ಹುಬ್ಬೇರಿಸಿದ ಪದಾಧಿಕಾರಿಗಳ ವೆಚ್ಚ
Team Udayavani, Aug 17, 2017, 11:10 AM IST
ತಿಂಗಳ ಹಿಂದಷ್ಟೇ ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗರ ವೇತನದ ವಿವರವನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಆಡಳಿತಾಧಿಕಾರಿಗಳು ಈಗ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ, ಖಜಾಂಚಿ ಅನಿರುದ್ಧ ಚೌಧರಿ ಸೇರಿ ಹಲವರ ಖರ್ಚುವೆಚ್ಚದ ವಿವರವನ್ನು ಬಹಿರಂಗಪಡಿಸಿದ್ದಾರೆ. ಈ ಮಾಹಿತಿಗಳು ಹುಬ್ಬೇರಿಸುವಂತಿವೆ. ಸರ್ವೋಚ್ಚ ನ್ಯಾಯಾಲಯದಿಂದ ಪದಚ್ಯುತಿಗೊಂಡಿರುವ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ ತಮ್ಮ ಖರ್ಚುವೆಚ್ಚವಾಗಿ ಒಂದೇ ಒಂದು ರೂಪಾಯಿ ಕೂಡ ಪಡೆದಿಲ್ಲವೆನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ.
ಹಂಗಾಮಿ ಕಾರ್ಯದರ್ಶಿ ಅಮಿತಾಭ್ ತಮ್ಮ 2 ವರ್ಷ 3 ತಿಂಗಳ (2015-16, 2016-17, 2017 ಏಪ್ರಿಲ್-ಜೂನ್) ಖರ್ಚುವೆಚ್ಚವಾಗಿ ಬಿಸಿಸಿಐನಿಂದ 1.56 ಕೋಟಿ ರೂ. ಪಡೆದಿದ್ದಾರೆ. ಆದರೆ ಖಜಾಂಚಿ ಅನಿರುದ್ಧ ಚೌಧರಿ ಇದೇ ಅವಧಿಯಲ್ಲಿ 1.71 ಕೋಟಿ ರೂ. ಪಡೆದಿದ್ದಾರೆ. ಇದು ಅಚ್ಚರಿ ಮೂಡಿಸಿದೆ. ಕಾರ್ಯದರ್ಶಿಗಿಂತ ಹೆಚ್ಚು ಹಣ ಖಜಾಂಚಿಗೆ ಪಾವತಿಯಾಗಿರುವುದು ಪ್ರಶ್ನಾರ್ಥಕವಾಗಿದೆ. ಈ ಇಬ್ಬರಿಗೆ ಹಣವನ್ನು ಹಲವು ವಿಭಾಗದಡಿ ಪಾವತಿಸಲಾಗಿದೆ. ಅಮಿತಾಭ್‌ಗೆ ವಿಮಾನವೆಚ್ಚವಾಗಿ 65 ಲಕ್ಷ ರೂ., ದಿನಭತ್ಯೆ, ಪ್ರವಾಸ ಭತ್ಯೆಯಾಗಿ 42.25 ಲಕ್ಷ ರೂ., ವಿದೇಶಿ ವಿನಿಮಯವಾಗಿ 29 ಲಕ್ಷ ರೂ., ಹೆಚ್ಚುವರಿ 1.31 ಲಕ್ಷ ರೂ. ನೀಡಲಾಗಿದೆ.
ಖಜಾಂಚಿ ಚೌಧರಿಗೆ ಬರೀ ವಿಮಾನವೆಚ್ಚ 60.29 ಲಕ್ಷ ರೂ., ದಿನಭತ್ಯೆ-ಪ್ರವಾಸಿ ಭತ್ಯೆಯಾಗಿ 75 ಲಕ್ಷ ರೂ. ನೀಡಲಾಗಿದೆ! ಮತ್ತೂಂದು ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಇದೇ ಅವಧಿಯಲ್ಲಿ 6.52 ಲಕ್ಷ ರೂ. ಪಡೆದಿದ್ದಾರೆ. ಮತ್ತೂಂದು ಕಡೆ ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಕೇವಲ 24 ಲಕ್ಷ ರೂ. ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.