ಸ್ವಾತಂತ್ರ್ಯ ಭವಿಷ್ಯಕ್ಕೆ ಹೊಸ ಚಿಗುರು-ಹಳೆ ಬೇರು ಸಂಗಮ


Team Udayavani, Aug 15, 2017, 7:45 AM IST

hosa-chiguru.jpg

ಮಂಗಳೂರು: ಭಾರತ ದೇಶ ಬ್ರಿಟಿಷರ ದಾಸ್ಯದಿಂದ ಸ್ವತಂತ್ರ ವಾಗಿ ಈ ಆಗಸ್ಟ್‌ 15ಕ್ಕೆ 70 ವರ್ಷ ಪೂರ್ಣಗೊಳ್ಳುತ್ತಿದೆ. ಜತೆಗೆ 71ನೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ದೇಶವಿದೆ. ಸ್ವಾತಂತ್ರ್ಯಗಳಿಸಲು ಲಕ್ಷಾಂತರ ದೇಶ ಭಕ್ತರು ತಮ್ಮ ಬಲಿದಾನಗೈದರು. ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಹಸ್ರಾರು ಸೈನಿಕರು ರಾತ್ರಿ ಹಗಲೆನ್ನದೆ ದೇಶದ ಗಡಿಗಳಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದಾರೆ. ಹೀಗೆ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಬಗ್ಗೆ ದೇಶಾದ್ಯಂತ ಜನಜಾಗೃತಿಗೆ ಇದು ಸಕಾಲ. ಎಳೆಯರಲ್ಲಿ ಈ ಅರಿವನ್ನು ಮೂಡಿ ಸುವುದು ಈ ನಿಟ್ಟಿನಲ್ಲಿ ನಿರ್ಣಾಯಕವಾದ ಪ್ರಯತ್ನ.

ಈ ಹಿನ್ನೆಲೆಯಲ್ಲಿ “ಸ್ವಾತಂತ್ರ್ಯದ ಭವಿಷ್ಯ’ ಎಂಬ ಪರಿಕಲ್ಪನೆಯಡಿ “ಉದಯವಾಣಿ’ಯ ಮಂಗಳೂರು ಪ್ರಾಂತೀಯ ಕಚೇರಿಯು ಆ. 12 ರಂದು ಉದಯವಾಣಿ ಆನ್‌ಲೈನ್‌ ಜತೆಯಲ್ಲಿ ಕುದ್ರೋಳಿ ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಆ ಮೂಲಕ 71ನೇ ಸ್ವಾತಂತ್ರೋತ್ಸವವನ್ನು ಬರಮಾಡಿ ಕೊಳ್ಳಲಾಯಿತು.

ಹೊಸ ಚಿಗುರು – ಹಳೆ ಬೇರು
ಸ್ವಾತಂತ್ರ್ಯ ದಿನಾಚರಣೆಗೆ ಪೂರಕವಾಗಿ ಯುವ ಜನಾಂಗಕ್ಕೆ ಅದರಲ್ಲಿಯೂ ಭವಿಷ್ಯದ ಪ್ರಜೆಗಳಾಗುವ ಶಾಲಾ ಮಕ್ಕಳಲ್ಲಿ ದೇಶ ಪ್ರೇಮ- ದೇಶಾಭಿಮಾನದ ಚಿಂತನೆ ಮೂಡಿಸುವುದು ಪತ್ರಿಕೆಯ ಆಶಯ. ಈ ಉದ್ದೇಶದಿಂದ “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಕವಿವಾಣಿಯಂತೆ ಈ “ಸ್ವಾತಂತ್ರ್ಯದ ಭವಿಷ್ಯ’ ಸಂವಾದಕ್ಕೆ ನಿವೃತ್ತ ಬ್ರಿಗೇಡಿಯರ್‌ ಐ.ಎನ್‌. ರೈ, ಗಡಿ ಭದ್ರತಾ ದಳದ ನಿರೀಕ್ಷಕ ಸಂಜೀವ ಕುಲಾಲ್‌, ದೇಶದ ಪ್ರಥಮ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ, ಎಂಜಿನಿಯರಿಂಗ್‌ ಕ್ಷೇತ್ರದ ಪ್ರಖ್ಯಾತ ಸಾಧಕ ಪ್ರೊ| ಜಿ.ಆರ್‌. ರೈ ಹಾಗೂ ಗಾಂಧಿ ಪ್ರತಿಷ್ಠಾನದ ಪ್ರಭಾಕರ ಶ್ರೀಯಾನ್‌ ಅವರನ್ನು ಆಹ್ವಾನಿಸಲಾಗಿತ್ತು.

ಇನ್ನೊಂದೆಡೆ ಹೊಸ ಚಿಗುರು ಸ್ವರೂಪದಲ್ಲಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 10ನೇ ತರಗತಿ ಓದುತ್ತಿರುವ ಅನಿಶಾ ಮಿಶೆಲ್‌ ಸಿಕ್ವೇರಾ (ಸೈಂಟ್‌ ಆ್ಯಗ್ನೆಸ್‌), ಪ್ರತೀಕ್ಷಾ ಬಿ. (ಅಶೋಕ ವಿದ್ಯಾ ಲಯ, ಅಶೋಕನಗರ), ಹೃತ್ವಿ (ಕೆನರಾ ಗರ್ಲ್ಸ್‌ ಹೈಸ್ಕೂಲ್‌), ರಾಹುಲ್‌ ಆರ್‌. ನಾಯಕ್‌ (ಸ್ವರೂಪ ಅಧ್ಯ ಯನ ಕೇಂದ್ರ), ಶ್ರವಣ್‌ ಎ. (ಕೆನರಾ ಹೈಸ್ಕೂಲ್‌ ಉರ್ವ) ಮತ್ತು ಆರಿÌನ್‌ ಮೊಂತೇರೋ (ಪಾದುವಾ ಹೈಸ್ಕೂಲ್‌) ಸೇರಿ ಒಟ್ಟು ಆರು ಮಕ್ಕಳನ್ನು ಆಯ್ಕೆ ಮಾಡ  ಲಾಯಿತು. ಇವರ ಜತೆಗೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಆಹ್ವಾನಿತ ವಿದ್ಯಾರ್ಥಿ, ವಿದ್ಯಾರ್ಥಿನಿ ಯರು ಹಾಗೂ ಶಿಕ್ಷಕಿ ಯರು ಸ್ಫೂರ್ತಿ ಯಾಗಿ ಪಾಲ್ಗೊಂಡು ಕಾರ್ಯ ಕ್ರಮ  ವನ್ನು ಮತ್ತಷ್ಟು ಅರ್ಥ ಪೂರ್ಣ ವಾಗಿಸಿದ್ದು ವಿಶೇಷ.

ಸ್ಪಂದನಶೀಲ ಸಂವಾದ
ಸ್ವಾತಂತ್ರ್ಯ, ದೇಶ ರಕ್ಷಣೆ, ಆರೋಗ್ಯ ವಂತ ಸಮಾಜದ ನಿರ್ಮಾಣ, ಶಿಕ್ಷಣಕ್ಕೆ ಆದ್ಯತೆ, ದೇಶದ ಎಲ್ಲ ಕ್ಷೇತ್ರಗಳ ಬೆಳ ವಣಿಗೆಗಳು, ಮೂಲಸೌಕರ್ಯ, ಸ್ವತ್ಛತೆ, ಪ್ರಜೆಗಳ ಕರ್ತವ್ಯ, ಸುವ್ಯವಸ್ಥಿತ ಆಡಳಿತ ವ್ಯವಸ್ಥೆ, ಸಾಮರಸ್ಯ… ಹೀಗೆ ವಸ್ತುಶಃ ಎಲ್ಲ ಸಂಗತಿಗಳ ಚಿಂತನ ಮಂಥನ ಇಲ್ಲಿ ನಡೆಯಿತು.

ಪ್ರೊ| ಜಿ.ಆರ್‌. ರೈ ಅವರು ಕೂಡ, 1947ರ ಆಗಸ್ಟ್‌ 15ರಂದು ನಡುರಾತ್ರಿ ಮಂಗಳೂರಿನ ಸೆಂಟ್ರಲ್‌ ಮೈದಾನದಲ್ಲಿ ಪ್ರಪ್ರಥಮ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ತರುಣನಾಗಿ ಪ್ರತ್ಯಕ್ಷವಾಗಿ ವೀಕ್ಷಿಸಿದವರು. ಆ ದಿನ ಮಂಗಳೂರು ಪೂರ್ತಿ ಸಂಭ್ರಮದ ವಾತಾ ವರಣವಿತ್ತು ಎಂದು 70 ವರ್ಷಗಳ ಹಿಂದಿನ ಆ ಸಂತಸದ ಕ್ಷಣ ವನ್ನು ಮೆಲುಕು ಹಾಕಿದರು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗಳಿಗೆ ಪರಮ ಗೌರವ ನೀಡ ಬೇಕೆಂದು ಶ್ರೀಯಾನ್‌ ಕೂಡ ಮಕ್ಕಳಿಗೆ ತಿಳಿಹೇಳಿದರು.

ಉದಯವಾಣಿಗೆ ಶ್ಲಾಘನೆ
ಮುಖ್ಯ ಅತಿಥಿಗಳು ಹಾಗೂ ಆಹ್ವಾನಿತರಿಂದ ಈ ಸಂದರ್ಭದಲ್ಲಿ ಉದಯವಾಣಿಯ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು. ಸಾಮಾಜಿಕ ಸ್ಪಂದನೆ, ಜನಪರ ಕಾಳಜಿ, ಹೊಸತನದ ಚಿಂತನೆಗಳು, ಎಲ್ಲ ಕ್ಷೇತ್ರಗಳಿಗೂ ನಿರಂತರ ಪ್ರೋತ್ಸಾಹ… ಹೀಗೆ ಉದಯವಾಣಿಯು ನಿಜ ಅರ್ಥದಲ್ಲಿ ಜನಮನದ ಜೀವನಾಡಿ ಎಂಬ ಪ್ರಶಂಸೆ ಅತಿಥಿಗಳಿಂದ ಕೇಳಿಬಂತು. 

- ಮನೋಹರ ಪ್ರಸಾದ್‌

News Related Videos:
1. ಬ್ರಿಗೇಡಿಯರ್ I.N. Rai ಅವರ ಅನುಭವ…: http://bit.ly/2vXJF6T
2. Special Discussion : Part 1: http://bit.ly/2fItDHw
3. Special Discussion : Part 2: http://bit.ly/2vAaYn7
4. Special Discussion : Part 3: http://bit.ly/2vzTwz4
5. Special Discussion : Part 4: http://bit.ly/2wM2zvp
6. Special Discussion : Part 5: http://bit.ly/2uENePQ
7. Special Discussion : Part 6: http://bit.ly/2uFmQoW

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

2

Ullal: ತೊಕ್ಕೊಟ್ಟು-ಮುಡಿಪು ರಸ್ತೆಗೆ ತೇಪೆ ಕಾಮಗಾರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.