ಗೋರಖ್ ಪುರ್ ದುರಂತ:ಡಾ.ಕಫೀಲ್ ಪಾತ್ರವೇನು, ಡಿಸಿ ವರದಿಯಲ್ಲಿ ಏನಿದೆ
Team Udayavani, Aug 17, 2017, 11:26 AM IST
ಲಕ್ನೋ:ಮೆದುಳು ಜ್ವರದಿಂದಾಗಿ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ಗೋರಖ್ ಪುರ್ ದುರಂತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಾಜೀವ್ ರೌಟೇಲಾ ಅವರು ನೀಡಿರುವ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಈ ಹೃದಯ ವಿದ್ರಾವಕ ಘಟನೆಗೆ ಅನಸ್ತೇಶಿಯಾ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಕುಮಾರ್, ಪ್ರಿನ್ಸಿಪಾಲ್ ಆರ್ ಕೆ ಮಿಶ್ರಾ ಹಾಗೂ ಆಕ್ಸಿಜನ್ ಖರೀದಿ ಸಮಿತಿಯ ಅಧ್ಯಕ್ಷರು ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಮಕ್ಕಳ ಸಾವಿಗೆ ಆಕ್ಸಿಜನ್ ಸರಬರಾಜು ಸಂಸ್ಥೆ ಪುಪ್ಪಾ ಸೇಲ್ಸ್ ಹೊಣೆ. ಯಾವುದೇ ಕಾರಣಕ್ಕೂ ಆಕ್ಸಿಜನ್ ಸರಬರಾಜು ಮಾಡುವುದನ್ನು ನಿಲ್ಲಿಸಬಾರದಿತ್ತು, ಯಾಕೆಂದರೆ ಪ್ರಾಣ ರಕ್ಷಣೆಯ ವ್ಯವಹಾರ ಇದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಜಿಲ್ಲಾಧಿಕಾರಿ ವರದಿಯ ಪ್ರಕಾರ, ಇಡೀ ಗೋರಖ್ ಪುರ ದುರಂತದಲ್ಲಿ ಡಾ.ಕಫೀಲ್ ಖಾನ್ ಕೂಡಾ ಸಮಾನ ಹೊಣೆಗಾರರು ಎಂದು ಹೇಳಿದೆ. ದುರಂತದ ಬಗ್ಗೆ ಜಿಲ್ಲಾಧಿಕಾರಿಯವರ ವರದಿಯನ್ನು ಸ್ವೀಕರಿಸಿರುವುದಾಗಿ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಖಚಿತಪಡಿಸಿದ್ದಾರೆ.
ಗೋರಖ್ ಪುರ ದುರಂತದಲ್ಲಿ ಡಾ.ಕಫೀಲ್ ಖಾನ್ ಅವರು ಹಲವು ಮಕ್ಕಳ ಜೀವ ಉಳಿಸಿದ್ದರು ಎಂದು ವರದಿಯಾಗಿತ್ತು. ಆದರೆ ಡಾ.ಕಫೀಲ್ ಅವರು ಆಮ್ಲಜನಕ ಸಿಲಿಂಡರ್ ಕಳ್ಳಸಾಗಣೆ ಮಾಡಿ, ತಮ್ಮ ಖಾಸಗಿ ಕ್ಲಿನಿಕ್ ಗೆ ಸಾಗಿಸುತ್ತಿದ್ದರು. ಇದರಿಂದಾಗಿ ಆಕ್ಸಿಜನ್ ಸಿಲಿಂಡರ್ ಕೊರತೆಗೆ ಕಾರಣ ಎಂಬುದಾಗಿ ಹಲವು ವರದಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.