ಒಳ್ಳೆಯವರಾಗಿ ಜನ ಪ್ರೀತಿ ಗಳಿಸಿ ಮಹೇಶ್ ಶೆಟ್ಟಿ
Team Udayavani, Aug 17, 2017, 6:20 AM IST
ಮಂಗಳೂರು: ನಾವು ಮೊದಲಿಗೆ ಒಳ್ಳೆಯ ಮನುಷ್ಯರಾಗಿ ಸಮಾಜದ ಸರ್ವರ ಪ್ರೀತಿಗೆ ಪಾತ್ರರಾಗಬೇಕು. ನಮ್ಮ ಗುರಿ ಸಾಧನೆಗೆ ಛಲ, ದೃಢ ಮನಸ್ಸು, ಆತ್ಮವಿಶ್ವಾಸ ಹಾಗೂ ಚೈತನ್ಯ ಅತಿ ಅಗತ್ಯ ಎಂದು ಮುಂಬಯಿ ಎಂ.ಟಿ. ಎಜುಕೇರ್ ಲಿಮಿಟೆಡ್ನ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ಅವರು ತಿಳಿಸಿದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವ ಅವರು ನಗರದ ಮಹೇಶ್ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪಣತೊಡು ವಂತೆ ಕರೆ ನೀಡಿದರು.
ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿ ಸುಜೀತ್ ಕೊಯೂಟ್ ಪ್ರಸ್ತಾವನೆಗೈದರು. ಮಹೇಶ್ ಪ್ರೌಢಶಾಲೆಯ
ಮುಖ್ಯಸ್ಥೆ ದೀಪಾಲಿ ಶೆಣೈ, ಉಪನ್ಯಾಸಕ ವೃಂದ ಹಾಗೂ ಸಿಬಂದಿ ಉಪಸ್ಥಿತರಿ ದ್ದರು. ಕಾಲೇಜಿನ ನಿರ್ದೇ ಶಕ/ ಪ್ರಾಂಶು
ಪಾಲ ಡಾ| ನವೀನ್ ಶೆಟ್ಟಿ ಕೆ. ಸ್ವಾಗತಿಸಿ ದರು. ಆಡಳಿತ ಮಂಡಳಿಯ ಸದಸ್ಯ ಅನಿಲ್ ಮಸ್ಕರೇನ್ಹಸ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.