ಮೆಟ್ರೋಗೆ ಮರ ಕಡಿಯುವುದನ್ನು ವಿರೋಧಿಸಿ ವಾಕಥಾನ್
Team Udayavani, Aug 13, 2017, 11:20 AM IST
ಮಹದೇವಪುರ: ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ರೀಚ್-1ಗೆ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಕಾಮಗಾರಿಗೆ ಅಡ್ಡಲಾಗಿರುವ 60ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ವೈಟ್‌ಫೀಲ್ಡ್ ನಿವಾಸಿಗಳು ವೃಕ್ಷ ವೈದ್ಯ ವಿಜಯ್ ನಿಶಾಂತ್ ನೇತೃತ್ವದಲ್ಲಿ ಶನಿವಾರ ವಾಕತ್ತಾನ್ ನಡೆಸಿದರು.
ಬೆಳಗ್ಗೆ 8ಕ್ಕೆ ಐಟಿಪಿಎಲ್ ಕ್ರಿಕೆಟ್ ಮೈದಾನದಿಂದ ಆರಂಭಗೊಂಡ ವಾಕತ್ತಾನ್ ಹೋಪ್ ಫಾರ್ಮ್ವರೆಗೂ ತೆರಳಿ ಅಂತ್ಯವಾಯಿತು. ಮೆಟ್ರೋ ಕಾಮಗಾರಿಯ ಎರಡನೇ ಹಂತದ ಯೋಜನೆ ಐಟಿಪಿಎಲ್ ಮುಖ್ಯರಸ್ತೆಯ ಬದಿಯಲ್ಲಿ ನಡೆಯುತ್ತಿದೆ. ಇದಕ್ಕೆ 60ಕ್ಕೂ ಹೆಚ್ಚು ಮರಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆಯಿದ್ದು ಮರಗಳನ್ನು ಕಡಿಯಲು ಬಿಎಂಆರ್‌ಸಿ ಮುಂದಾಗಿದೆ. ಆದರೆ, ಮರಗಳನ್ನು ಕಡಿಯುವ ಬದಲಿಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ವೃಕ್ಷ ವೈದ್ಯ ವಿಜಯ್ ನಿಶಾಂತ್, ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪೈಕಿ ಬೆಂಗಳೂರು ದೇಶದಲ್ಲೇ ಮುಂದಿದೆ. ಆದರೆ, ಪರಿಸರ ರಕ್ಷಣೆಯಲ್ಲಿ ಆಧುನಿಕತೆ ಅಳವಡಿಸಿಕೊಂಡಿಲ್ಲ. ವೈಟ್‌ಫೀಲ್ಡ್, ಸಿಲ್ಕ್ಬೋರ್ಡ್‌ನಲ್ಲಿ ನಡೆಯಲಿರುವ ಮೆಟ್ರೋ ಕಾಮಗಾರಿ ಹಾಗೂ ಎಚ್‌ಎಎಲ್, ಇಸ್ರೋ ಜಂಕ್ಷನ್‌ಗಳಲ್ಲಿ ಕೈಗೊಳ್ಳಲಿರುವ ಸಿಗ್ನಲ್ ಮುಕ್ತ ಕಾರಿಡಾರ್ ಸಂಚಾರ ವ್ಯವಸ್ಥೆಯ ಸಲುವಾಗಿ ಈಗಾಗಲೇ ಹಲವು ಮರಗಳನ್ನು ಕಡಿಯಲಾಗಿದೆ, ಮತ್ತಷ್ಟನ್ನು ಕಡಿಯಲು ಗುರುತು ಮಾಡಲಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಹೈಕೋರ್ಟ್ ಆದೇಶದ ಉಲ್ಲಂಘನೆ: ಯಾವುದೇ ಯೋಜನೆಗೆ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೂ ವೃಕ್ಷ ಸಮಿತಿಯ ಅನುಮತಿ ಬೇಕು, ಸಮಿತಿಯು ಸಾರ್ವಜನಿಕ ಸಭೆ ನಡೆಸಿ ಜನಾಭಿಪ್ರಾಯ ಪಡೆಯಬೇಕೆಂಬ ನಿಮಯವಿದೆ. ಬಿಬಿಎಂಪಿ ಹಾಗೂ ಬಿಎಂಆರ್‌ಸಿ ಒಂದೇ ಯೋಜನೆಯನ್ನು ಒಂದಕ್ಕಿಂತ ಹೆಚ್ಚು ಹಂತಗಳನ್ನಾಗಿ ವಿಂಗಡಿಸುವ ಮೂಲಕ ಈ ನಿಯಮದಿಂದ ತಪ್ಪಿಸಿಕೊಳ್ಳುತ್ತಿವೆ.
ಕಡಿಯ ಬೇಕಾದ ಮರಗಳನ್ನು 49ಕ್ಕಿಂತ ಕಡಿಮೆಯಿರುವಂತೆ ತೋರಿಸುತ್ತಿದ್ದಾರೆ. ಈ ವಿಚಾರ ಗೊತ್ತಿದ್ದರೂ ಅರಣ್ಯ ಘಟಕದವರು ಮರಗಳನ್ನು ಕಡಿಯಲು ಅನುಮತಿ ನೀಡುತ್ತಿದ್ದಾರೆ ಇದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಹಸಿರು ಉಳಿಸುವ ಹೈಕೋರ್ಟ್‌ನ ಉದ್ದೇಶವನ್ನೇ ಅಣಕಿಸಲಾಗುತ್ತಿದೆ ಎಂದು ವೃಕ್ಷ ಪ್ರೇಮಿ ವಿ.ಆರ್.ಜಾಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!
Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್: ವಿರಾಟ್ ನಡೆಗೆ ಕಿರಣ್ ಫಿದಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.