ವೇಣೂರು ಪೊಲೀಸ್ ಠಾಣೆ: ಶಾಂತಿಸಭೆ
Team Udayavani, Aug 14, 2017, 7:20 AM IST
ವೇಣೂರು: ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಗಣೇಶೋತ್ಸವ ಹಾಗೂ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂಘ ಸಂಸ್ಥೆಗಳ ಮುಖಂಡರ ಉಪಸ್ಥಿತಿಯಲ್ಲಿ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ ಕೆ. ಅವರ ಅಧ್ಯಕ್ಷತೆಯಲ್ಲಿ ಶನಿವಾರ ಶಾಂತಿಸಭೆ ಜರಗಿತು.
ಸಭೆಯಲ್ಲಿ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ ಕೆ. ಅವರು ಮಾಹಿತಿ ನೀಡಿ, ಹಬ್ಬದ ಮೆರವಣಿಗೆ ಹಾಗೂ ವಿಗ್ರಹದ ವಿಸರ್ಜನೆ ವೇಳೆಯಲ್ಲಿ ಸಾಕಷ್ಟು ಬೆಳಕಿನ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಹಬ್ಬಗಳನ್ನು ಸರ್ವ ಧರ್ಮೀಯರು ಶಾಂತಿ, ಸೌಹಾರ್ದದಿಂದ ಆಚರಿಸುವಂತಾಗಲಿ ಎಂದರು.
ರಾತ್ರಿ 10 ಗಂಟೆ ನಿಗದಿ
ಮೈಕ್, ಸೌಂಡ್ಸ್, ಮೆರವಣಿಗೆಗಳಿಗೆ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ರಾತ್ರಿ 10 ಗಂಟೆಯೊಳಗೆ ಮೆರವಣಿಗೆಗಳನ್ನು ಮುಗಿಸಬೇಕು. ಯಾವುದೇ ಅಹಿತಕರ ಹಾಗೂ ಅಶಾಂತಿಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಳ್ಳದೆ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕೆಂದು ಅವರು ವಿನಂತಿಸಿದರು.
ಕ್ರೀಡಾಕೂಟಗಳಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆ ಕೈಗೊಳ್ಳಬೇಕು. ಮಳೆಗಾಲ ಸಮಯದಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಮಂದಿರ, ದೇವಸ್ಥಾನಗಳಿಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಜತೆಗೆ ಬ್ಯಾಂಕ್, ಫೆ„ನಾನ್ಸ್, ಸೊಸೆ„ಟಿಗಳಿಗೆ ಸೆ„ರನ್ ಅಳವಡಿಕೆ ಕಡ್ಡಾಯ ಎಂದರು. ಪೊಲೀಸ್ ಸಿಬಂದಿ ವಿಜಯ್ ಸಭೆಯನ್ನು ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.