‘ಚಲ್ತಾ ಹೇ’ ಬೇಡ ‘ಬದಲ್ ಸಕ್ತಾ ಹೇ’ ಆಗಲಿ : ಮೋದಿ ಕರೆ
Team Udayavani, Aug 15, 2017, 9:01 AM IST
ಹೊಸದಿಲ್ಲಿ: 71 ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂದ ಸಂಭ್ರಮಾಚರಣೆಯಿಂದ ಆಚರಿಸಲಾಗುತ್ತಿದ್ದು, ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು.
ನಾಲ್ಕನೇ ಬಾರಿಗೆ ಕೆಂಪುಕೊಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ‘ಭಾರತ ಮುಂದಿನ 5 ವರ್ಷಗಳ ಒಳಗೆ ಭ್ರಷ್ಟಾಚಾರ, ಉಗ್ರವಾದ, ವರ್ಣಭೇದ ನೀತಿಯಿಂದ ಮುಕ್ತವಾಗಬೇಕು.ಸ್ವಚ್ಛ ಭಾರತವಾಗಬೇಕು, ಸ್ವರಾಜ್ಯದ ಕನಸು ನನಸಾಗಬೇಕು. ಇದಕ್ಕೆ ಭಾರತೀಯರೆಲ್ಲರೂ ಒಂದಾಗಿ ನ್ಯೂ ಇಂಡಿಯಾಕ್ಕಾಗಿ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.
‘ಅಪನಗದೀಕರಣ ಮತ್ತು ಸ್ವಚ್ಛ ಭಾರತ ಯೋಜನೆಗೆ ಭಾರತೀಯರೆಲ್ಲರೂ ಬೆಂಬಲ ನೀಡಿದ್ದಾರೆ. ಇದರಿಂದ ಬಹಳಷ್ಟು ಬದಲಾವಣೆ ಕಂಡು ಬಂದಿದೆ. ಅಪನಗದೀಕರಣದ ಬಳಿಕ 3 ಲಕ್ಷ ನಕಲಿ ಕಂಪೆನಿಗಳನ್ನು ಪತ್ತೆ ಹಚ್ಚಲಾಗಿದ್ದು ಈಗಾಗಲೇ 2 ಲಕ್ಷ ಕಂಪೆನಿಗಳ ಪರವಾನಿಗೆ ರದ್ದು ಮಾಡಲಾಗಿದೆ’ ಎಂದರು.
‘ಕಾಶ್ಮೀರದ ಸಮಸ್ಯೆಗೆ ಬಂದೂಕನ್ನು ಉಪಯೋಗಿಸಬೇಕೆಂದಿಲ್ಲ. ಒಂದು ಅಪ್ಪುಗೆಯ ಮೂಲಕ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬಹುದು’ ಎಂದರು.
‘ಇಡೀ ದೇಶವೆ ಜಿಎಸ್‌ಟಿ ಜಾರಿಗೆ ಬೆಂಬಲ ನೀಡಿದ್ದು, ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ’ ಎಂದರು.
”ಚಲ್ತಾ ಹೇ’ (ನಡೀತದೆ) ಎನ್ನುವ ಧೋರಣೆಯನ್ನು ಬಿಟ್ಟು ‘ಬದಲ್ ಸಕ್ತಾ ಹೇ’ (ಬದಲಾಗುತ್ತದೆ)ಅನ್ನುವ ಧೋರಣೆಯನ್ನು ನಮ್ಮದಾಗಿಸಿಕೊಳ್ಳಬೇಕು. ಆಗ ನಮ್ಮ ದೇಶ ಬದಲಾಗುತ್ತದೆ’ ಎಂದರು.
‘ಗೋರಖ್‌ಪುರದಲ್ಲಿ ಮೃತಪಟ್ಟ ಮುಗ್ಧ ಕಂದಮ್ಮಗಳ ಕುಟುಂಬದೊಂದಿಗೆ ಇಡೀ ದೇಶವೇ ನಿಲ್ಲುತ್ತದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.