ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, Aug 15, 2017, 5:24 PM IST
ಯಾದಗಿರಿ: ಕಾರ್ಮಿಕ ವರ್ಗದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲೂಕು
ಸಮಿತಿ (ಸಿಐಟಿಯು) ಕಾರ್ಯಕರ್ತರು ಸೋಮವಾರ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ವ್ಯಾಪಿ ಕಾರ್ಮಿಕರಿಗೆ 18,000 ರೂ. ಸಮಾನ ಕನಿಷ್ಠ ವೇತನ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯ ನಿಧಿ ಮತ್ತು ಸ್ಮಾರ್ಟ ಕಾರ್ಡ್ ಯೋಜನೆ ಜಾರಿಗೊಳಿಸಬೇಕು. ಬೆಲೆ ಏರಿಕೆ ನಿಯಂತ್ರಣ ಮತ್ತು ಸಾರ್ವತ್ರಿಕ ರೇಷನ್ ವ್ಯವಸ್ಥೆ ಮಾಡಬೇಕು. ಗುತ್ತಿಗೆ ಪದ್ಧªತಿ ನಿಯಂತ್ರಣ, ಗುತ್ತಿಗೆ ಮುಂತಾದ ಕಾಯಂಯೇತರ ಕಾರ್ಮಿಕರನ್ನು ಕಾಯಂ ಗೊಳಿಸಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು. ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆ ಹಾಗೂ ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಹಾಗೂ ಹಕ್ಕುಗಳ ರಕ್ಷಣೆ ಮಾಡಬೇಕು. ಸಿ. ಸ್ಕೀಮ್ ಕಾರ್ಮಿಕರಿಗೂ ಕನಿಷ್ಟ ವೇತನಕ್ಕಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಕೇಂದ್ರ ಸರಕಾರದ ಅನುದಾನ ಕಡಿತ ನಿಲ್ಲಿಸಬೇಕು. ಗ್ರಾಂಪಂ ನೌಕರರ ಬಾಕಿ ವೇತನ ಸಮವಸ್ತ್ರ, ಕರವಸೂಲಿಗಾರರಿಗೆ ಗೇಡ್-2 ಕಾರ್ಯದರ್ಶಿಯಾಗಿ ಬಡ್ತಿ ನೀಡುವುದು. ಗುತ್ತಿಗೆ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು. ರಾಜ್ಯದ ಜಿಲ್ಲೆಯ ತಾಲೂಕಿನ ನಗರಸಭೆಗಳಲ್ಲಿನ ಕಾರ್ಮಿಕರಿಗೆ ಹೊಸ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಹಮಾಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂಬ ಬೇಡಿಕೆಗಳುಳ್ಳ ಮನವಿಯನ್ನು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿ.ಐ.ಟಿ.ಯು. ಜಿಲ್ಲಾ ಖಜಾಂಚಿ ಗಾಲಿಬಸಾಬ್ .ಎಂ.ಬೆಳಗೇರಿ, ಮುಖಂಡರಾದ ಸ್.ಎಂ.ಸಾಗರ, ಗ್ರಾಪಂ ನೌಕರ ಸಂಘದ ಜಿಲ್ಲಾ ಮುಖಂಡ ನಾಗಣ್ಣಗೌಡ ತಳಕ, ಕರ್ನಾಟಕ ಪ್ರಾಂತ ರೈತ ಸಂಘದ ಬಸವರಾಜ ಕೆ. ದೊರೆ,
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಖಜಾಂಚಿ, ಅನಿತಾ ಹಿರೇಮಠ, ಸಿ.ಐ.ಟಿ.ಯು. ಜಿಲ್ಲಾ ಉಪಧ್ಯಕ್ಷ ಶಂಕರ ಗೋಷಿ,
ಹಮಾಲ ಸಂಘದ ಜಿಲ್ಲಾಧ್ಯಕ್ಷ ಸಾಯಿಬಣ್ಣ ಮುಂಡರಗಿ, ಅಂಜಮ್ಮ ಕಂಚಗಾರಹಳ್ಳಿ, ಸರೋಜಾ ಬಳಿಚಕ್ರ, ಕವಿತಾ ಯಡ್ಡಳ್ಳಿ ಸೇರಿದಂತೆ ಇತರರಿದ್ದರು. ಶಹಾಪುರ: ಇಂದಿನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಂಡವಾಳಗಾರರ ಧೋರಣೆಗಳಿಗೆ ಹೆಚ್ಚು ನೆರವು ನೀಡುತ್ತಿದ್ದು, ಕಾರ್ಮಿಕರ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂದು (ಸಿಐಟಿಯು) ಜಿಲ್ಲಾ ಕಾರ್ಯದರ್ಶಿ ಜೈಲಾಲ ತೋಟದಮನಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹೊಸ ತಹಸೀಲ್ ಕಚೇರಿ ಎದರು ವಿವಿಧ ಬೇಡಿಕೆ ಈಡೇರಿಕೆಗೆ ಸಿಐಟಿಯು ವತಿಯಿಂದ ನಡೆಯುತ್ತಿರುವ ಹಗಲು-ರಾತ್ರಿ ಧರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶ ಮತ್ತು ರಾಜ್ಯದಲ್ಲಿ ಐ.ಸಿ.ಡಿ.ಎಸ್. ನೌಕರರು ಮಧ್ಯಾಹ್ನ ಬಿಸಿಯೂಟ, ಆರೋಗ್ಯ ಶಿಕ್ಷಣ ಮೊದಲಾದ ಯೋಜನೆ ಅಡಿಯಲ್ಲಿ ಲಕ್ಷಾಂತರ ಅಂಗನವಾಡಿ, ಬಿಸಿಯೂಟ, ಆಶಾ ನೌಕರರು ಯಾವುದೇ ಕನಿಷ್ಠ ಕೂಲಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. 43 ಹಾಗೂ 45ನೇ ಭಾರತೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಈ ಬಗ್ಗೆ ಚರ್ಚಿಸಿ ಈ ವಿಭಾಗದ ಕಾರ್ಮಿಕರನ್ನು ಪರಿಗಣಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಆದರೂ
ಸರ್ಕಾರಗಳು ಈ ಬಗ್ಗೆ ಕ್ರಮವಹಿಸಿಲ್ಲ. ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ನೀಡುತ್ತಿದ್ದ ಅನುದಾನದಲ್ಲಿ ಅರ್ದದಷ್ಟು
ಕಡಿತ ಮಾಡಲಾಗಿದೆ. ಈ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ವೇತನಗಳು ಅನ್ವಯಿಸಬೇಕು ಎಂಬುದು ಸಿಐಟಿಯು ಸಂಘಟನೆಯ ಆಗ್ರಹವಾಗಿದೆ. ಸಿಐಟಿಯು ರಾಜ್ಯ ಸಮಿತಿ ಕರೆಯ ಮೇರೆಗೆ ಎಲ್ಲಾ ಕಾರ್ಮಿಕ ವರ್ಗದ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕು ಮಟ್ಟ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ, ಹಗಲು ರಾತ್ರಿ ಧರಣಿ ಮುಖಾಂತರ ವಿವಿಧ ಬೇಡಿಕೆ ಈಡೇರಿಕೆಗೆ ಧರಣಿನಿರತ ಕಾರ್ಯಕರ್ತರಿಂದ ಒತ್ತಾಯಿಸಲಾಗುತ್ತಿದೆ ಎಂದರು. ಕನಿಷ್ಟ 18,000 ಸಮಾನ ವೇತನ ನೀಡಬೇಕು. ಬೆಲೆ
ಏರಿಕೆ ನಿಯಂತ್ರಣ ಮತ್ತು ಸಾರ್ವತ್ರಿಕ ರೇಷನ್ ವ್ಯವಸ್ಥೆಗಾಗಿ, ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯನಿ ಧಿ ಮತ್ತು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೆ, ಗುತ್ತಿಗೆ ಪದ್ಧತಿ ನಿಯಂತ್ರಣ ಮುಂತಾದ ಕಾಯಂಯೇತರ ಕಾರ್ಮಿಕರ ಖಾಯಂಗಾಗಿ ಶಾಸನಕ್ಕಾಗಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರುದ್ಧ, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಗೆ ಶಾಸನಕ್ಕಾಗಿ ಹಾಗೂ ಕಾರ್ಮಿಕ ಕಾನೂನುಗಳ ಕಟ್ಟು ನಿಟ್ಟಾಗಿ ಜಾರಿಗಾಗಿ, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ, ಕಾರ್ಪೋರೇಟ ಬಂಡವಾಳದ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿ ಸಿ, ಸ್ಕೀಂ ಕಾರ್ಮಿಕರಿಗೂ ಕನಿಷ್ಠ ವೇತನಕ್ಕಾಗಿ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಕೇಂದ್ರ ಸರಕಾರದ ಅನುದಾನ ಕಡಿತ ವಿರೋಧಿಸಿ, ಗ್ರಾಮ ಪಂಚಾಯತಿ ನೌಕರರ ಬಾಕಿ ವೇತನ ಪಾವತಿ ಮಾಡಬೇಕು ಹಾಗೂ ಪಂಪ್ ಆಪರೇಟರಗಳಿಗೆ ಬ್ಯಾಟರಿ ಮತ್ತು ಸಮವಸ್ತ್ರ ಕೊಡಬೇಕು ಮತ್ತು ಕರ ವಸೂಲಿಗಾರರಿಗೆ ಬಡ್ತಿ ನೀಡಬೇಕು. ಉಳಿದ ಸಿಬ್ಬಂದಿಗಳಿಗೆ ಅನುಮೋದನೆ, ಗುತ್ತಿಗೆ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಹಾಗೂ ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಕರ್ಯಗಳನ್ನು ಒದಗಿಸಬೇಕು. ಶಹಾಪುರ ತಾಲೂಕಿನ 122 ಕೇಂದ್ರಗಳಿಗೆ ತಕ್ಷಣ ಸಿಲಿಂಡರ್ (ಗ್ಯಾಸ್) ಒದಗಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ, ರಾಜೇಶ್ವರಿ ಶಿರವಾಳ, ಕಾರ್ಯದರ್ಶಿ
ಮಡಿವಾಳಮ್ಮ ಹೂಗಾರ, ಸುನಂದ ಹಿರೇಮಠ, ಯಮನಪ್ಪ ಔರಾದ, ನೀಲಕಂಠ, ಭೀಮಾಶಂಕರ, ಮಲ್ಲಯ್ಯ ಲಂಪಲ್ಲಿ,
ಎಸ್.ಎಮ್. ಸಾಗರ, ದಾವಲಸಾಬ ನದಾಫ, ಹೊನ್ನಪ್ಪ ಮಾನ್ಪಡೆ, ತಮ್ಮಣ್ಣ, ನಿಂಗಣ್ಣ ಇತರರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.