ಎರಡು ದಿನ ವ್ಯಾಪಾರ-ವಹಿವಾಟು ಬಂದ್‌


Team Udayavani, Aug 15, 2017, 11:57 AM IST

hub6.jpg

ಹುಬ್ಬಳ್ಳಿ: ಇ-ಪಾವತಿ ರದ್ದತಿಗೆ ಒತ್ತಾಯಿಸಿ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ಹಾಗೂ ಎಪಿಎಂಸಿಗೆ ಒಳಪಡುವ ಎಲ್ಲ ವ್ಯಾಪಾರಸ್ಥರನ್ನು ಒಗ್ಗೂಡಿಸಿ ವಾರದೊಳಗೆ ರಾಜ್ಯಾದ್ಯಂತ ಎರಡು ದಿನಗಳ ಕಾಲ ವ್ಯಾಪಾರ-ವಹಿವಾಟು ಸಂಪೂರ್ಣ ಬಂದ್‌ ಮಾಡಲು ಎಪಿಎಂಸಿ ವರ್ತಕರು ನಿರ್ಧರಿಸಿದರು. ಸೋಮವಾರ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ (ಕೆಸಿಸಿಐ) ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಎಪಿಎಂಸಿಯ ವರ್ತಕರು ಒಕ್ಕೊರಲಿನ ನಿರ್ಣಯ ಕೈಗೊಂಡರು. 

ಎಪಿಎಂಸಿ ಕ್ರಿಯಾ ಸಮಿತಿಯ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡರ, ಬ್ಯಾಡಗಿಯ ಜಗದೀಶಗೌಡ ಪಾಟೀಲ ಮಾತನಾಡಿ, ಸರಕಾರದೊಂದಿಗೆ ನಡೆದ ಮಾತುಕತೆ ವೇಳೆ ಮುಖ್ಯ ಕಾರ್ಯದರ್ಶಿಯವರು ಸ್ಪಂದಿಸಿದ್ದರಾದರೂ, ಮಾಜಿ ಶಾಸಕ ಡಿ.ಆರ್‌. ಪಾಟೀಲರು ವ್ಯತಿರಿಕ್ತ ಹೇಳಿಕೆ ನೀಡಿ, ಮಾತುಕತೆ ವಿಫ‌ಲಗೊಳಿಸಿದರು. ರೈತರ ಹೆಸರಿನಲ್ಲಿ  ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಸಭೆ ವಿಫಲವಾಯಿತು ಎಂದರು.

ಸರ್ಕಾರಕ್ಕೆ ಬಿಸಿ ಮುಟ್ಟಿಸೋಣ: ರಾಣಿಬೆನ್ನೂರಿನ ನೀಲೇಶ, ಬ್ಯಾಡಗಿಯ ದುಂಡಪ್ಪ ಕಬ್ಬೂರ, ಹುಬ್ಬಳ್ಳಿಯ ಬಸವರಾಜ ಯಕಲಾಸಪುರ, ಗದುಗಿನ ಕಾಂತಿಲಾಲ, ರಾಜು ಕುರಡಗಿ, ರಾಜು ಗುಡಿಮನಿ, ಹಾವೇರಿಯ ಶೇಖಪ್ಪ ಗಚ್ಚಿನ, ರಾಣಿಬೆನ್ನೂರಿನ ಬಸವರಾಜ ಪಾಟೀಲ, ಮುಂಡರಗಿಯ ಕೊಟ್ರೇಶ ಅಂಗಡಿ, ಗಜೇಂದ್ರಗಡದ ವರ್ತಕರು ಮಾತನಾಡಿ, ಇ-ಪಾವತಿ ರದ್ದಾಗುವ ವರೆಗೂ ವರ್ತಕರ ನಡುವೆ ಒಡಕು ಆಗದಂತೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ.

ಎಪಿಎಂಸಿ ಕಾರ್ಮಿಕರು, ಹಮಾಲರು, ಗುಮಾಸ್ತರು, ರೈತರನ್ನು ಸೇರಿಸಿ ಹೋರಾಟ ತೀವ್ರಗೊಳಿಸೋಣ. ನಮ್ಮ ಭಾಗದ ಜನಪ್ರತಿನಿಧಿಗಳಿಗೂ ಹೋರಾಟದ ಬಗ್ಗೆ ಮನವರಿಕೆ ಮಾಡೋಣ. ಯಶಸ್ವಿಯಾಗುವವರೆಗೂ ಹೋರಾಟ ಮಾಡೋಣ, ಕಾಯ್ದೆ ಜಾರಿಗೆ ತಂದವರ ಮನೆ ಎದುರು ಧರಣಿ ನಡೆಸೋಣ. ಬೇರೆ ಬೇರೆ ದಿನಗಳಂದು ನಗರಗಳ ಬಂದ್‌ಗೆ ಕರೆ ಕೊಡೋಣ. ಎಲ್ಲ ಸರಕುಗಳನ್ನು ಎರಡು ದಿನ ಬಂದ್‌ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸೋಣ ಎಂಬ ಸಲಹೆ ನೀಡಿದರು. 

ಗದುಗಿನ ಬಿ.ಎಸ್‌. ದೇಸಾಯಿಗೌಡ್ರ ಮಾತನಾಡಿ, ರೇಮ್ಸ್‌ ನಮಗೆ ಬೇಡವೇ ಬೇಡ. ದಲ್ಲಾಳರು, ಖರೀದಿದಾರರು ಮತ್ತು ರೈತರ ನಡುವಿನ ವಹಿವಾಟಿನ ಪಾಲನ್ನು ಹಂಚಿಕೆ ಮಾಡಿಕೊಡಲು ಅದೇಕೆ ನಮಗೆ ಬೇಕು? ಕಿರಾಣಿ, ಕಾಯಿಪಲ್ಲೆ, ಕಾಳು-ಕಡಿ ವ್ಯಾಪಾರಸ್ಥರ ಬೆಂಬಲದೊಂದಿಗೆ ಗದಗ ಬಂದ್‌ ಮಾಡಲು  ಚಿಂತನೆ ನಡೆಸಲಾಗಿದೆ ಎಂದರು.

ಮಲ್ಲಿಕಾರ್ಜುನ ಮನೆ ಮುಂದೆ ಧರಣಿ: ದುಂದೂರ ಮಾತನಾಡಿ, ಇ-ಪಾವತಿ ವ್ಯವಸ್ಥೆಯಲ್ಲಿ ಸರಕು ಖರೀದಿಸಿದರೆ ಒಂದೇ ದಿನ ಹಣ ಪಾವತಿ ಮಾಡಲು ಬರುವುದಿಲ್ಲವೆಂಬುದು ಇದನ್ನು ಜಾರಿಗೊಳಿಸಿದವರಿಗೂ ಗೊತ್ತಿದೆ, ಅಧಿಕಾರಿಗಳಿಗೂ ಗೊತ್ತಿದೆ. ಆದ್ದರಿಂದ ಇ-ಪಾವತಿ ರದ್ದಾಗುವವರೆಗೂ ಎಪಿಎಂಸಿ ಮಾರುಕಟ್ಟೆ ಸಚಿವ ಮಲ್ಲಿಕಾರ್ಜುನ ಅವರ ದಾವಣಗೆರೆಯ ಮನೆ ಎದುರು ಪ್ರತಿ ಜಿಲ್ಲೆಯಿಂದ ಒಂದೊಂದು ದಿನ ಧರಣಿ ನಡೆಸಬೇಕು ಎಂದು ಸಲಹೆ ಕೊಟ್ಟರು.

ಕೆಸಿಸಿಐ ಅಧ್ಯಕ್ಷ ರಮೇಶ ಪಾಟೀಲ ಸ್ವಾಗತಿಸಿದರು. ಚನ್ನು ಹೊಸಮನಿ, ಶಿವಶಂಕರಪ್ಪ ಮೂಗಬಸ್ತ, ಸುರೇಶಗೌಡ ಪಾಟೀಲ ಸೇರಿದಂತೆ ಗದಗ, ಬ್ಯಾಡಗಿ, ಹಾವೇರಿ, ಹೊ ಳೆಆಲೂರ, ಮಹಾಲಿಂಗಪುರ, ರಾಣಿ ಬೆ ನ್ನೂರ, ದಾವಣಗೆರೆ, ವಿಜಯಪುರ, ಗದಗ, ಬೈಲಹೊಂಗಲ, ಮುಂಡರಗಿ, ಗಜೇಂದ್ರಗಡ, ನರಗುಂದ, ಹುಬ್ಬಳ್ಳಿ ಹಾಗೂ ವಿವಿಧ ವರ್ತಕರ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.   

ಟಾಪ್ ನ್ಯೂಸ್

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.