ಸ್ವಾತಂತ್ರ್ಯ ಬೇಕಿರುವುದು ಭಯದಿಂದ…


Team Udayavani, Aug 14, 2017, 7:36 AM IST

14-ANA-2.jpg

2013ರ ಎಪ್ರಿಲ್‌ ತಿಂಗಳಲ್ಲಿ ಗುಡಿಯಾ ಎನ್ನುವ ಚಿಕ್ಕ ಹುಡುಗಿ ಮನೆಗೆ ಹಿಂದಿರುಗಲೇ ಇಲ್ಲ. ಮಗಳು ಮನೆಗೆ ಬರದಿದ್ದನ್ನು ನೋಡಿ ಕಳವಳಗೊಂಡ ಆಕೆಯ ಬಡ ಪೋಷಕರು ಸಹಾಯಕ್ಕಾಗಿ ಕೆಲವು ಪೊಲೀಸರನ್ನು ಅಂಗಲಾಚಿದರು. ಆದರೆ ಪೊಲೀಸರು ಗುಡಿಯಾಳ ಅಪ್ಪ-ಅಮ್ಮಳ ಆರ್ತನಾದ ಕೇಳಿಸಿಕೊಳ್ಳದೇ, ಹೊರದಬ್ಬಿದ್ದಾರೆ. ಕೆಲವು ದಿನಗಳ ನಂತರ ಗುಡಿಯಾ ಸಿಕ್ಕಳು. ಆದರೆ ಅರಿ ಜೀವವಾಗಿ! ಆಕೆಯ ಮೇಲೆ 
ಕ್ರೂರವಾಗಿ ಅತ್ಯಾಚಾರವೆಸಗಿ, ಚಿತ್ರಹಿಂಸೆ ಕೊಟ್ಟು ನೆರೆ ಪ್ರದೇಶದ ಮನೆಯೊಂದರಲ್ಲಿ ಬಿಸುಟಲಾಗಿತ್ತು.

ಭೋಪಾಲದ ಹತ್ತಿರದ ಪ್ರದೇಶವದು. ನಾವು ತಲುಪಬೇಕಿದ್ದ ಸ್ಥಳಕ್ಕೆ ಕೆಸರು ಹಾದಿಯಲ್ಲಿ ಹೊರಟಿದ್ದೆವು. ಜೋರು ಮಳೆ ಮತ್ತು ಸಿಡಿಲುಗಳ ಅಬ್ಬರವು ಮಬ್ಬುಗತ್ತಲೆಯ ಪ್ರಭೆಯನ್ನು ಗಾಢವಾಗಿಸುತ್ತಾ ಸಾಗಿದ್ದವು. ಆ ಹಾದಿಯಲ್ಲಿ ಸುಮಾರು 100 ಮೀಟರ್‌ ಕ್ರಮಿಸಿದ ನಂತರ ನಮ್ಮ ಗಮ್ಯವನ್ನು ತಲುಪಿದೆವು. ಅದೊಂದು ಚಿಕ್ಕ ಮನೆ. ಮಳೆ ನೀರು ಹೊಕ್ಕಿದ್ದರೂ ಆ ಮನೆ ಘನಗಾಂಭೀರ್ಯವನ್ನು ಪ್ರದರ್ಶಿಸುತ್ತಾ ನಿಂತಿತ್ತು. ಅದು ಬಿಂದಿಯಾಳ ಮನೆ. 

5 ವರ್ಷದ ಬಿಂದಿಯಾಳ ಹಿಂಸಾಗ್ರಸ್ತ ಕಣ್ಣುಗಳಲ್ಲಿನ ನೋವು ಎಂಥ ಕಲ್ಲೆದೆಯ ವ್ಯಕ್ತಿಯನ್ನೂ ಕಾಡುವಂತಿತ್ತು. ಇದೇ ವರ್ಷದ ಜುಲೈ ತಿಂಗಳ ಒಂದು ಕರಾಳ ದಿನದಂದು ಮನುಷ್ಯ ರೂಪಿ ರಾಕ್ಷಸನೊಬ್ಬನಿಂದ ಬಿಂದಿಯಾ ಅತ್ಯಾಚಾರಕ್ಕೊಳಗಾಗಿದ್ದಳು. ಪೊಲೀಸರು ಅತ್ಯಾಚಾರಿಯನ್ನು ಬಂಧಿಸುವ ವಿಷಯ ಒತ್ತಟ್ಟಿ ರಲಿ, ಅತ್ಯಾಚಾರಿ ಯಾರೆಂದು ಪತ್ತೆಹಚ್ಚುವುದಕ್ಕೂ ಅವರಿಗೆ ಸಾಧ್ಯವಾಗಿಲ್ಲ. ಆ ಹುಡುಗಿ ಒಂದು ಕ್ಷಣಕ್ಕೆ ಮುಗುಳುನಕ್ಕಳು ಎನ್ನುವುದೇ ನಮ್ಮ ಪಾಲಿಗೆ ವರದಾನವಾಯಿತು. ಆದರೆ ಬಿಂದಿಯಾಳ ಕಣ್ಣುಗಳು ಮಾತ್ರ “ನನ್ನ ಮೇಲೆ ಏನು ನಡೆಯಿತು? ನಾನು ಮಾಡಿದ ತಪ್ಪೇನು?’ ಎಂಬ ಪ್ರಶ್ನೆಗಳನ್ನು ತೂರಿ ಕಾಡುತ್ತಲೇ ಇದ್ದವು. 

ನಾವೀಗ 70 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದೇವೆ. ಆಚರಿಸಲೇಬೇಕು. ಆದರೆ ಇದೇ ವೇಳೆಯಲ್ಲಿ ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಳ್ಳಲೇಬೇಕಿದೆ. ಒಂದೆಡೆ ನಾವು 1947ರ ನಂತರದಿಂದ ನಮ್ಮ ಸಾಧನೆಗಳು ಮತ್ತು ಗೆಲುವುಗಳನ್ನು ಲೆಕ್ಕ ಹಾಕುತ್ತಾ ಸಾಗುತ್ತಿದ್ದೇವಾದರೂ, ಇನ್ನೊಂದೆಡೆ ಭಾರತದ ಒಂದಿಡೀ ತಲೆಮಾರು ಭಯದ ಒತ್ತೆಯಾಳಾಗಿ ಬದುಕುತ್ತಿದೆ. ದೇಶದ ಚಿಕ್ಕ ಊರುಗಳಲ್ಲಿನ ಹೆಣ್ಣುಮಕ್ಕಳು ಕಾಮುಕರಿಂದ ಹಠಾತ್ತಾಗಿ ದಾಳಿಗೊಳಗಾಗುವ ಅಥವಾ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಭೀತಿಯಿಂದ ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಅವರಷ್ಟೇ ಅಲ್ಲ, ಮಹಾನಗರಗಳ ಗೇಟೆಡ್‌ ಕಮ್ಯುನಿಟಿಗಳ ಪೋಷಕರೂ ತಮ್ಮ ಮಗಳು(ಮತ್ತು ಮಗನೂ ಕೂಡ) ಸರಿಯಾದ ಸಮಯಕ್ಕೆ ಮನೆ ತಲುಪಲಿಲ್ಲವೆಂದರೆ ಕಳವಳಗೊಳ್ಳುತ್ತಿದ್ದಾರೆ. ಈ ಭಯ ಎಲ್ಲೆಡೆಯೂ ಕಾಣಿಸುತ್ತಿದೆ ಮತ್ತದು ಸ್ವಾತಂತ್ರ್ಯವನ್ನು ಹಂಗಿಸುತ್ತಾ ನಿಂತಿದೆ. 

ಕೆಲವು ಶಿಕ್ಷಕರೇ ರಕ್ಕಸರಾಗಿ ಬದಲಾಗಿರುವುದರಿಂದ ಇಂದು ಶಾಲಾ ತರಗತಿಗಳಲ್ಲೂ ಭಯದ ಛಾಯೆಯಿದೆ. ಮನೆ ಸನಿಹದ ಪಾರ್ಕು ಮತ್ತು ಆಟದ ಮೈದಾನಗಳಲ್ಲಿ ನಮ್ಮ ಮಕ್ಕಳ ನಗು, ಕೇಕೆ ಮಾರ್ದನಿಸುವುದು ಎಷ್ಟೋ ನಿಜವೋ, ಆ ಜಾಗಗಳು ಬೇಟೆಗಾಗಿ ಕಾದುಕುಳಿತ ವಿಕೃತಕಾಮಿಗಳ ಅಡ್ಡಾಗಳಾಗಿ ಬದಲಾಗಿವೆ ಎನ್ನುವುದೂ ಅಷ್ಟೇ ಸತ್ಯ. ಅಂಕಲ್‌ಗ‌ಳು, ಮಲತಂದೆಯರು, ಟ್ಯೂಷನ್‌ ಮಾಸ್ಟರ್‌ಗಳು, ಜಿಮ್‌ ತರಬೇತುದಾರರು, ಬಸ್‌ ಡ್ರೈವರ್‌ಗಳು, ನೆರೆಹೊರೆಯವರು…ಒಟ್ಟಲ್ಲಿ ಯಾರು, ಯಾವಾಗ ಮಕ್ಕಳ ಅತ್ಯಾಚಾರಿಗಳಾಗಿ ಬದಲಾಗುತ್ತಾರೆ ಎನ್ನುವುದನ್ನು ಕಂಡುಕೊಳ್ಳುವುದು ಬಹಳ ಕಷ್ಟವಾಗಿದೆ. ಒಂದು ದಿನ ಒಬ್ಬ ಬಡ ದರ್ಜಿಯು ರಾಕ್ಷಸನಾಗಿ ಬದಲಾದರೆ; ಮರು ದಿನ ಅವನ ಜಾಗದಲ್ಲಿ ಸುಶಿಕ್ಷಿತ ಐಟಿ ವೃತ್ತಿಪರನೊಬ್ಬ ನಿಂತಿರುತ್ತಾನೆ! ಭಾರತಮಾತೆಯು ಇಂತಹ ರಾಕ್ಷಸರಿಂದ ಸ್ವಾತಂತ್ರ್ಯವನ್ನು ನೀಡಿ ಎಂದು ಕಣ್ಣೀರಿಡುತ್ತಿದ್ದಾಳೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ದಿನಕ್ಕೆ 43 ಮಕ್ಕಳು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಒಂದು ವೇಳೆ ಈ ಸಂಗತಿ ನಮಗೆ ಸಾಂಘಿಕ ಶಕ್ತಿಯಾಗಿ ಮುನ್ನಡೆಯಲು ಪ್ರೇರೇಪಿಸದೇ ಇದ್ದರೆ, ಮತ್ಯಾವ ಸಂಗತಿಯೂ ಪ್ರೇರಣೆ ನೀಡಲಾರದು. 

 “ಭಯದ ಗಣರಾಜ್ಯ’ ಎಂದು ಕರೆಯಬಹುದಾದ ಈ ನಿಧಾನ ಮತ್ತು ದುಷ್ಟ ಬದಲಾವಣೆಯನ್ನು ನಾನು ಹಲವಾರು ವರ್ಷ 
ದಿಂದ ನೋಡುತ್ತಾ ಬಂದಿದ್ದೇನೆ. ಒಂದೊಮ್ಮೆ ಸ್ವಾತಂತ್ರ್ಯಕ್ಕೆ ನಿಜಕ್ಕೂ ಒಂದು ಅರ್ಥವಿರಬೇಕು ಎಂದಾದರೆ, ಮಕ್ಕಳು ಮತ್ತು ಅವರ ಪೋಷಕರು ಭಯದಿಂದ ಮುಕ್ತವಾದ ಭಾರತವನ್ನು ಪಡೆಯುವಂತಾಗಬೇಕು. ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರವು ಇಂದು ಸಾಂಕ್ರಾಮಿಕ ರೂಪ ಪಡೆಯುವ ಬೆದರಿಕೆ ಯೊಡ್ಡುತ್ತಿದೆ. ಹಾಗೆ ನೋಡಿದರೆ ಭಾರತವನ್ನು ಇಂದಿಗೂ ಪೀಡಿಸುತ್ತಿರುವ ಅಸಂಖ್ಯ ಅನ್ಯಾಯಗಳ, ದಬ್ಟಾಳಿಕೆಗಳ ವಿರುದ್ಧ ಪ್ರತಿಭಟಿಸುವುದು ಸುಲಭ. ಆದರೆ ಅದೇ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯದ ವಿಷಯ ಬಂದಾಗ ಮಾತ್ರ ನಾವೆಲ್ಲ ಸಾಮೂಹಿಕ ಮೌನಕ್ಕೆ ಜಾರಿಬಿಡುವ ಗುಣ ಬೆಳೆಸಿಕೊಂಡಿದ್ದೇವೆ. ಸಾಮಾಜಿಕ ಕಳಂಕದ ಸಂಕುಚಿತ ಗೋಡೆಗಳು ಪೋಷಕರು ಮತ್ತು ಬಲಿಪಶುಗಳ ತುಟಿಗಳನ್ನು ಬಿಗಿಯುತ್ತಿವೆ. ಬಹಳಷ್ಟು ಪ್ರಕರಣಗಳಲ್ಲಿ ಪೋಷಕರು ಸಮಾಜಕ್ಕೆ ಹೆದರಿ ಸುಮ್ಮನಾಗಿಬಿಡು ತ್ತಾರೆ. ಆದ್ದರಿಂದ ಅಂಕಿ ಸಂಖ್ಯೆಗಳಲ್ಲಿ ಕಾಣಿಸುತ್ತಿರುವುದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳಾಗುತ್ತಿವೆ ಎನ್ನುವುದು ನಮಗೆ ಗೊತ್ತಿದೆ. ನಾವು ಏರು ಧ್ವನಿಯಲ್ಲಿ ಹೋರಾಡಲೇಬೇಕಾದ ಸಮಯ ಬಂದಿದೆ. 

ಭಾರತಕ್ಕೆ ಪಿಡುಗಾಗಿ ಕಾಡುತ್ತಿರುವ ಹಲವಾರು ರೋಗಗ ಳಂತೆಯೇ, ಪರಿಣಾಮಕಾರಿ ಕಾನೂನು ಜಾರಿ ಅಥವಾ ಅದರ ಕೊರತೆಯೂ ಒಂದು ಮಹತ್ತರ ಬಿಕ್ಕಟ್ಟಾಗಿದೆ. ನಾಗರಿಕರು ಮತ್ತು ಚಳುವಳಿಗಾರರ ದಶಕಗಳ ಪರಿಶ್ರಮದ ಫ‌ಲವಾಗಿ 2012ರಲ್ಲಿ “ಪೋಸ್ಕೋ’ ಕಾಯ್ದೆ ಜಾರಿಗೆ ಬಂದಿತು. ಆದರೆ ಅದು ಪೋಷಕರನ್ನು ಭಯಮುಕ್ತಗೊಳಿಸುವಂತೆ, ಅವರಲ್ಲಿ ಭರವಸೆ ಮೂಡುವಂತೆ ಅನುಷ್ಠಾನವಾಗುತ್ತಿದೆಯೇ? ದುರದೃಷ್ಟವಶಾತ್‌, “ಇಲ್ಲ’. ಬೇಕಿದ್ದರೆ ಉದಾಹರಣೆಗೆ ರಾಷ್ಟ್ರ ರಾಜಧಾನಿ ದೆಹಲಿಯನ್ನೇ ನೋಡಿ. 2013ರ ಏಪ್ರಿಲ್‌ ತಿಂಗಳಲ್ಲಿ ಗುಡಿಯಾ ಎನ್ನುವ ಚಿಕ್ಕ ಹುಡುಗಿ ಮನೆಗೆ ಹಿಂದಿರುಗಲೇ ಇಲ್ಲ. ಮಗಳು ಮನೆಗೆ ಬರದಿದ್ದನ್ನು ನೋಡಿ ಕಳವಳಗೊಂಡ ಆಕೆಯ ಬಡ ಪೋಷಕರು ಸಹಾಯಕ್ಕಾಗಿ ಕೆಲವು ಪೊಲೀಸರನ್ನು ಅಂಗಲಾಚಿದರು. ಆದರೆ ಪೊಲೀಸರು ಗುಡಿಯಾಳ ಅಪ್ಪ-ಅಮ್ಮಳ ಆರ್ತನಾದ ಕೇಳಿಸಿಕೊಳ್ಳದೇ, ಹೊರದಬ್ಬಿದ್ದಾರೆ. ಕೆಲವು ದಿನಗಳ ನಂತರ ಗುಡಿಯಾ ಸಿಕ್ಕಳು. ಆದರೆ ಅರಿ ಜೀವವಾಗಿ! ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರವೆಸಗಿ, ಚಿತ್ರಹಿಂಸೆ ಕೊಟ್ಟು ನೆರೆ ಪ್ರದೇಶದ ಮನೆಯೊಂದರಲ್ಲಿ ಬಿಸುಟಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಅತ್ಯಾಚಾರಿಗಳನ್ನು ಬಂಧಿಸಲಾಯಿತು. ಮೊಕದ್ದಮೆ ಪ್ರಾರಂಭವಾಗಿ ನಾಲ್ಕು ವರ್ಷಗಳಾದ ನಂತರ, “ತಾನು ಬಾಲಾಪರಾಧಿ’ ಎಂದು ಹೇಳಿಕೊಂಡ ಆಪಾದಿತನೊಬ್ಬ ಯಶಸ್ವಿಯಾಗಿ ಹೊರಬಂದುಬಿಟ್ಟ. ನಾಲ್ಕು ವರ್ಷಗಳಾದರೂ ಮೊಕದ್ದಮೆ ಇನ್ನೂ ನಡೆಯುತ್ತಲೇ ಇದೆ. ಗುಡಿಯಾ ಮತ್ತು ಆಕೆಯ ಪೋಷಕರೀಗ ನಮ್ಮಲ್ಲಿ ಕೆಲವರ ಸಹಾಯ ಪಡೆದು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಜೀವನ ಪರ್ಯಂತ ಆ ಹುಡುಗಿ ಮತ್ತಾಕೆಯ ಅಪ್ಪ-ಅಮ್ಮ ಭಯದಲ್ಲೇ ಇರುತ್ತಾರೆ. 

ಇನ್ನು ಮಾನವ ಕಳ್ಳಸಾಗಣೆಯೆಂಬ ಸಂಘಟಿತ ಅಪರಾಧಕ್ಕೂ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೂ ಹತ್ತಿರದ ಸಂಬಂಧವಿದೆ. ದೇಶದಲ್ಲಿ ಪ್ರತಿವರ್ಷ ಸುಮಾರು 1 ಲಕ್ಷ ಮಕ್ಕಳು ಕಾಣೆಯಾಗುತ್ತಾರೆ ಎಂಬ ಅಂದಾಜಿದೆ. ಇದರಲ್ಲಿ ಅರ್ಧಕ್ಕರ್ಧ ಮಕ್ಕಳ ರಕ್ಷಣೆಯಾಗುವುದೇ ಇಲ್ಲ. ಬಹುತೇಕ ಮಕ್ಕಳು ಕಾಮಪಿಪಾಸುಗಳಿಗೆ ಲೈಂಗಿಕ ಗುಲಾಮರಾಗುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಬಲಿಪಶುಗಳಾಗುವುದು ಬಡ ಮಕ್ಕಳು ಎನ್ನುವುದು ಗಮನಿಸಬೇಕಾದ ಅಂಶ. ಈ ಪಿಡುಗು ಯಾವ ಮಟ್ಟಕ್ಕಿದೆಯೆಂದರೆ ಈ ವರ್ಷ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನೆರೆ ಪ್ರವಾಹದಿಂದ ಅನೇಕ ಕುಟುಂಬಗಳು ನೆಲೆ ಕಳೆದುಕೊಂಡವಲ್ಲ? ಅಂಥ ಬಡ ಕುಟುಂಬಗಳ ಮೇಲೆ ಕಳ್ಳಸಾಗಣಿಕೆದಾರರು ಹೊಂಚು ಹಾಕುತ್ತಿದ್ದಾರೆ ಎನ್ನುವ ಆಘಾತಕಾರಿ ವರದಿಗಳು ಬಂದಿವೆ. ವರ್ಷಗಳಿಂದ ನಾವು ಮಾನವ ಕಳ್ಳಸಾಗಣೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಕಾನೂನು ಬರಬೇಕೆಂದು ಹೋರಾಡುತ್ತಲೇ ಇದ್ದೇವೆ. ಆದರೆ ಈ ವಿಚಾರದಲ್ಲಿ ಇಂದಿಗೂ ಯಶಸ್ಸು ದೊರೆತಿಲ್ಲ. 

ಒಂದು ಸಮಾಜವಾಗಿ ನಮಗೆಲ್ಲರಿಗೂ ಸದೃಢ ಕ್ರಮದ ಅಗತ್ಯವಿದೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳು ಹೆಚ್ಚು ಸಂವೇದನಾಶೀಲರಾಗುವ ಅಗತ್ಯವಿದೆ. ಅವರೆಲ್ಲರೂ ಉತ್ತರದಾಯಿಯಾಗುವಂಥ ಮಾರ್ಗಗಳನ್ನು ನಾವು ನಿರ್ಮಿಸ ಲೇಬೇಕಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಮಾನಸಿಕ ಆರೋಗ್ಯವನ್ನು ಸುಧಾರಿಸಲು- ಕಾಳಜಿ ವಹಿಸಲು ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ವೃದ್ಧಿಸಬೇಕಿದೆ. ವಿಕೃತ ಕಾಮಿಗಳಿಂದ ಆಗುವ ಅಪಾಯಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಎಲ್ಲಾ ಶಾಲೆಗಳಲ್ಲೂ ಲೈಂಗಿಕ ಶಿಕ್ಷಣವನ್ನು ಬೋಧಿಸಬೇಕು. ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಒಬ್ಬ ಪೋಷಕರಾಗಿ ಮತ್ತು ಕುಟುಂಬ ಸದಸ್ಯರಾಗಿ ನಾವುಗಳು ಮಕ್ಕಳಿಗೆ ಆಪ್ತಸ್ನೇಹಿತರಾಗಬೇಕು. ಆ ಮೂಲಕ ಮಕ್ಕಳು ತಮ್ಮ ಮೇಲಾದ ಲೈಂಗಿಕ ಆಕ್ರಮಣಗಳ ಬಗ್ಗೆ ಮಾತನಾಡಲು ಭಯಪಡದಂಥ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳು ಭಯವಿಲ್ಲದೇ ಮಾತನಾಡುವಂಥ ವಾತಾವರಣ ನಿರ್ಮಿಸುವುದೇ, ಈ 70ನೇ ಸ್ವಾತಂತ್ರೊÂàತ್ಸವದಂದು ನಾವು ಅವರಿಗೆ ಕೊಡಬಹುದಾದ ಅತಿ ಮಹತ್ವದ ಕೊಡುಗೆ. ಬನ್ನಿ, ಮಕ್ಕಳು ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವಂತಾಗಲು ಭಾರತವನ್ನು ಸುರಕ್ಷಿತ ತಾಣವಾಗಿಸೋಣ. 

(ಲೇಖಕರು ಸತ್ಯಾರ್ಥಿ ಮಕ್ಕಳ ಫೌಂಡೇಷನ್‌ ಸ್ಥಾಪಕರು, ನೊಬೆಲ್‌ ಪುರಸ್ಕೃತ ಸಮಾಜ ಸೇವಕ)
ಕೈಲಾಶ್‌ ಸತ್ಯಾರ್ಥಿ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.