ಮೀರಾ-ಭಾಯಂದರ್‌ ದಕ್ಷಿಣ ಭಾರತೀಯ ಬಿಜೆಪಿ:ಸಾಂಸ್ಕೃತಿಕ ಕಾರ್ಯಕ್ರಮ


Team Udayavani, Aug 16, 2017, 12:14 PM IST

15-Mum05a.jpg

ಮುಂಬಯಿ: ನಿಸ್ವಾರ್ಥ ಕಾರ್ಯ ಕರ್ತರು ಪಕ್ಷ ಬೆಳವಣಿಗೆಯ ಭದ್ರತೆಯ ಹರಿಕಾರರು. ಇವರು ಅಧಿಕಾರ, ಅಂತಸ್ತುಗಳಿಂದ ಸದಾ ದೂರ ಉಳಿದು ಪಕ್ಷ ನಿಷ್ಠೆಯನ್ನು ಮೇಳೈಸಿಕೊಂಡವರು. ನಾಯಕತ್ವ ಗುಣ ಎಲ್ಲರಲ್ಲೂ ಇದೆ. ಆದರೆ ಎಲ್ಲರಿಗೂ ಟಿಕೆಟ್‌ ನೀಡುವುದು ಅಸಾಧ್ಯ. ಟಿಕೆಟ್‌ ಆಕಾಂಕ್ಷಿಗಳು ತನಗೆ ಸ್ಥಾನಮಾನ ನೀಡಲಿಲ್ಲ ಎಂದು ಬೇಸರಿಸದೆ ಪಕ್ಷದ ಒಳಿತಿಗಾಗಿ ನಿಷ್ಠೆ ಮತ್ತು  ಶ್ರದ್ಧೆಯಿಂದ ದುಡಿಯಬೇಕು. ಆ. 20 ರಂದು ನಡೆಯಲಿರುವ ಮೀರಾ-ಭಾಯಂದರ್‌ ನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದೊಂದಿಗೆ ಆಯ್ಕೆ ಮಾಡಬೇಕು ಎಂದು ಸಂಸದ ಗೋಪಾಲ್‌ ಶೆಟ್ಟಿ  ಹೇಳಿದರು.

ಆ. 14 ರಂದು ಸಂಜೆ ಮೀರಾರೋಡ್‌ ಸೆವೆನ್‌ ಸ್ಕ್ವೇರ್‌ ಶಾಲಾ ಮೈದಾನದಲ್ಲಿ ಮೀರಾ- ಭಾಯಂದರ್‌ ದಕ್ಷಿಣ ಭಾರತೀಯ ಬಿಜೆಪಿ ಘಟಕ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡಿಗರಾದ ಭಾರತೀಯ ಜನತ ಪಕ್ಷದ ಅಭ್ಯರ್ಥಿಗಳಾದ ಅರವಿಂದ ಶೆಟ್ಟಿ, ರೈಮಾ ಜಯಶೀಲ ತಿಂಗಳಾಯ, ಉಷಾ ಕರ್ಕೇರ, ಗಣೇಶ್‌  ಶೆಟ್ಟಿ ಅವರನ್ನು ಅಭಿನಂದಿಸಿ, ಗೌರವಿಸಿ ಶುಭಹಾರೈಸಿದರು.

ದಕ್ಷಿಣ ಭಾರತೀಯ ಬಿಜೆಪಿ ಘಟಕದ ಅಧ್ಯಕ್ಷ ಉದಯ ಆರ್‌. ಹೆಗ್ಡೆ ಎಲಿಯಾಳ ಅವರು ಮಾತನಾಡಿ, ಪ್ರಥಮ ಬಾರಿ ಬಿಜೆಪಿಯು ದಕ್ಷಿಣ ಭಾರತೀಯರಿಗೆ ಮೀರಾ-ಭಾಯಂದರ್‌ ನಗರ ಪಾಲಿಕೆಯಲ್ಲಿ 4 ಸ್ಥಾನಗಳನ್ನು ಕಲ್ಪಿಸಿದೆ. ಪ್ರತಿಯೋರ್ವ ಅಭ್ಯರ್ಥಿಯು ಮನೆಮನೆಗೆ ಭೇಟಿನೀಡಿ ಚುನಾವಣೆ ಪ್ರಚಾರದೊಟ್ಟಿಗೆ ಕಾರ್ಯಸಾಧನೆಯನ್ನು ತಿಳಿಸಬೇಕು. ಕೇಂದ್ರ, ರಾಜ್ಯದಂತೆ ಮೀರಾ-ಭಾಯಂದರ್‌ ನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸುವಂತೆ ಮತದಾರರು ಸಹಕರಿಸಬೇಕು ಎಂದರು.

ಬಿಜೆಪಿ ಮೀರಾ-ಭಾಯಂದರ್‌ ಜಿಲ್ಲಾ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಅವರು ಮಾತನಾಡಿ, ಶಾಸಕ ನರೇಂದ್ರ ಮೆಹ್ತಾರ ಶಿಫಾರಾಸಿನಂತೆ ದಕ್ಷಿಣ ಭಾರತೀಯರಿಗೆ ಬಂಪರ್‌ ಕೊಡುಗೆ ಲಭಿಸಿದೆ. ಬಹುಮತ ವಿಜಯದೊಂದಿಗೆ ಅವರ ಋಣ ತೀರಿಸುವುದು ಪ್ರತಿಯೋರ್ವ ಅಭ್ಯರ್ಥಿಯ ಕರ್ತವ್ಯವವಾಗಿದೆ ಎಂದು ನುಡಿದು ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿ  ಶುಭಹಾರೈಸಿದರು.

ಶಾಸಕ ನರೇಂದ್ರ ಮೆಹ್ತಾ, ಅಭ್ಯರ್ಥಿ ಅರವಿಂದ ಶೆಟ್ಟಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಲೀಲಾ ಡಿ. ಪೂಜಾರಿ ಅವರು ಮಾತನಾಡಿದರು. ಲೇಖಕ ಅರುಣ್‌ ಕುಮಾರ್‌ ಶೆಟ್ಟಿ ಎರ್ಮಾಳ್‌, ಚಿತ್ರನಟ ಜಿ. ಕೆ. ಕೆಂಚನಕೆರೆ ಅವರು ಷತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಿನಿ ಶೆಟ್ಟಿ, ಮಹಾಬಲ ಸಾಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೋಟಿ-ಚೆನ್ನಯ ಯಕ್ಷಗಾನ ಬಯಲಾಟ ನಡೆಯಿತು.

 ಚಿತ್ರ-ವರದಿ : ರಮೇಶ್‌ ಅಮೀನ್‌

ಟಾಪ್ ನ್ಯೂಸ್

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.