ಬಿಜೆಪಿ ಮೂರು ಸಿಎಂಗಳಿಂದ ಮೂರು ನಾಮ!
Team Udayavani, Aug 14, 2017, 11:11 AM IST
ಕಲಬುರಗಿ: ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಬಿಜೆಪಿ ಮತ್ತು ಆರೆಸ್ಸೆಸ್ ಈ ರಾಜ್ಯದಲ್ಲಿ ಇನ್ನೆಂತಹ ಆಡಳಿತ ಕೊಡಬಲ್ಲದು, ಆ ಮೂವರು ಜನರಿಗೆ ಮೂರು ನಾಮ ಹಾಕಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು.ಆಳಂದ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರವಿವಾರ ಶಾಸಕ ಬಿ.ಆರ್. ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 110 ಕೋಟಿ ರೂ.ಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಣಾಳಿಕೆಯಲ್ಲಿ ಘೋಷಿಸಿದ 165 ಭರವಸೆಗಳ ಪೈಕಿ ಸಿದ್ದರಾಮಯ್ಯ 155ನ್ನು ಈಡೇರಿಸಿದ್ದಾರೆ. ಹಲವಾರು ಭಾಗ್ಯ ನೀಡಿದ್ದಾರೆ. ಬಿಜೆಪಿಯದ್ದು ಊಪರ್ ಶೇರವಾನಿ, ಅಂದರ್ ಪರೇಶಾನಿ ಎನ್ನುವ ಧೋರಣೆ ಇದೆ ಎಂದು ಟೀಕಿಸಿದರು.
ಸಂಸತ್‌ನಲ್ಲಿ ಮೋದಿ ಹೇಳ್ತಾರೆ, ಗುಜರಾತಿಗಳಾದ ನಮ್ಮ ಇಡೀ ಶರೀರ ವ್ಯಾಪಾರದ ಮನೋಭಾವದಲ್ಲಿದೆ ಎಂದು. ಇಂತಹ ವ್ಯಾಪಾರಿಯಿಂದ ದೇಶ ಏನನ್ನು ನಿರೀಕ್ಷಿಸಲು ಸಾಧ್ಯ? ಅದಕ್ಕಾಗಿ ಅವರಿಗೆ ರೈತರ ಸಾಲಕ್ಕಿಂತ ವ್ಯಾಪಾರಿಗಳ ಸಾಲ ಮನ್ನಾ ಮಾಡುವುದರಲ್ಲೇ ಖುಷಿ ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಭವಿಷ್ಯ ಮೋದಿ ಕೈಯಲ್ಲಿಲ್ಲ: ಕರ್ನಾಟಕ ಮತ್ತು ಕಾಂಗ್ರೆಸ್ ಭವಿಷ್ಯ ಜನರ ಕೈಯಲ್ಲಿದೆ. ಪ್ರಧಾನಿ ಮೋದಿಮತ್ತು ತಂತ್ರಗಾರ ಅಮಿತ್ ಶಾ ಕೈಯಲ್ಲಿಲ್ಲ. ನಾವು ಜನರ ಆರಾಧಕರು. ಅವರು (ಮೋದಿ, ಶಾ)ಆರೆಸ್ಸೆಸ್ ಪ್ರಚಾರಕರು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಯಾರ ಮೇಲೆ ಜಾಸ್ತಿ ಪ್ರೀತಿ?: ಕಾಂಗ್ರೆಸ್ ಮುಕ್ತ ಮಾಡ್ತಿವಿ ಎಂದು ಮೋದಿ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಧ್ಯೆ ನಡೆದ ಮಾತುಕತೆ ಜನರಿಗೆ ಗೊತ್ತೇ ಇದೆ. ಸಿದ್ದರಾಮಯ್ಯ ರೈತರ 8000 ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಆದರೆ, ಮೋದಿ ಅವರಿಗೆ ದೇಶದಲ್ಲಿ ನಡೆದ 16 ಸಾವಿರ ರೈತರ ಆತ್ಮಹತ್ಯೆ ಬಗ್ಗೆ ನೋವಿಲ್ಲ.. 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಹಿಂದೇಟು
ಹಾಕಿದರು. ಲೋಕಸಭೆಯಲ್ಲಿ ಸಚಿವ ಅರುಣ್ ಜೇಟ್ಲಿ ರೈತರ ಸಾಲವಲ್ಲ, ಯಾವುದೇ ಸಾಲ ಮನ್ನಾ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದರು. ಆದರೆ, ಮೋದಿ ಅವರು ಕಾರ್ಪೋರೇಟ್ ವಲಯದ ದೊಡ್ಡ ಬಂಡವಾಳದಾರರ 6 ಲಕ್ಷ ಕೋಟಿ ರೂ. ಮನ್ನಾ ಮಾಡಿದ್ದಾರೆ. ಹಾಗಿದ್ದರೆ ಇವರಿಗೆ ಯಾರ ಮೇಲೆ ಜಾಸ್ತಿ ಪ್ರೀತಿ ಇದೆ ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು. ಪಾಟೀಲ ತಡ ಮಾಡಿದ್ರು: ಬಿ.ಆರ್. ಪಾಟೀಲ ಅವರು ಕಾಂಗ್ರೆಸ್ ಬರುವುದು ತಡವಾಯಿತು ಎಂದು ಪಾಟೀಲ ಕಾಲೆಳೆದ ಖರ್ಗೆ, ಅವರೊಬ್ಬ ಕೆಲಸಗಾರ. ಹೀಗಾಗಿ, ತಡವಾಗಿ ಬಂದ್ರೂ ಮುಖ್ಯಮಂತ್ರಿಗಳಿಂದ ವರವಾಗಿ ಸಾಕಷ್ಟು ಅನುದಾನ ಪಡೆದ್ದಿದಾರೆ ಎಂದು ಚಟಾಕಿ
ಹಾರಿಸಿದರು.ಶಾಸಕರು ಜನಪರವಾದ ಕಾಳಜಿ ಉಳ್ಳವರಾಗಿರಬೇಕು. ಅದರಂತೆ ಮುಖ್ಯಮಂತ್ರಿಗಳು ಜನಾನುರಾಗಿ ಆಗಿರಬೇಕು. ಆಗಲೇ ಅಂದುಕೊಂಡ ಎಲ್ಲ ಕೆಲಸಗಳನ್ನು ಕಾಲಮಿತಿಯಲ್ಲಿ ಮಾಡಿ ಜನರಿಗೆ ಅನುಕೂಲ ಕಲ್ಪಿಸಲು ಸಾಧ್ಯ. ಕೆರೆ ತುಂಬುವ ಯೋಜನೆಗೆ ಆಳಂದಕ್ಕೆ 600 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ನೀಡಿದ್ದಾರೆ. ಅದನ್ನು ಬಿ.ಆರ್. ಪಾಟೀಲ ಬೆನ್ನು ಬಿದ್ದು ಮಾಡಿಸಿಕೊಂಡಿದ್ದಾರೆ. ಅಂತಹವರನ್ನು ಆಳಂದ ಜನ ಮುಂದಿನ ಚುನಾವಣೆಯಲ್ಲಿ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.