದಿದೆ. ಪರಿಣಾಮ ಟಿಪ್ಪರ್‌ನ ಚಾಲಕ ಹಾಗೂ ಕಾರ್ಮಿಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
3 ಗಂಟೆ ತೆರವು ಕಾರ್ಯ
ಘಟನೆ ನಡೆದು ಸುಮಾರು 3ಗಂಟೆಗಳ ಕಾಲ ತೆರವು ಕಾರ್ಯಾ ಚರಣೆ ನಡೆಯಿತು. ಅಪಘಾತದ ತೀವ್ರತೆಯಿಂದ ಟಿಪ್ಪರ್ ಒಳಗೆ ಸಿಲುಕಿಕೊಂಡು ತೀವ್ರವಾಗಿ ಗಾಯ ಗೊಂಡ ಚಾಲಕನನ್ನು ಹೊರತೆಗೆಯಲು ಕಷ್ಟಪಡ ಬೇಕಾಯಿತು. ಸುಮಾರು ಮೂರು ಜೆಸಿಬಿಗಳನ್ನು ಉಪಯೋಗಿಸಿಕೊಂಡು ಸಾರ್ವಜನಿಕರ ಸಹಕಾರದಿಂದ ಹೆಬ್ರಿ ಪೊಲೀಸರು ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಕ್ರಶರ್ ವಿರುದ್ಧ ಪ್ರಕರಣ
ಕ್ರಶರ್ ಘಟಕದೊಳಗೆ ಸೂಕ್ತ ಭದ್ರತೆ ಇಲ್ಲದೆ ಅನಾಹುತ ಸಂಭವಿಸಿದೆ ಎಂದು ಹೆಬ್ರಿ ಠಾಣೆಯಲ್ಲಿ ಘಟಕದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಡಾ| ಸಂಜಯ್ ಎಂ. ಪಾಟೀಲ್, ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ಹೆಬ್ರಿ ಠಾಣಾಧಿಕಾರಿ ಜಗನ್ನಾಥ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.