ಸಂಸದ ಡಿ.ಕೆ.ಸುರೇಶ್ಗೆ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ
Team Udayavani, Aug 16, 2017, 11:30 AM IST
ಬೆಂಗಳೂರು: ಸಂಸದ ಡಿ.ಕೆ.ಸುರೇಶ್ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಭೂಗತ ಪಾತಕಿ ರವಿಪೂಜಾರಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ ನಂಬರಿನ ಮೂಲ ಪತ್ತೆಗಾಗಿ ಠಾಣೆ ಪೊಲೀಸರು ಸೈಬರ್ ಪೊಲೀಸರ ನೆರವು ಕೋರಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ದಿನವೇ ರವಿಪೂಜಾರಿ ಹೆಸರಿನಲ್ಲಿ ಸಂಸದ ಡಿ.ಕೆ.ಸುರೇಶ್ ಕಚೇರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆ ಸಮಯದಲ್ಲಿ ಸುರೇಶ್ ಕಚೇರಿಯಲ್ಲಿ ಇರಲಿಲ್ಲ. ಕಚೇರಿ ಸಿಬ್ಬಂದಿ ಅರುಣ್ ದೇವ್ ಎನ್ನುವವರು ಕರೆ ಸ್ವೀಕರಿಸಿದ್ದರು.
ಫೋನ್ ಮಾಡಿದ ವ್ಯಕ್ತಿ ಮೊದಲು ಹಿಂದಿಯಲ್ಲಿ ಮಾತನಾಡಿ ತನ್ನನ್ನು ರವಿಪೂಜಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಆ ನಂತರ ಸುರೇಶ್ ಎಲ್ಲಿದ್ದಾರೆ ಎಂದು ವಿಚಾರಿಸಿದ. ಆ ವೇಳೆಯಲ್ಲಿ ಸುರೇಶ್ ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದುದರಿಂದ ಅವರ ಆಪ್ತ ಸಹಾಯಕ ವಿನಯ್ಗೆ ಕರೆ ಮಾಡುವಂತೆ ಸೂಚಿಸಿದ ಅರಣ್, ವಿನಯ್ ನಂಬರ್ ಕೊಟ್ಟಿದ್ದಾರೆ.
ಆದರೆ, ಮೊಬೈಲ್ಗೆ ಯಾವುದೇ ಕರೆಗಳು ಬಂದಿಲ್ಲ. ಸ್ಥಿರ ದೂರವಾಣಿಗೆ ಬಂದಿರುವ ಕರೆಯಲ್ಲಿ 14 ಸಂಖ್ಯೆಯ ಒಂದು ನಂಬರ್ ದಾಖಲಾಗಿದೆ. ಅದು ಕಂಪ್ಯೂಟರ್ ಕರೆ ಎನ್ನಲಾಗಿದೆ. ಆದರೆ, ಕರೆ ಮಾಡಿದ ವ್ಯಕ್ತಿ ಯಾರು? ಎಲ್ಲಿಂದ ಕರೆ ಮಾಡಿದ್ದ ಎನ್ನುವುದು ಗೊತ್ತಾಗಿಲ್ಲ. ಅದು ಹುಸಿ ಕರೆ ಇರಬಹುದು.
ಆದರೆ, ಕರೆ ಮಾಡಿದ ವ್ಯಕ್ತಿ ರವಿಪೂಜಾರಿ ಎಂದು ಹೇಳಿಕೊಂಡಿದ್ದರಿಂದ ಸದ್ಯ ರವಿಪೂಜಾರಿ ವಿರುದ್ಧವೇ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದರು. ಘಟನೆ ಕುರಿತು ಸುರೇಶ್ ಕಚೇರಿ ಸಿಬ್ಬಂದಿ ಅರುಣ್ದೇವ್ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ ಎಂದು ಸದಾಶಿವನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.