ಸಾಂಪ್ರದಾಯಿಕ ದಸರಾ ಆಚರಿಸೋಣ: ಡಾ.ಮಹದೇವಪ್ಪ
Team Udayavani, Aug 13, 2017, 11:41 AM IST
ಮೈಸೂರು: ಸಂವಿಧಾನ-ಪ್ರಜಾಸತ್ತೆ-ಸಮಾನತೆಯ ಘೋಷ ವಾಕ್ಯದೊಂದಿಗೆ ಈ ವರ್ಷ ಸಾಂಪ್ರದಾಯಿಕ ದಸರಾ ಆಚರಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆಯ ಬಳಿ ಗಜಪಯಣಕ್ಕೆ ಚಾಲನೆ ನೀಡಿದ ನಂತರ ಗುರುಪುರ ಟಿಬೆಟಿಯನ್ ನಿರಾಶ್ರಿತರ ಕೇಂದ್ರದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತಿಹಾಸದಲ್ಲಿ ಕರ್ನಾಟಕದ ಗತವೈಭವವನ್ನು ಸಾರಿದ ವಿಜಯನಗರ ಸಾಮ್ರಾಜ್ಯದ ಬಳುವಳಿಯಾದ ದಸರಾ ಮಹೋತ್ಸವವನ್ನು ಮೈಸೂರು ಅರಸು ಮುಂದುವರೆಸಿದ್ದು, ಸರ್ಕಾರ ಕೂಡ ಈ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.
ಕಳೆದ ಎರಡು-ಮೂರು ವರ್ಷಗಳಿಂದ ಸತತ ಬರಗಾಲವಿದ್ದು, ಈ ವರ್ಷ ಕೂಡ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಕಳೆದ 41 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿದೆ ಈ ವರ್ಷ. ಪ್ರಕೃತಿಯ ಈ ವಿಕೋಪ, ಜನರಲ್ಲಿ ಆತಂಕ ಮೂಡಿಸಿದೆ. ಮಾನವನ ಮಿತಿಮೀರಿದ ದುರಾಸೆಯಿಂದ ಅರಣ್ಯ- ಪ್ರಕೃತಿಯ ಸಮತೋಲನ ನಾಶಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ತಿಳಿಸಿದರು.
ಈ ವರ್ಷದ ಶೇ.65ರಷ್ಟು ಮಳೆ ಅವಧಿ ಮುಗಿದಿದೆ. ಆದರೂ ಈ ಭಾಗದ ಜಲಾಶಯಗಳು ಭರ್ತಿಯಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆ.14ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದು, ಈ ಸಭೆಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಮಾಹಿತಿ ಪಡೆದು ಸಂಕಷ್ಟ ಸೂತ್ರ ಪಾಲನೆ ವಿಧಾನದಂತೆ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ, ಅರೆ ನೀರಾವರಿ ಬೆಳೆಗಳಿಗೆ ಹೋಗುವ ತೀರ್ಮಾನ ಮಾಡಲಾಗುವುದು ಎಂದರು.
ಮಳೆಯ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ಪಡೆದ 50 ಸಾವಿರ ರೂ. ಗಳವರೆಗಿನ ಕೃಷಿ ಸಾಲಮನ್ನಾ ಮಾಡಿದೆ. ಇದರಿಂದ 22 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಿರುವ ಸಂವಿಧಾನ ದುರ್ಬಲಗೊಳ್ಳುತ್ತಿದೆ. ಭಯದಲ್ಲಿಟ್ಟು ಜನರ ಹಕ್ಕು ಕಸಿದುಕೊಳ್ಳುವ ಅಪಾಯ ಎದುರಾಗಿದೆ.
ಇಂತಹ ಕೋಮುಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಂವಿಧಾನದ ರಕ್ಷಣೆ ಅಗತ್ಯವಿದೆ. ಕೋಮುಶಕ್ತಿಗಳ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ ರಕ್ಷಣೆಯ ಮುಖಾಂತರ ಪ್ರಜಾಪ್ರಭುತ್ವವ ಕಾಪಾಡಿಕೊಳ್ಳಬೇಕು. ಈ ಬಾರಿಯ ದಸರಾವನ್ನು ಸಂವಿಧಾನ, ಪ್ರಜಾಸತ್ತೆ ಮತ್ತು ಸಮಾನತೆ ಮೂಲವಾಗಿ ಇಟ್ಟಿಕೊಂಡು ಆಚರಿಸೋಣ ಎಂದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಸತತ ಬರಗಾಲದಿಂದ ಮುಂದಿನ ದಿನಗಳಲ್ಲಿ ûಾಮದ ಕಡೆಗೆ ಹೋಗುವ ಭಯವಿದೆ. ತಾಲೂಕಿನಲ್ಲಿ ಕಳೆದ ವರ್ಷ ಶೇ.50ರಷ್ಟು ಕೆರೆಗಳು ತುಂಬಿತ್ತು. ಈ ವರ್ಷ ಶೇ.19ರಷ್ಟು ಕೆರೆಗಳೂ ತುಂಬಿಲ್ಲ. ಆದಷ್ಟು ಬೇಗ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿ ಜನ- ಜಾನುವಾರುಗಳಿಗೆ ಕುಡಿಯುವ ನೀರು ಸಿಗುವಂತಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಸರಾ ವೆಬ್‌ಸೈಟ್ ಚಾಲನೆ ನೀಡಿದ ಸಚಿವ ಮಹದೇವಪ್ಪ, ಆನೆಗಳ ಬಗ್ಗೆ ನಿರ್ಮಿಸಿರುವ ಕಿರುಚಿತ್ರ ಗಜ ಬಿಡುಗಡೆ ಮಾಡಿದರು. ಮಾವುತರು ಹಾಗೂ ಕಾವಡಿಗಳಿಗೆ ತಾಂಬೂಲ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.