ಸಾಲು ಸಾಲು ಹಬ್ಬಗಳಿಂದಾಗಿ ಶತಕದ ಗಡಿ ದಾಟಿದ ಬಾಳೆಹಣ್ಣಿನ ಬೆಲೆ

Team Udayavani, Aug 14, 2017, 12:04 PM IST

bannana.jpg

ಬೆಂಗಳೂರು: ಶ್ರಾವಣ ಮಾಸ ಬಂತೆಂದರೆ ಹಣ್ಣುಗಳ ಬೆಲೆ ಏರುವುದು ಮಾಮೂಲಿ. ಅದರಲ್ಲೂ ಈ ಮಾಸದಲ್ಲಿ ನಡೆಯುವ ವ್ರತಾಚರಣೆ, ಪೂಜೆಗಳಿಗೆ ಅಗತ್ಯವಿರುವ ಬಾಳೆ ಹಣ್ಣಿನ ದರ ಗಗನಮುಖೀಯಾಗುತ್ತದೆ. ಆದರೆ ಈ ಬಾರಿ ಮಾರುಕಟ್ಟೆಗೆ ಏಲಕ್ಕಿ ಬಾಳೆ ಹಣ್ಣಿನ ಸರಬರಾಜು ಅಸಮರ್ಪಕವಾಗಿದೆ. ಇದರೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ತಿ, ದಸರಾ ಸೇರಿ ವಿವಿಧ ಹಬ್ಬಗಳು ಸಾಲುಸಾಲಾಗಿ ಬಂದಿರುವ ಹಿನ್ನೆಲೆಯಲ್ಲಿ ಏಲಕ್ಕಿ ಬಾಳೆಹಣ್ಣಿನ ಬೆಲೆ ನೂರರ ಗಡಿ ದಾಟಿದೆ.

ಕಳೆದ ಎರಡು ವಾರಗಳ ಹಿಂದೆ ಕೆಜಿ ಬಾಳೆಹಣ್ಣಿಗೆ ಕೇವಲ 60ರಿಂದ 70 ರೂ.ಗಳವರೆಗೆ ಇದ್ದ ಏಲಕ್ಕಿ ಬಾಳೆ ದರ ಇದ್ದಕ್ಕಿದ್ದಂತೆ 115ಕ್ಕೆ ಏರಿದೆ. ಶ್ರಾವಣ ಆರಂಭಗೊಂಡು ವರಮಹಾಲಕ್ಷ್ಮೀ ಹಬ್ಬದಿಂದಲೇ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದೀಗ ಇದು ನೂರರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಪೂರೈಕೆ ಕೊರತೆ ಕಂಡುಬಂದಲ್ಲಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬುದು ಬಾಳೆ ಮಂಡಿ ಮಾಲೀಕರ ಲೆಕ್ಕಾಚಾರ.

ಮಳೆ ಕೊರತೆ ಒಂದೆಡೆಯಾದರೆ, ಈ ಮಾಸದಲ್ಲಿ ಪೂಜೆಗೆ ಅಗತ್ಯ ಹಣ್ಣುಗಳ ಕೊರತೆ ಕಂಡು ಬರುತ್ತದೆ. ಇದು ಕೂಡ ವರ್ಷ ಪೂರ್ತಿ ಬೆಳೆಯಾಗಿರುವ ಬಾಳೆಗೆ ಬೇಡಿಕೆ ಬರಲು ಕಾರಣ. ಸೇಬು, ಮೂಸಂಬಿ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ.

ಸರಬರಾಜು ಕೊರತೆ
ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 1500 ಟನ್‌ ಬಾಳೆಹಣ್ಣಿನ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ಕೇವಲ 300ರಿಂದ 400 ಟನ್‌ ಮಾತ್ರ ಸರಬರಾಜಾಗುತ್ತಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ ರಾಜ್ಯಗಳಿಗೆ ಹೆಚ್ಚಾಗಿ ಬಾಳೆ ಹಣ್ಣನ್ನು ರಫ್ತು ಮಾಡುವ ತಮಿಳುನಾಡಿನಲ್ಲಿ ಮಳೆ ಕೊರತೆಯಿಂದ ಬಾಳೆ ಬೆಳೆ ನೆಲಕ್ಕಚ್ಚಿದ್ದು, ಕೊರತೆಗೆ ಕಾರಣ. ರಾಜ್ಯದ ಶಿವಮೊಗ್ಗ, ಶಿಕಾರಿಪುರ, ಕೊಳ್ಳೇಗಾಲ, ಕನಕಪುರ, ಚಾಮರಾಜನಗರ, ಹೊಸಪೇಟೆ ಸೇರಿ ಹಲವೆಡೆಯಿಂದ ಬೆಂಗಳೂರು ಮಾರುಕಟ್ಟೆಗೆ ಬಾಳೆ ಸರಬರಾಜಾಗುತ್ತದೆ. ಇಲ್ಲಿಯೂ ಮಳೆ ಕೊರತೆ ಬಾಧಿಸಿದ್ದು, ಸಮರ್ಪಕವಾಗಿ ಬಾಳೆ ಬೆಳೆದಿಲ್ಲ ಎನ್ನುತ್ತಾರೆ ಶ್ರೀಸರಸ್ವತಿ ಬನಾನಾ ಮರ್ಜೆಂಟ್‌ ಮಾಲೀಕ ಎಸ್‌.ಚಕ್ರಪಾಣಿ. 

ಪ್ರಸ್ತು ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರ
ಬಾಳೆ ತಳಿ    ಹೋಲ್‌ಸೇಲ್‌    ರೀಟೆಲ್‌    ಹಾಪ್‌ಕಾಮ್ಸ್‌
ಏಲಕ್ಕಿ ಬೆಳೆ    90    120    105 
ಚಂದ್ರಬಾಳೆ    60    80    78 
ಪಚ್ಚಬಾಳೆ    25    37    33
ನೇಂದ್ರ ಬಾಳೆ    60    80    78

ಟಾಪ್ ನ್ಯೂಸ್

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.