ಪ್ಲಾಸ್ಟಿಕ್ ಧ್ವಜ ಬಳಕೆ ತಡೆ ಜಾಗೃತಿ
Team Udayavani, Aug 13, 2017, 11:59 AM IST
ಹುಬ್ಬಳ್ಳಿ: ಇಲ್ಲಿನ ಲೀಡರ್ ಎಕ್ಸಲರೇಟಿಂಗ್ ಡೆವಲಪ್‌ಮೆಂಟ್ ಪ್ರೋಗ್ರಾಂ ಮತ್ತು ದೇಶಪಾಂಡೆ ಚೈತನ್ಯ ಫೆಲೋಶಿಪ್ ತರಬೇತಿ ಕಾರ್ಯಕ್ರಮದಡಿ ಸ್ವಾತಂತ್ರ್ಯದಿನಾಚರಣೆಯಂದು ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಕೆ ಬದಲಾಗಿ ನೂಲಿನಿಂದ ತಯಾರಿಸಿದ ಧ್ವಜ ಬಳಕೆ ಮಾಡುವಂತೆ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸಿದರು.
ಸಂಸ್ಥೆಯ ಸಹ ನಿರ್ದೇಶಕ ಗುರನಗೌಡ ಕುರಗುಂದ ಮಾತನಾಡಿ, ವಿಶೇಷ ಸಂಸ್ಕೃತಿ, ಶಿಸ್ತು ಮತ್ತು ಬದ್ಧತೆಯ ಪ್ರತೀಕವಾದ ಭಾರತ ತನ್ನ ಏಕತಾ ಮನೋಭಾವದಿಂದ ಜಗತ್ತೇ ನಮ್ಮತ್ತ ನೋಡುವಂತೆ ಮಾಡುತ್ತಿದೆ. ಇಂತಹ ದೇಶದ ರಾಷ್ಟ್ರ ಧ್ವಜವನ್ನು ಗೌರವ ಮನೋಭಾವನೆಯಿಂದ ನಾವೆಲ್ಲರೂ ಕಾಣಬೇಕು ಎಂದರು.
ಪ್ಲಾಸ್ಟಿಕ್ ಧ್ವಜಗಳನ್ನು ದಿನಾಚರಣೆ ನಂತರ ಎಲ್ಲೆಂದರಲ್ಲಿ ಬಿಸಾಡಿ ಬಿಡುತ್ತಾರೆ. ಹಾಗೆ ಮಾಡುವುದರಿಂದ ನಮ್ಮ ದೇಶದ ಘನತೆ ಮಣ್ಣು ಪಾಲಾದಂತೆ. ಆದ್ದರಿಂದ ಎಲ್ಲರೂ ಪ್ಲಾಸ್ಟಿಕ್ ಧ್ವಜದ ಬಳಕೆ ಮಾಡುವ ಬದಲಾಗಿ ನೂಲಿನಿಂದ ತಯಾರಿಸಿದ ಧ್ವಜದ ಬಳಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ 60 ವಿದ್ಯಾರ್ಥಿಗಳ ನಾಲ್ಕು ತಂಡಗಳ ಮೂಲಕ ನಗರದ ವಿವಿಧ ಬಡಾವಣೆ ಮತ್ತು ಶಾಲೆಗಳಿಗೆ ತೆರಳಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಸದಂತೆ ಮನವಿ ಮಾಡಲಾಯಿತು. ಸಂಸ್ಥೆಯ ಬಸವರಾಜ ಕೆ., ಸಂತೋಷ ಬಿರಾದಾರ, ಮಲ್ಲಿಕಾರ್ಜುನ ಅಂಬಲಗಿ, ಶ್ರೀನಿಧಿ, ಸುನೀಲ, ಸ್ವಾತಿ, ಹನುಮಕ್ಕ, ಜಗದೀಶ, ರಾಜು, ಯೋಗೇಶ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.