ಆರೋಗ್ಯದ ಸಿದ್ಧಿಗೆ ಏನೇನು ಮಾಡಬೇಕು ಗೊತ್ತಾ?


Team Udayavani, Aug 14, 2017, 6:30 AM IST

Ban14081703SIsr.jpg

ಬೆಳಗಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು. ಯೋಗೀಶ್ವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವದಿಕ್ಕುಗಳ ಫ‌ಲವಂತಿಕೆ ಉತ್ತಮವಾಗಿದೆ.

ಈಗಾಗಲೇ ಹಲವು ವಾಸ್ತು ವಿಚಾರಗಳನ್ನು ದಿಕ್ಕುಗಳು ಹಾಗೂ ಪಂಚಭೂತಗಳ ನೆಲೆಯಲ್ಲಿ ಈ ಅಂಕಣದಲ್ಲಿ ವಿವರಿಸಲಾಗಿದೆ. ಮಾನವನ ಸಂಬಂಧವಾಗಿ ಅವನ ಚೈತನ್ಯ, ಲವಲವಿಕೆ, ಉತ್ಸಾಹಗಳೆಲ್ಲ ವಾಸ್ತುವಿನ ಆವರಣದಲ್ಲಿ ತಮ್ಮ ಶಕ್ತಿ ಅಥವಾ ದೌರ್ಬಲ್ಯಗಳನ್ನು ಪಡೆಯುತ್ತವೆ. ಇಡೀ ವಿಶ್ವವು ಒಂದು ಶಕ್ತಿಯ ಸಕಾರಾತ್ಮಕ, ನಕಾರಾತ್ಮಕ ಹೊಯ್ದಾಟಗಳ ನಡುವೆ ಅಳಿವು ಉಳಿವುಗಳನ್ನು ರೂಪಿಸಿಕೊಳ್ಳುತ್ತ ಇರುತ್ತದೆ. ಹೀಗಾಗಿ ವಿಶ್ವವೇ ತನ್ನ ಅಸ್ತಿತ್ವಕ್ಕಾಗಿ ನಿರಂತರವಾಗಿ ತನ್ನನ್ನು ವಿಕಸನಗೊಳಿಸಿಕೊಳ್ಳುತ್ತಿರುವಾಗ ವಿಶ್ವದ ಭಾಗವೇ ಆದ ನಾವು ಮನುಷ್ಯರು ಸಾಧಕ ಬಾಧಕಗಳ ನಡುವೆ ನಮ್ಮನ್ನು ಸಂರಕ್ಷಿಸಿ ಕೊಳ್ಳಬೇಕು.

ಇದು ಅನಿವಾರ್ಯ. ಉತ್ತರದಿಕ್ಕನ್ನು ನೀವು ಮಹತ್ವದ ಅಧ್ಯಯನದ ಸಂದರ್ಭದಲ್ಲಿ ಪರಿಣಾಮಕಾರಿಯಾದ ಬರಹದ ಸಮಯದಲ್ಲಿ ಅಥವಾ ಹೊಸದೇ ಏನನ್ನೋ ಸಂಶೋಧಿಸುವ ಸಮಯವೇ ಇರಲಿ ಮುಖ ಮಾಡಿರುವುದು ಸೂಕ್ತ. ಪೂರ್ವವೂ ಕೂಡಾ ಇದಕ್ಕೆ ಸೂಕ್ತ. ನಿಮ್ಮ ಬ್ಯುಸಿನೆಸ್‌ ಅಥವಾ ಇನ್ನೇನೋ ವ್ಯವಹಾರಿಕ ವಿಚಾರಗಳನ್ನು ನಿಮ್ಮ ಗ್ರಾಹಕರೊಡನೆ ಮಾತನಾಡುವಾಗಲೂ ಇಷ್ಟಾರ್ಥ ಸಿದ್ಧಿಗಾಗಿ ಉತ್ತರ ಅಥವಾ ಪೂರ್ವ ದಿಕ್ಕುಗಳನ್ನು ಗಮನಿಸಿ ಮುಖ ಮಾಡಿಯೇ ಮಾತಾಡಬೇಕು. ಬೆಳಗಿನ ದಿಕ್ಕು ಪೂರ್ವವಾದುದರಿಂದ ಉತ್ತರದಲ್ಲಿ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಸ್ಪಂದನವಿರುವುದರಿಂದ ಈ ದಿಕ್ಕುಗಳು ಸಕಾರಾತ್ಮಕ ಫ‌ಲಿತಾಂಶಗಳಿಗೆ ಒಳ್ಳೆಯದು ಎಂದೇ ಅನ್ನಬೇಕು. ಯೋಗೀಶ್ವರ ಶಕ್ತಿಯ ಸಂಪನ್ನತೆಯು ಒಗ್ಗೂಡಿ ಬರಲು ಉತ್ತರ ಹಾಗೂ ಪೂರ್ವದಿಕ್ಕುಗಳ ಫ‌ಲವಂತಿಕೆ ಉತ್ತಮವಾಗಿದೆ.

ಆದರೆ ಅಡುಗೆಯನ್ನು ಮಾಡುವಾಗ ಉತ್ತರ ದಿಕ್ಕಿಗೆ ಮುಖ ಮಾಡಬಾರದು. ಮಾಡುವುದಿರಲಿ ಕುಡಿಯುವುದಕ್ಕೂ ಉತ್ತರ ದಿಕ್ಕು ನಿಷೇಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ ಆಹಾರ ಸಂವರ್ಧನ ತಯಾರಿಕಾ ಪ್ರಗತಿ ಸಾಫ‌ಲ್ಯ ರುಚಿ ಪ್ರಸನ್ನತೆಗಳೆಲ್ಲ ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ ಜೀರ್ಣಕ್ರಿಯೆ ಆರೋಗ್ಯದ ಸಂವರ್ಧನೆಗಳೆಲ್ಲ ಇದು ಸೂಕ್ತ. ಒಲೆ, ಗ್ಯಾಸ್‌ ಬರ್ನರ್‌ ಇತ್ಯಾದಿಗಳೆಲ್ಲ ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿರಗೊಳ್ಳಬೇಕು. ಈ ವಿಚಾರವನ್ನು ಅಳತೆಬದ್ಧವಾಗಿ ರೂಪುಗೊಳಿಸಲು ಮನೆಯ ಖಾಲಿ ಇರುವ ಜಾಗ ಉತ್ತರ ಮತ್ತು ಪೂರ್ವ ಭಾಗದಲ್ಲಿ ವಿಸ್ತರಿಸಿಕೊಂಡಿರಲಿ. ಹೆಚ್ಚಿನ ಸೂರ್ಯ ಪ್ರಕಾಶ ಪೂರ್ವ ದಿಂದ ಒಳಹೊಮ್ಮುವಂತಿದ್ದು ಶಾಖವು ಸೂಕ್ತವಾಗಿ ಹೊರ ಹೋಗುವಂತೆ ನೈಸರ್ಗಿಕ ವಾತಾಯನ ವ್ಯವಸ್ಥೆ ಸೂಕ್ತವಾಗಿರಬೇಕು. ದೈವಿಕ ಸಮೃದ್ಧಿಗೆ ಆರೋಗ್ಯ ಚಟುವಟಿಕೆಗಳ ಗಟ್ಟಿತನಗಳಿಗೆ ಇದರಿಂದ ದಾರಿ ಲಭ್ಯ. 

ಮಾನಸಿಕ ನೆಮ್ಮದಿಗೂ ಇದರಿಂದ ದಾರಿ ಸಾಧ್ಯ. ಮಲಗುವ ಮನೆಯಲ್ಲಿ ಎಲೆಕ್ಟ್ರಾನಿಕ್‌ ಗೂಡ್ಸ್‌ ಬೇಡ. ಇದ್ದರೂ ಒಂದು ಮಿತಿ ಇರಲಿ. ಮಿತಿಮೀರಿದ ಉಪಯೋಗವೇನೇ ಇದ್ದರೂ ನಿಯಂತ್ರಿಸಿ. ಹಾಸಿಗೆಯ ಎದುರಿಗೆ ಕನ್ನಡಿಯನ್ನು ನಿಷೇಧಿಸಿ. ಇದ್ದರೂ ಕನ್ನಡಿಯನ್ನು ರಾತ್ರಿ ಬಟ್ಟೆಯಿಂದ ಮುಚ್ಚಿಡಬೇಕು. ಮನೆಯ ಎಲ್ಲಾ ಗೋಡೆಗಳಿಗೂ ಈ ಒಂದೇ ಬಣ್ಣದ ಅಲಂಕಾರ ಬೇಡ. ತುಳಸಿ ಗಿಡಗಳು ಮನೆಯ ವಾಯು ಶುದಿಟಛಿಗಾಗಿ ಈಶಾನ್ಯ ದಿಕ್ಕಿನಲ್ಲಿ ಬೆಳೆದಿರಲಿ.ಮನೆಯಲ್ಲಿ ಭಾರಿ ತೊಲೆಗಳು ಅಚ್ಚು ಅಥವಾ ಅಡ್ಡಪಟ್ಟಿಗಳಿರುವ ರೂμನ ಕೆಳಗೆ ಮಲಗಬೇಡಿ. ಭಯಾನಕ ಕನಸುಗಳಿಗೆ ಖನ್ನತೆಗಳಿಗೆ ಇದರಿಂದ ದಾರಿಯಾಗುತ್ತದೆ. ಇದೇ ರೀತಿ ಲೋಹದ ಮಂಚಗಳನ್ನು ಹಾಸಿಗೆ ಹಾಸಲು ಉಪಯೋಗಿಸಬೇಡಿ. ಹೃದಯ ವ್ಯಾಧಿಗೆ ಇದರಿಂದ ದಾರಿಯಾಗುತ್ತದೆ.

ಮೆದುಳಿಗೆ ಬಾಧೆ. ಮಂಚಗಳು ಕಟ್ಟಿಗೆಯದೇ ಇರಲಿ. ಈಶಾನ್ಯದ ಕಡೆ ಬಸುರಿ ಹೆಂಗಸರು ಮಲಗಿರಲಿ. ಉತ್ತರದ ಕಡೆ ತಲೆ ಇಡುವುದು ಬೇಡ. ಇವರೇ ಎಂದೆಲ್ಲ. ಯಾರಿಗೂ ಉತ್ತರ ದಿಕ್ಕಿನತ್ತ ಮಲಗುವುದು ಬೇಡ. ಕಾಂತೀಯವಾದ ಉದ್ವಿಗ್ನ ತರಂಗಗಳು ಅಶಾಂತಿಗೆ ಅಪ್ರಸನ್ನತೆಗೆ ಉದ್ವಿಗ್ನತೆ ತುಂಬಿದ ಮನೋಸ್ಥಿತಿಗೆ ಕಾರಣವಾಗುತ್ತದೆ.ಉತ್ತರ ಮತ್ತು ಪೂರ್ವ ದಿಕ್ಕಿನ ಕಿಟಕಿಗಳು ತೆರೆದಿರಲಿ. ಹೊರಗಿನ ಜನ ಕೈ ಹಾಕದಂತೆ ಉತ್ತಮ ಜಾಲರಿ ಸಂಯೋಜನೆಗೊಂಡಿರಲಿ.

ಮೊ: 8147824707

ಅನಂತಶಾಸ್ತ್ರಿ

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.