ಇಂದು ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ
Team Udayavani, Aug 14, 2017, 7:45 AM IST
ಪುತ್ತೂರು : ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸ್ವಾತಂತ್ರ ದಿನ ಸೋಮವಾರ ಹಾಗೂ ಮಂಗಳವಾರ ಒಟ್ಟಿಗೆ ಬಂದಿರು ವುದರಿಂದ ಅಂಗಡಿ – ಮುಂಗಟ್ಟುಗಳು, ಮಾರುಕಟ್ಟೆ ಹಾಗೂ ಮನೆ ಮನಗಳಲ್ಲಿ ಉತ್ಸವದ ಸಂಭ್ರಮ ಮನೆ ಮಾಡಿದೆ.
ಪುಟಾಣಿಗಳಿಗೆ ಶ್ರೀಕೃಷ್ಣ ವೇಷ ಪರಿಕರ, ಹೊಸ ವಸ್ತ್ರ, ಹಬ್ಬದೂಟದ ಸಾಮಗ್ರಿಗಳ ಖರೀದಿಗಾಗಿ ರವಿವಾರ ನಗರದ ಅಂಗಡಿ ಮುಂಗಟ್ಟುಗಳಲ್ಲಿ ಅಧಿಕ ಸಂಖ್ಯೆಯ ಗ್ರಾಹಕರು ಪಾಲ್ಗೊಂಡಿರುವುದು ಕಂಡುಬಂತು.
ಅಷ್ಟಮಿ ಲಾಡು
ಅಷ್ಟಮಿ ಸಂದರ್ಭದ ವಿಶೇಷ ಲಾಡು ಕೂಡ ಸಿಹಿತಿಂಡಿ ಮಾರಾ ಟದ ಅಂಗಡಿಗಳಲ್ಲಿ ಲಭ್ಯವಾಗುತ್ತದೆ. ಅರಳು, ಕಡ್ಲೆ ಹುಡಿ, ಏಲಕ್ಕಿ, ಬಿಳಿ ಎಳ್ಳನ್ನು ಬೆಲ್ಲದ ಪಾಕಕ್ಕೆ ಬೆರೆಸಿ ಕಟ್ಟುವ 3 ವಿಧದ ವಿಶೇಷ ಲಾಡುಗಳಿಗೆ ಹೆಚ್ಚಿಗೆ ಬೇಡಿಕೆ ಇದೆ. ಸುಮಾರು 12 ಲಾಡುಗಳ ಪ್ಯಾಕೇಟ್ ಒಂದರ 50 ರೂ.ಗೆ ಬೇಕರಿಗಳಲ್ಲಿ ಲಭ್ಯವಿದೆ.
ಆಚರಣೆಗೆ ತೊಂದರೆಯಿಲ್ಲ
ಕೆಲವು ವರ್ಷಗಳಿಗೊಮ್ಮೆ ಆಟಿ ತಿಂಗ ಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬರುತ್ತದೆ. ಹಿಂದೆ ಆಟಿ ತಿಂಗಳಲ್ಲಿ ಅಷ್ಟಮಿ ಬಂದರೆ ಆಚರಣೆ ಮಾಡುತ್ತಿರಲಿಲ್ಲ. ಆದರೆ ಬದಲಾದ ಕಾಲಘಟ್ಟದಲ್ಲಿ ಆಟಿ ತಿಂಗಳು ಅನಿಷ್ಟದ ತಿಂಗಳೆಂಬ ಜನರ ಮನಸ್ಥಿತಿಯೂ ಬದ ಲಾಗಿದ್ದು, ಪ್ರಸ್ತುತ ಆಟಿ ತಿಂಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬಂದರೂ ಆಚರಣೆಗೆ ಯಾವುದೇ ತೊಂದರೆಯಿಲ್ಲ.
ಶ್ರೀಕೃಷ್ಣ ಲೋಕ
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಲವು ಕಡೆಗಳಲ್ಲಿ ಪುಟಾಣಿಗಳು ಶ್ರೀಕೃಷ್ಣನ ವೇಷ ಧರಿಸುವ ಶ್ರೀಕೃಷ್ಣ ಲೋಕ ತೆರೆದುಕೊಳ್ಳಲಿದ್ದು, ಪ್ರಮುಖ ವಾಗಿ ಪುತ್ತೂರಿನಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ವತಿಯಿಂದ ಶ್ರೀಕೃಷ್ಣ ವೇಷಧಾರಿ ಮಕ್ಕಳ 19ನೇ ವರ್ಷದ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ನೂರಾರು ಸಂಖ್ಯೆಯ ಕೃಷ್ಣ ವೇಷಧಾರಿಗಳು ಪಾಲ್ಗೊಳ್ಳಲಿದ್ದಾರೆ.
ಮೊಸರು ಕುಡಿಕೆ
ಅಷ್ಟಮಿಯ ಅಂಗವಾಗಿ ತಾ|ನ ಅಲ್ಲಲ್ಲಿ ಮೊಸರು ಕುಡಿಕೆ ಉತ್ಸವಗಳು ನಡೆಯಲಿದ್ದು, ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಹಗ್ಗಜಗ್ಗಾಟ, ಕಂಬದಲ್ಲಿ ನಡಿಗೆ, ಅಟ್ಟಿ ಮಡಿಕೆ ಒಡೆಯುವುದು ವಿಶೇಷ. ನಗರದಲ್ಲಿ ವಿಹಿಂಪ, ಬಜರಂಗದಳದ ಸಹಯೋಗದಲ್ಲಿ ಆ. 19ರಂದು ಮೊಸರು ಕುಡಿಕೆ ಉತ್ಸವ ನಡೆಯಲಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಜನತೆ ಸಿದ್ಧಗೊಳ್ಳತ್ತಿದ್ದಾರೆ. ಎಲ್ಲಡೆ ಸಂಭ್ರಮ – ಸಡಗರ ಮನೆ ಮಾಡಿದೆ. ಹಬ್ಬದ ತಯಾರಿಗಾಗಿ ಹೂ, ಹಣ್ಣು, ತರಕಾರಿ, ಕೊಟ್ಟಿಗೆಯ ಎಲೆ ಖರೀದಿ ಭರಾಟೆಯೂ ಜೋರಾ ಗಿದೆ. ವಸ್ತುಗಳ ಬೆಲೆ ತುಸು ಏರಿಕೆಯಾಗಿದ್ದರೂ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದೆ.
ಸುಳ್ಯ: ಉತ್ಸವಕ್ಕೆ ಸಿದ್ಧತೆ
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲೂ ಕಿನ ಹಲವೆಡೆ ರವಿವಾರ ವಿವಿಧ ಸ್ಪರ್ಧೆಗಳು ನಡೆದವು. ತಾಲೂಕಿನೆಲ್ಲೆಡೆ ಅಷ್ಟಮಿಯಂದೇ ಮೊಸರು ಕುಡಿಕೆ ಉತ್ಸವ ಹಮ್ಮಿಕೊಳ್ಳುವುದರಿಂದ ಸಿದ್ಧತಾ ಕಾರ್ಯಕ್ರಮಗಳು ಜರಗಿದವು. ಅಷ್ಟಮಿ ಪ್ರಯುಕ್ತ ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳ ಖರೀದಿ, ಸಂಘ-ಸಂಸ್ಥೆಗಳು ಹಮ್ಮಿಕೊಳ್ಳುವ ಉತ್ಸಾವಚರಣೆಗೆ ಆಲಂಕಾರ ಪ್ರಯುಕ್ತ ಹೂವು ಮತ್ತಿತರ ವಸ್ತುಗಳ ಖರೀದಿ ಹೊರತುಪಡಿಸಿ ನಗರಗಳಂತೆ ಖರೀದಿ ಭರಾಟೆ ಕಂಡುಬಂದಿಲ್ಲ. ಸೋಮ ವಾರ ಮುಂಜಾನೆಯಿಂದ ತಾಲೂಕಿನೆಲ್ಲೆಡೆ ಮಕ್ಕಳಿಗೆ ಶ್ರೀಕೃಷ್ಣವೇಷ ಸ್ಪರ್ಧೆ, ಸಾರ್ವಜನಿಕರಿಗೆ ಸ್ಪರ್ಧಾಕೂಟಗಳನ್ನು ಆಯೋಜಿಸಲಾಗಿದೆ. ಸಂಜೆ 6ರಿಂದ ರಾತ್ರಿ 12ರ ವರೆಗೆ ಭಜನ ಮಂದಿರ ಸಹಿತ ದೇವಸ್ಥಾನಗಳಲ್ಲಿ ಜಾಗರಣೆ ನಡೆಯಲಿದೆ. ರಾತ್ರಿ ಅಘÂì ಪ್ರದಾನದ ಬಳಿಕ ವ್ರತಾಚರಣೆ ಕೊನೆಗೊಳ್ಳಲಿದೆ.
ಕೊಟ್ಟಿಗೆಯ ಎಲೆ
ಶ್ರೀಕೃಷ್ಣ ಜನ್ಮಾಷ್ಟಮಿಗೆ ಮನೆಗಳಲ್ಲಿ ವಿಶೇಷ ತಿಂಡಿಯಾಗಿ ಕೊಟ್ಟಿಗೆ ಮಾಡುವ ಸಂಪ್ರದಾಯವಿರುವುದರಿಂದ ತರಕಾರಿ ಅಂಗಡಿಗಳಲ್ಲಿ ಕೊಟ್ಟಿಗೆ ಮಾಡಲು ಹಲಸಿ ಎಲೆಯಿಂದ ಸಿದ್ಧಪಡಿಸಿದ ಮೂಡೆಗೆ ಹೆಚ್ಚಿನ ಬೇಡಿಕೆಯಿತ್ತು. 1 ಮೂಡೆಗೆ 5 ರೂ. ಬೆಲೆ ನಿಗದಿಯಾಗಿತ್ತು. ಉಳಿದಂತೆ ತರಕಾರಿಗಳ ವ್ಯಾಪಾರವೂ ಜೋರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.