ತ್ರಿದಿನಗಳ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ
Team Udayavani, Aug 13, 2017, 2:09 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಭಾರತ್ ಬ್ಯಾಂಕ್‌ನ ಸಹಯೋಗದೊಂದಿಗೆ ಅಸೋಸಿಯೇಶನ್‌ನ ಸ್ಥಳೀಯ ಸಮಿತಿ ಗಳಿಗೆ ಈ ಬಾರಿ ತ್ರಿದಿನಗಳ ಏಕತಾಸು ಕಾಲಾವಧಿಯಾಗಿ ಆಯೋಜಿಸಿರುವ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಆ. 12ರಂದು ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವ ಬಿಲ್ಲವ ಭವನದ ನಾರಾಯಣಗುರು ಸಭಾಗೃಹದಲ್ಲಿ ಚಾಲನೆ ನೀಡಲಾಯಿತು.
ಬೆಳಗಾವಿ ಬೈಲಹೊಂಗಲ ಬೇವಿನ ಕೊಪ್ಪದ ಬಾಬಾ ನಿತ್ಯಾನಂದ ಆನಂದಾಶ್ರಮದ ಶ್ರೀ ಗುರುದೇವ ನಿತ್ಯಾನಂದ ಧ್ಯಾನ ಮಂದಿರದ ವಿಜಯಾನಂದ ಸ್ವಾಮಿಗಳು ಸ್ಪರ್ಧೆಗೆ ಸಾಂಕೇತಿಕವಾಗಿ ಚಾಲನೆ ನೀಡಿ, ನಾನೊಬ್ಬ ನಾಟಕಕಾರನಾಗಿದ್ದು ಹಲವು ನಾಟಕಗಳನ್ನು ಬರೆದು ಪ್ರದರ್ಶಿಸಿದವ. ಇಂದು ತುಳು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಭಾಗ್ಯ ನನ್ನ ಹಿರಿತನ. ನಾರಾಯಣ ಸ್ವಾಮಿಗಳು ಬರೇ ಗುರುಗಳಲ್ಲ. ನಮ್ಮಲ್ಲಿ ಗುರುಗಳು ಬೇಕಾದಷ್ಟಿದ್ದಾರೆ. ಅವರೋರ್ವ ಬ್ರಹ್ಮಶ್ರೀಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಅವರಂತೂ ಬ್ರಾಹ್ಮಣ ನಿಗೂ ಬ್ರಹ್ಮಜ್ಞಾನಿ ಗುರುಗಳು. ಇಂತಹ
ಮೇಧಾವಿಗಳ ತತ್ವಾಚರಣೆ ನಾಟಕ ಗಳಲ್ಲಿ ಮೂಡಬೇಕು. ಇವರ ತತ್ವ ಜ್ಞಾನದ ಅರಿವು ನಾಟಕಗಳ ಮೂಲಕ ಪ್ರಚಾರ ಆದಾಗಲೇ ನಮ್ಮಲ್ಲಿನ ಬೇಧಗಳು ಮರೆಯಾಗಿ, ಸಾಮರಸ್ಯದ ಬದುಕು ರೂಪಿಸಲು ಸಾಧ್ಯ ಎಂದರು.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಹಿಂಗಾರ ಅರಳಿಸಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಕಲಾವಿದರು ವರ್ತ ಮಾನದ ಮಹಾಶಕ್ತಿಯಾಗಿದ್ದು, ಸಹ ಭಾಗಿತ್ವ ಮತ್ತು ವಚನ ಬದ್ಧತೆಯಿಂದ ಎಲ್ಲವೂ ಸಾಧ್ಯ ಎನ್ನುವುದನ್ನು ನಮ್ಮವ ರಾದ ದಯಾನಂದ ಪೂಜಾರಿ ಕಲ್ವಾ
ಮತ್ತು ಅಶೋಕ್ ಸಸಿಹಿತ್ಲು ತೋರ್ಪ ಡಿಸಿ ಸಾಧನೆ ಮೆರೆದಿದ್ದಾರೆ. ಅವರು ಸ್ಪರ್ಧೆಯ ನೆಪದಲ್ಲಾದರೂ ಕಲಾವಿ ದರನ್ನು ಒಗ್ಗೂಡಿಸಿದ ರೀತಿ, ನೂರಾರು ಕಲಾವಿದರಿಗೆ ಆಸರೆಯನ್ನೂ, ನವ ಪೀಳಿಗೆಯಲ್ಲಿ ಮಾತೃಭಾಷೆ ತುಳು ಭಾಷೆಯನ್ನೂ ಕಲಿಯುವ ಕೀರ್ತಿಗೆ ಪಾತ್ರರು. ಕಲಾವಿದರನ್ನು ಒಗ್ಗೂ
ಡಿಸಿದ ಹಿರಿಮೆ ಬಿಲ್ಲವರ ಅಸೋಸಿ ಯೇಶನ್‌ಗಿದೆ ಎನ್ನುವ ಅಭಿಮಾನ ನನಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರು, ನಾವೆಲ್ಲರೂ ಒಂದು ನಾವೆಲ್ಲರೂ ಬಂಧು ಎಂಬಂತೆ, ಭಾವನಾತ್ಮಕ ಮನೋಭಾವದಿಂದ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆ ಯುವ ಸಂಸ್ಥೆ ನಮ್ಮದಾಗಿದೆ. ತುಳು ನಾಟಕ ಸ್ಪರ್ಧೆಗೂ ವಿಠಲ ಎಸ್. ಪೂಜಾರಿ ಭಾಯಂದರ್ ತನ್ನ ಮೊದಲ ಪ್ರಾಯೋಜಕತ್ವಕ್ಕೆ ಪ್ರೋತ್ಸಾಹಿಸಿದಂತೆ ಎನ್. ಎಂ. ಸನಿಲ್ ಅವರಂತಹ ಹಿರಿಯ ಮುಂದಾಳುಗಳು ಇಂತಹ ಕಾರ್ಯಕ್ರಮಗಳಿಗೆ ತಮ್ಮನ್ನು ಬಳಸಿಕೊಳ್ಳಬೇಕೆಂದು ತಾವಾಗಿ ಹೇಳಿ ಪ್ರೋತ್ಸಾಹಿಸಿ ಕಲಾವಿದರನ್ನು ಹುರಿ ದುಂಬಿಸುತ್ತಿರುವುದು ಅಭಿನಂದ ನೀಯ. ಇಂತಹ ಕಾರ್ಯಕ್ರಮಕ್ಕೆ ಒಳ್ಳೆಯ ಮನೋಭಾನೆಗಳುಳ್ಳ ಸಜ್ಜ ನರ ಸಹಯೋಗವೇ ಮಿಗಿಲಾದದ್ದು ಎಂದು ಶುಭ ಹಾರೈಸಿದರು.
ಗೌರವ ಅತಿಥಿಗಳಾಗಿ ರಂಗ ಕಲಾವಿದ ಮೋಹನ್ ಮಾರ್ನಾಡ್ ಹಾಗೂ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ. ಬಂಗೇರ, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್, ಪುರುಷೋತ್ತಮ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್ ಉಪಸ್ಥಿತರಿದ್ದರು.
ರಂಗ ಕಲಾವಿದೆಯರಾದ ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರಾವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಆರ್. ಪೂಜಾರಿ ಅವರನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ರಂಗತಜ್ಞ ಡಾ| ಭರತ್‌ಕುಮಾರ್ ಪೊಲಿಪು, ಲೇಖಕ ಓಂದಾಸ್ ಕಣ್ಣಂಗಾರ್, ಹರೀಶ್ ಕೆ. ಹೆಜ್ಮಾಡಿ ಸ್ಪರ್ಧಾ ನಿರ್ವಾಹಣೆಗೈದರು. ಮೋಹನ್ ಮಾರ್ನಾಡ್ ಅವರು 18 ನಾಟಕ ತಂಡಗಳಿಗೂ ಶುಭಹಾರೈಸಿ ಜಾಗಟೆ ಬಾರಿಸುವುದರ ಮೂಲಕ ನಾಟಕದ ಪ್ರಥಮ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಹಾಯಕ ಸಂಪಾದಕ ಹರೀಶ್ ಕೆ. ಹೆಜ್ಮಾಡಿ ಅತಿಥಿಗಳನ್ನು ಹಾಗೂ ಪುರಸ್ಕೃತರನ್ನು ಪರಿಚಯಿಸಿ ನಿರೂಪಿಸಿದರು. ಸಾಂಸ್ಕೃತಿಕ ಉಪಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವಂದಿಸಿದರು.
ಒಂದೇ ವೇದಿಕೆಯಲ್ಲಿ ವಿವಿಧ ತಂಡಗಳ ಸುಮಾರು 600 ಕಲಾವಿದರ ಒಗ್ಗೂಡುವಿಕೆಯಲ್ಲಿ ನಡೆಸಲ್ಪಡುವ 3 ದಿನಗಳ ನಾಟಕೋತ್ಸವದಲ್ಲಿ 18 ನಾಟಕಗಳು ಪ್ರದರ್ಶನಗೊಳ್ಳಲಿವೆ. ಮುಂಬಯಿ ರಂಗ ಭೂಮಿಯನ್ನು ಶ್ರೀಮಂತಗೊಳಿಸಿದ ಪಂಚಕನ್ಯೆ ಕಲಾವಿದೆಯರಾದ ಚಂದ್ರಾಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಪೂಜಾರಿ ಅವರ ಏಕಕಾಲದ ಸಮ್ಮಾನವು ಕಲಾವಿದೆಯರನ್ನು ಪ್ರೋತ್ಸಾÕಹಿಸುವ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು. ಸಾಂಸ್ಕೃತಿಕ ಸಮಿತಿಯ ದಯಾನಂದ ಆರ್. ಪೂಜಾರಿ ಮತ್ತು ಅಶೋಕ್ ಕುಕ್ಯಾನ್ ಸಸಿಹಿತ್ಲು ಅವರ ಅವಿರತ ಶ್ರಮದ ಶಿಸ್ತುಬದ್ಧ ಮತ್ತು ಕ್ರಮಬದ್ಧ ಸಂಯೋಜನೆಗೆ ಎಲ್ಲರೂ ಪ್ರಶಂಸಿಸಿದರು.
ಪಂಚತಾರ ನಟನಾ ಕನ್ಯೆಯರಿಗೆ ಇಂತಹ ವೇದಿಕೆಯ ಸಮ್ಮಾನವೇ ಶ್ರೇಷ್ಠವಾದದ್ದು. ಇಂತಹ ಹಿರಿಯ ಕಲಾವಿದರ ಅಭಿನಯ ಕಿರಿಯ ಕಲಾವಿದರಿಗೆ ಪ್ರೋತ್ಸಾಹಕವಾಗಿದೆ. ಕಿರಿಯರಿಗೆ ಹಿರಿಯ ಕಲಾವಿದರ ಮೇಲ್ಪಂಕ್ತಿ ಆದರಣೀಯವೂ ಹೌದು. ಇದರಿಂದ ಪ್ರತಿಭಾನ್ವಿತ ಕಲಾವಿದರ ಅನಾವರಣ ಸಾಧ್ಯ. ಮುಂಬಯಿಗರು ಕಲಾಪೋಷಕರು ಮತ್ತು ಕಲೆಯನ್ನು ಸಾಕಿ ಗೌರವಿಸುವ ದೊಡ್ಡತನದ ಸದ್ಗುಣವಂತರು. ತವರೂರಲ್ಲಿ ಇಂತಹ ಮನೋಭಾವ ಮಾಯವಾಗುವಂತಿದೆ. ಅಸೋಸಿಯೇಶನ್ ವಾರ್ಷಿಕವಾಗಿ ಸುಮಾರು 400 ಯುವ ಮತ್ತು ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸು ತ್ತಿರುವುದು ಇದಕ್ಕೆ ಸಾಕ್ಷಿ.
– ಸುರೇಂದ್ರ ಕುಮಾರ್ ಹೆಗ್ಡೆ, ಅಧ್ಯಕ್ಷರು,
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ
ನಾಟಕದಿಂದ ಜೀವನ ಪರಿವರ್ತನೆ ಸಾಧ್ಯವಾಗಿದೆ. ಆದ್ದರಿಂದ ಸಂಘದೊಳಗಿನ ನಾಟಕ ಸ್ಪರ್ಧೆ ಎಲ್ಲರಿಗೂ ಪ್ರೇರಣೀಯ. ಇಂತಹ ಕಾರ್ಯಕ್ರಮ ಸಮಾಜದ ಬದಲಾವಣೆಗೆ ಪ್ರೇರಕವಾದಂತೆ ಸಂಸ್ಥೆಗೂ, ಕಲಾವಿದರಿಗೂ ಹೆಸರು ಸಿದ್ಧಿಸುವ ಯೋಜನೆಯಾಗಿದೆ. ಈ ಮೂಲಕ ಹಿರಿ ಕಿರಿಯ ಕಲಾವಿದರ ಕನಸು ನನಸಾಗಲಿ. ಸ್ಪರ್ಧೆ ಸುಗಮವಾಗಿ ಸಾಗಿ ಎಲ್ಲರಿಗೂ ಮನಾಕರ್ಷಣೆಯಾಗಿರಲಿ
– ಎಲ್. ವಿ. ಅಮೀನ್, ಮಾಜಿ ಅಧ್ಯಕ್ಷರು
ಬಿಲ್ಲವರ ಅಸೋಸಿಯೇಶನ್ ಮುಂಬಯಿ.
ನಾಟಕದ ಮೂಲಕ ಸಂಭಾಷಣೆ ಮಾಡಿಯೇ ಸಾಕಾಗಿದೆ. ನಮ್ಮನ್ನು ಹಿರಿಯ ಕಲಾವಿದರಾಗಿ ಗುರುತಿಸಿ ಸಮ್ಮಾನಿಸಿದ ತಮೆಲ್ಲರಿಗೂ ಧನ್ಯವಾದಗಳು. ಬಿಲ್ಲವ ಸಮಾಜ ಕಲಾವಿದರ ತವರುಮನೆ ಇದ್ದಂತೆ. ಇಲ್ಲಿನ ವೇದಿಕೆ ಕಲಾವಿದರ ಮನೆಯಾಗಿದೆ
– ಚಂದ್ರಾವತಿ ದೇವಾಡಿಗ ಹಿರಿಯ ರಂಗ ಕಲಾವಿದೆ.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.